ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇಲಾಖೆ ನೇಮಕಾತಿ 2023. ಇಲಾಖೆಯಲ್ಲಿ ಖಾಲಿ ಇರುವ 636 ಶಿಶುಕ್ಷು ಹುದ್ದೆಗಳಿಗೆ 10ನೇ ತರಗತಿ ಅಥವಾ ಐಟಿಐ ಪೂರ್ಣಗೊಳಿಸಿದ ಅಭ್ಯರ್ಥಿಗಳಿಂದ ಅರ್ಜಿಯನ್ನ ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ಸಂಬಂಧಿಸಿದ ವೇತನ ಶ್ರೇಣಿ ವಿವರಣೆ / ಆಯ್ಕೆ ವಿಧಾನ / ಅರ್ಜಿ ಸಲ್ಲಿಸುವ ವಿಧಾನ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ. ಆಸಕ್ತಿ ಹಾಗೂ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಇಲಾಖೆ ನಿಗದಿಪಡಿಸಿರುವ ದಿನಾಂಕದ ಒಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ಪ್ರತಿದಿನ ಉದ್ಯೋಗದ ಮಾಹಿತಿಯನ್ನು ಪಡೆಯಲು Karnataka News Hunter ವೆಬ್ಸೈಟ್ ಗೆ ಭೇಟಿ ನೀಡಿ.
BMTC RECRUITMENT 2023
ನೇಮಕಾತಿ ಇಲಾಖೆ ಹೆಸರು :
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇಲಾಖೆ
ಹುದ್ದೆಗಳ ಹೆಸರು :
ಪೂರ್ಣಾವಧಿ ಶಿಶುಕ್ಷು
ಡಿಪ್ಲೋಮಾ ಶಿಶುಕ್ಷು
ಪದವಿ ಶಿಶುಕ್ಷು
ಒಟ್ಟು ಹುದ್ದೆಗಳ ಸಂಖ್ಯೆ :
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇಲಾಖೆಯಲ್ಲಿ ಖಾಲಿ ಇರುವ 636 ವಿವಿಧ ಹುದ್ದೆಗಳಿಗೆ ಇಲಾಖೆ ಅಧಿಸೂಚನೆಯನ್ನು ಪ್ರಕಟಿಸಿದೆ.
ವೇತನ ಶ್ರೇಣಿ ವಿವರಣೆ :
*ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತಿರುಗದೆ ಹೊಂದಿರುವ ಅಭ್ಯರ್ಥಿಗಳಿಗೆ ವೇತನ ಶ್ರೇಣಿ 6,000 ನಿಗದಿಪಡಿಸಿದೆ.
*ಐಟಿಐ ಪರೀಕ್ಷೆಯಲ್ಲಿ ಕೆಳ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ ರೂಪಾಯಿ 7000/-ನಿಗದಿಪಡಿಸಿದೆ.
• ಪದವಿಯಲ್ಲಿ ತೇರ್ಗಡೆ ಹೊಂದಿರುವ ಅಭ್ಯರ್ಥಿಗಳಿಗೆ 9000 ನಿಗದಿಪಡಿಸಿದೆ.
ಶೈಕ್ಷಣಿಕ ವಿದ್ಯಾರ್ಹತೆ:
ಪೂರ್ಣಾವಧಿ ಶಿಶುಕ್ಷು ಹುದ್ದೆಗಳಿಗೆ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಅಥವಾ ಐಟಿಐ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದು.
ಡಿಪ್ಲೋಮಾ ಶಿಶುಕ್ಷು ಹುದ್ದೆಗಳಿಗೆ ಡಿಪ್ಲೋಮೋ ಇನ್ ಸಿವಿಲ್ ಇಂಜಿನಿಯರಿಂಗ್ / ಡಿಪ್ಲೋಮೋ ಇನ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್ / ಡಿಪ್ಲೋಮೋ ಇನ್ ಕಂಪ್ಯೂಟರ್ ಸೈನ್ಸ್ / ಡಿಪ್ಲೋಮಾ ಇನ್ ಎಲೆಕ್ಟ್ರಾನಿಕ್ಸ್ ಕಮ್ಯೂನಿಕೇಶನ್ / ಡಿಪ್ಲೋಮಾ ಇನ್ ಇನ್ಫಾರ್ಮಶನ್ ಟೆಕ್ನಾಲಜಿ ವಿದ್ಯಾರ್ಹತೆ ಪೂರ್ಣಗೊಳಿಸಬೇಕು.
ಪದವಿ ಶಿಶುಕ್ಷು ಹುದ್ದೆಗಳಿಗೆ ಅಭ್ಯರ್ಥಿಗಳು ಬ್ಯಾಚುರಲ್ ಆಫ್ ಇಂಜಿನಿಯರಿಂಗ್ ( ಸಿವಿಲ್ ) / ಬ್ಯಾಚುರಲ್ ಆಫ್ ಇಂಜಿನಿಯರಿಂಗ್ – ಕಂಪ್ಯೂಟರ್ ಸೈನ್ಸ್ / ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ / ಇನ್ಫಾರ್ಮಶನ್ ಟೆಕ್ನಾಲಜಿ / ಬ್ಯಾಚುರಲ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ ಪಡೆದಿರಬೇಕು.
ವಯೋಮಿತಿ ವಿವರಣೆ :
ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಿನಾಂಕ 15 ಮಾರ್ಚ್ 2023 ರಂದು ಕನಿಷ್ಠ 16 ವರ್ಷ ತುಂಬಿರಬೇಕು ಗರಿಷ್ಠ 30 ವರ್ಷ ವಯೋಮಾನ ಮೀರಿರಬಾರದು. ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ಅಧಿಸೂಚನೆಯನ್ನು ಗಮನಿಸಿ.
ಅರ್ಜಿ ಶುಲ್ಕ :
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇಲಾಖೆ ನೇಮಕಾತಿ 2023ರ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಯು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ (ಅಗತ್ಯವಿದ್ದರೆ ಮಾತ್ರ).
ಹಂತ 4 : ಕೊನೆಯದಾಗಿ, ಭರ್ತಿ ಮಾಡಿದ ಅರ್ಜಿಯೊಂದಿಗೆ ಈ ಕೆಳಗಡೆ ನೀಡಲಾದ ಕಚೇರಿಯ ವಿಳಾಸಕ್ಕೆ ಖುದ್ದಾಗಿ ಮೂಲ ದಾಖಲೆಗಳ ಪರಿಶೀಲನೆಗೆ ಹಾಜರಾಗಬೇಕು.
ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾದ ವಿಳಾಸ :
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಅನೆಕ್ಸ್ ಬಿಲ್ಡಿಂಗ್, ಆಡಳಿತ ಇಲಾಖೆ, 5ನೇ ಮಹಡಿ, ಶಾಂತಿನಗರ ಬಸ್ ನಿಲ್ದಾಣ ಪಕ್ಕ, ಬೆಂಗಳೂರು – 560027
ಪ್ರಮುಖ ದಿನಾಂಕಗಳು :
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇಲಾಖೆಯ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹಾಜರಾಗಬೇಕಾದ ದಿನಾಂಕ ಮಾರ್ಚ್ 15 2023 ಬೆಳಗ್ಗೆ 10:30 ನಿಮಿಷದಿಂದ 5 ಗಂಟೆಯೊಳಗೆ.
Notification Link : Click
Whatsapp group link : Click
ಮುಖ್ಯ ಸೂಚನೆ :
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇಲಾಖೆಯಲ್ಲಿ ಖಾಲಿ ಇರುವ 636 ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆ ಹೊರಡಿಸಿರುವ ಅಥವಾ ನಾವು ನೀಡಿರುವ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ಅರಿತುಕೊಂಡು ತದನಂತರವೇ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ.
ವಿಶೇಷ ಸೂಚನೆ :
ನಾವು ಒದಗಿಸುವ ಎಲ್ಲಾ ಉದ್ಯೋಗದ ಮಾಹಿತಿ ಸಂಪೂರ್ಣವಾಗಿ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಳ್ಳುವುದಿಲ್ಲ ಹಾಗೂ ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ Government jobs news shashikala & Karnataka news hunter ಹೆಸರಿನಲ್ಲಿ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವುಗಳು ನಮ್ಮ ಗಮನಕ್ಕೆ ತರತಕ್ಕದ್ದು.