ರಾಜ್ಯ ಸರಕಾರಿ ಉದ್ಯೋಗ 2022 ಕರ್ನಾಟಕ ಲೋಕಸೇವಾ ಆಯೋಗದಿಂದ ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ರೇಷ್ಮೆ ವಿಸ್ತರಣಾ ಅಧಿಕಾರಿ ಹುದ್ದೆಗಳಿಗೆ ಆಸಕ್ತಿ ಹಾಗೂ ಅರ್ಹತೆ ಪಡೆದ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಳಗೆ ನೀಡಲಾಗಿರುವ ಮಾಹಿತಿಯನ್ನು ಗಮನವಿಟ್ಟು ಓದಿ ಅರ್ಥ ಮಾಡಿಕೊಂಡು ತದನಂತರ ಅರ್ಜಿಯನ್ನು ಸಲ್ಲಿಸಿ.
ರೇಷ್ಮೆ ಇಲಾಖೆ ಹುದ್ದೆಗಳು ವಿವರಣೆ 2022
ಇಲಾಖೆ ನೇಮಕಾತಿಯ ಹೆಸರು :
ಕರ್ನಾಟಕ ಲೋಕಸೇವಾ ಆಯೋಗದಿಂದ ರೇಷ್ಮೆ ಇಲಾಖೆಯ ನೇಮಕಾತಿ.
ಹುದ್ದೆಗಳ ಹೆಸರು :
ರೇಷ್ಮೆ ಇಲಾಖೆಯಲ್ಲಿ ರೇಷ್ಮೆ ವಿಸ್ತರಣಾ ಅಧಿಕಾರಿ ಅಥವಾ ಗ್ರೂಪ್ ಬಿ ಹುದ್ದೆಗಳು ಖಾಲಿ ಇವೆ
ಒಟ್ಟು ಹುದ್ದೆಗಳ ಸಂಖ್ಯೆ :
ಇಲಾಖೆಯಲ್ಲಿ ಒಟ್ಟು 74 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ :
ರೇಷ್ಮೆ ವಿಸ್ತರಣಾ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೃಷಿ ಅಥವಾ ತೋಟಗಾರಿಕೆ ಅಥವಾ ರೇಷ್ಮೆ ಇಲಾಖೆಯಲ್ಲಿ ಪದವಿ ಅಥವಾ ರೇಷ್ಮೆ ಕೃಷಿಯಲ್ಲಿ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿರಬೇಕು.
ಉದ್ಯೋಗದ ಸ್ಥಳ :
ಈ ಉದ್ಯೋಗದ ನೇಮಕಾತಿಯು ಕರ್ನಾಟಕದಲ್ಲಿ ಇರುತ್ತದೆ
ವೇತನ ಶ್ರೇಣಿ :
ಹುದ್ದೆಗಳಿಗೆ ಆಯ್ಕೆಯಾದಂತ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ ಮಾಸಿಕವಾಗಿ 40,900 ರಿಂದ 78,200 ವೇತನ ಇರುತ್ತದೆ.
ವಯಸ್ಸಿನ ಮಿತಿ :
• ಸಾಮಾನ್ಯ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಬೇಕು ಗರಿಷ್ಠ 45 ವರ್ಷ ಅಭ್ಯರ್ಥಿಗಳು ಮೀರಿರಬಾರದು.
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ ಒಂದು ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳು
• ಪ್ರವರ್ಗ 2A 2B 3A 3B ಅಭ್ಯರ್ಥಿಗಳಿಗೆ 38 ವರ್ಷ ವಯಸ್ಸಿನಲ್ಲಿ ಸಡಿಲಿಕೆ ಇರುತ್ತದೆ.
ಆಯ್ಕೆ ವಿಧಾನ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನ ಇಲಾಖೆಯು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿಯ ಶುಲ್ಕ :
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 600
• 2a 2b 3a 3b ವರ್ಗದ ಅಭ್ಯರ್ಥಿಗಳಿಗೆ 300
• ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 50
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒಂದು ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ
Important Documents Required for Application Submission :
ಅರ್ಜಿ ಸಲ್ಲಿಕೆಗೆ ಬೇಕಾಗುವ ಪ್ರಮುಖ ದಾಖಲಾತಿಗಳು
1) ಅಭ್ಯರ್ಥಿಗಳ ಎಲ್ಲಾ ಅಂಕಪಟ್ಟಿಗಳು
2) ಅಭ್ಯರ್ಥಿಯ ಆಧಾರ್ ಕಾರ್ಡ್, ವೋಟರ್ ಐಡಿ,
3) ಅಭ್ಯರ್ಥಿಯ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು
4) ಅಭ್ಯರ್ಥಿಯ ಹೈದರಾಬಾದ್ ಮೀಸಲಾತಿಯ ಪ್ರಮಾಣ ಪತ್ರ
How to Apply for Silk Department Recruitment
ಅರ್ಜಿ ಸಲ್ಲಿಸುವ ವಿಧಾನ :
• ಅಭ್ಯರ್ಥಿಗಳು ಮೊದಲು ಅರ್ಜಿ ಸಲ್ಲಿಕೆಗೆ ಬೇಕಾದ ಪ್ರಮುಖ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
• ನಂತರ ಇಲಾಖೆಯ ಅಧಿಕೃತ ವೆಬ್ಸೈಟ್ ಮುಖಾಂತರ ಲಾಗಿನ್ ಮಾಡಿಕೊಂಡು ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ
• ತದನಂತರ ಅರ್ಜಿ ನಮೂನೆಯನ್ನು ಮುದ್ರಣ ಮಾಡಿಕೊಳ್ಳಿ
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ 10 ಅಗಸ್ಟ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 08 ಸೆಪ್ಟೆಂಬರ್ 2022
ಸೂಚನೆ :
ದಯವಿಟ್ಟು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವುದಕ್ಕಿಂತ ಮುಂಚೆ ಕೆಳಗಡೆ ನೀಡಲಾಗಿರುವ ಇಲಾಖೆಯ ಅಧಿಕೃತ ಅಧಿಸೂಚನೆ ಹಾಗೂ ವೆಬ್ಸೈಟ್ ಲಿಂಕ್ ಪರಿಶೀಲಿಸಿ ಹಾಗೂ ಅಲ್ಲಿ ನೀಡಿರುವ ಮಾಹಿತಿಯನ್ನು ಗಮನವಿಟ್ಟು ಓದಿ ಅರ್ಥ ಮಾಡಿಕೊಂಡು ತದನಂತರ ಅರ್ಜಿಯನ್ನು ಸಲ್ಲಿಸಿ
ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ಗಳ ಮೂಲಕ ಹಂಚಿಕೊಳ್ಳಿ ಹಾಗೂ ಉದ್ಯೋಗದ ಮಾಹಿತಿ ಬಯಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಶೇರ್ ಮಾಡಿ.