Central Pollution Control Board recruitment 2023 | Apply Online For 163 Data Entry Posts

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆ ನೇಮಕಾತಿ 2023 ಇಲಾಖೆಯಲ್ಲಿ ಖಾಲಿ ಇರುವ ಜೂನಿಯರ್ ಟೆಕ್ನಿಷಿಯನ್/ ಡಾಟಾ ಎಂಟ್ರಿ ಆಪರೇಟರ್ ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಹೊಂದಿರುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.ಕೇಂದ್ರ ಸರಕಾರಿ ಹಾಗೂ ಕರ್ನಾಟಕದಲ್ಲಿ ಉದ್ಯೋಗ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ನೇಮಕಾತಿ ಇಲಾಖೆ ಹೆಸರು :
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆ

ಹುದ್ದೆಗಳ ಹೆಸರು :
• ಅಸಿಸ್ಟೆಂಟ್ 03 ಹುದ್ದೆಗಳು
• ಅಕೌಂಟ್ ಅಸಿಸ್ಟೆಂಟ್ 2 ಹುದ್ದೆಗಳು
• ಜೂನಿಯರ್ ಟೆಕ್ನಿಷಿಯನ್ 3 ಹುದ್ದೆಗಳು
• ಸೀನಿಯರ್ ಲ್ಯಾಬ್ ಅಸಿಸ್ಟೆಂಟ್ 15 ಹುದ್ದೆಗಳು
• ಅಪ್ಪರ್ ಡಿವಿಜನ್ ಕ್ಲಕ್ 16 ಹುದ್ದೆಗಳು
• ಡಾಟಾ ಎಂಟ್ರಿ ಆಪರೇಟರ್ 3 ಹುದ್ದೆಗಳು
• ಜೂನಿಯರ್ ಲ್ಯಾಬ್ ಅಸಿಸ್ಟೆಂಟ್ 15 ಹುದ್ದೆಗಳು
• ಲೋವರ್ ಡಿವಿಜನ್ ಕ್ಲರ್ಕ್ 5 ಹುದ್ದೆಗಳು
• ಫೀಲ್ಡ್ ಅಟೆಂಡೆಂಟ್ 8 ಹುದ್ದೆಗಳು
• ಮಲ್ಟಿ ಟಾಸ್ಕಿಂಗ್ ಸ್ಟಾಪ್ 8 ಹುದ್ದೆಗಳು
• ಅಸಿಸ್ಟೆಂಟ್ ಅಕೌಂಟ್ ಆಫೀಸರ್ 1 ಹುದ್ದೆ
• ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ 16 ಹುದ್ದೆಗಳು
• ಟೆಕ್ನಿಕಲ್ ಸೂಪರ್ ವೈಸರ್ 1 ಹುದ್ದೆ

ಒಟ್ಟು ಹುದ್ದೆಗಳ ಸಂಖ್ಯೆ :
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆಯಲ್ಲಿ ಒಟ್ಟು 163 ಹುದ್ದೆಗಳ ನೇಮಕಾತಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಶೈಕ್ಷಣಿಕ ವಿದ್ಯಾರ್ಹತೆ ವಿವರಣೆ :
1. ಅಪ್ಪರ್ ಡಿವಿಜನ್ ಕ್ಲಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪಡೆದಿರಬೇಕು. ಇದರ ಜೊತೆಗೆ ಕಂಪ್ಯೂಟರ್ ಜ್ಞಾನವನ್ನು ಪಡೆಯಿರಬೇಕು.

2. ಲೋವರ್ ಡಿವಿಜನ್ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.ಇಂಗ್ಲಿಷ್‌ನಲ್ಲಿ -35 wpm ಟೈಪಿಂಗ್ ವೇಗ ಅಥವಾ ಕಂಪ್ಯೂಟರ್‌ನಲ್ಲಿ ಹಿಂದಿಯಲ್ಲಿ 30 wpm ಹೊಂದಬಹುದು. ನಿಗದಿಪಡಿಸಿದ ಸಮಯವು 10 ನಿಮಿಷಗಳು

3. ಮಲ್ಟಿ ಟಾಸ್ಕಿಂಗ್ ಸ್ಟಾಪ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ -ಪಂಪ್ ಆಪರೇಟರ್, ಪ್ಲಂಬರ್, ಎಲೆಕ್ಟ್ರಿಷಿಯನ್ ಮತ್ತು ಅಗ್ನಿಶಾಮಕ ಮತ್ತು ಸುರಕ್ಷತೆಯಲ್ಲಿ ಐಟಿಐ ಪ್ರಮಾಣಪತ್ರ

4. ಜೂನಿಯರ್ ಲ್ಯಾಬ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ವಾಯ್ಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ಯಾವುದಾದರೂ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ತೇರ್ಗಡೆ ಹೊಂದಿರಬೇಕು.

Join Now

5. ಫೀಲ್ಡ್ ಅಟೆಂಡೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

6. ಡಾಟಾ ಎಂಟ್ರಿ Grade-II ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು ಹಾಗೂ ಇದರ ಜೊತೆಗೆ ಒಂದು ಗಂಟೆಗೆ 8000 ಶಬ್ದಗಳನ್ನ ಬರೆಯುವ ಕೌಶಲ ಹೊಂದಿರಬೇಕು.

7. ಅಕೌಂಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಮಾಡಿರಬೇಕು ಇದರ ಜೊತೆಗೆ ನಗದು ನಿರ್ವಹಣೆ, ಖಾತೆಗಳು, ಲೆಕ್ಕಪರಿಶೋಧನೆ ಅಥವಾ ಯಾವುದೇ ಇತರ ಸಂಬಂಧಿತ ಕೆಲಸದಲ್ಲಿ 3 ವರ್ಷಗಳ ಅವಧಿ ಮೀರಿದೆ

8. ಸೀನಿಯರ್ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 2 ವರ್ಷಗಳ ಅನುಭವದೊಂದಿಗೆ ವಿಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು.

9. ಅಸಿಸ್ಟೆಂಟ್ ಅಕೌಂಟ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆ ನಿಗದಿಪಡಿಸಿದ ಶೈಕ್ಷಣಿಕ ವಿದ್ಯಾರ್ಥಿಯನ್ನು ಪೂರೈಸಬೇಕು ಶೈಕ್ಷಣಿಕ ಅರ್ಹತೆ ಬಿ.ಕಾಂ ಮಾಡಿರಬೇಕು. ಮೇಲ್ವಿಚಾರಣಾ ಮಟ್ಟದಲ್ಲಿ 5 ವರ್ಷಗಳ ಅವಧಿ. ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.

10. ಟೆಕ್ನಿಕಲ್ ಸೂಪರ್ ವೈಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಂಬಂಧಿತ ಕ್ಷೇತ್ರದಲ್ಲಿ 3 ವರ್ಷಗಳ ಅನುಭವದೊಂದಿಗೆ ಇನ್‌ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ ಪದವಿಯನ್ನು ಹೊಂದಿರಬೇಕು. ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ಅಧಿಸುತೆಯನ್ನ ಗಮನಿಸಿ.

11. ಅಸಿಸ್ಟೆಂಟ್ ಹುದ್ದೆಗೆ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು ಹಾಗೂ ಇದರ ಇಂಗ್ಲಿಷ್‌ನಲ್ಲಿ -35 wpm ಟೈಪಿಂಗ್ ವೇಗ ಅಥವಾ ಕಂಪ್ಯೂಟರ್‌ನಲ್ಲಿ ಹಿಂದಿಯಲ್ಲಿ 30 wpm ಹೊಂದಬಹುದು. ನಿಗದಿಪಡಿಸಿದ ಸಮಯವು 10 ನಿಮಿಷಗಳು

12. ಸೀನಿಯರ್ ಲ್ಯಾಬೋಲೋಟರಿ ಅಸಿಸ್ಟೆಂಟ್ ಹುದ್ದೆಗೆ ವಿಜ್ಞಾನ ಅಥವಾ 12 ನೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
ಸಂಬಂಧಿತ ಕ್ಷೇತ್ರದಲ್ಲಿ 3 ವರ್ಷಗಳ ಅವಧಿ

13. ಅಸಿಸ್ಟೆಂಟ್ ಲಾ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಾನೂನು ಸ್ನಾತಕೋತ್ತರ ಪದವಿಯನ್ನು ಹೊಂದಿರಬೇಕು ಮತ್ತು ರಾಜ್ಯ ನ್ಯಾಯಾಂಗ ಸೇವೆಗಳಲ್ಲಿ ಅಧಿಕಾರಿಯಾಗಿ 5 ವರ್ಷಗಳ ಅವಧಿಗೆ ಸೇವೆ ಸಲ್ಲಿಸಿರಬೇಕು. ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.

14. ಸೈಂಟಿಸ್ಟ್ ಬಿ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್, ಸಿವಿಲ್ ಅಥವಾ ಕೆಮಿಕಲ್ ಮತ್ತು ಐಟಿ ಅಥವಾ ಸಿಎಸ್ ಅಥವಾ ಸ್ಟ್ರೀಮ್‌ನಲ್ಲಿ ತಂತ್ರಜ್ಞಾನ ಅಥವಾ ಎಂಜಿನಿಯರಿಂಗ್‌ನಲ್ಲಿ ಬ್ಯಾಚುಲರ್ ಪದವಿಯನ್ನು ಹೊಂದಿರಬೇಕು
-ಪರಿಸರ ವಿಜ್ಞಾನ ಅಥವಾ ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿರಬಹುದು. ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ. ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಪಡೆಯಲು ನಾವು ನೀಡಿರುವ ಅಧಿಸೂಚನೆಯನ್ನು ಗಮನಿಸಿ.

ವಯೋಮಿತಿ ವಿವರಣೆ :
ಸಾಮಾನ್ಯ ವರ್ಗ ಮತ್ತು ಓಬಿಸಿ ವರ್ಗದವರಿಗೆ 18 ವರ್ಷದಿಂದ 27 ವರ್ಷ ನಿಗದಿಪಡಿಸಿದೆ ಮೀಸಲಾತಿ ಅನುಗುಣವಾಗಿ ವಯೋಮಿತಿಯಲ್ಲಿ ಸಿಡಿಲಿಕ್ಕೆ ಸಹ ನೀಡಲಾಗಿದ್ದು ಹೆಚ್ಚಿನ ಮಾಹಿತಿ ಪಡೆಯಲು ನಾವು ನೀಡಿರುವ ಅಧಿಸೂಚನೆಯನ್ನು ಗಮನಿಸಿ.

ವಯೋಮಿತಿ ಸಡಿಲಿಕೆ ವಿವರಣೆ :
ಸೈಂಟಿಸ್ಟ್ ಬಿ 35 ವರ್ಷ
ಇತರೆ ಹುದ್ದೆಗೆ 30 ವರ್ಷ

ಅರ್ಜಿ ಶುಲ್ಕ :
ಸಾಮಾನ್ಯ ವರ್ಗ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 1000 ಅಥವಾ 500 ರೂಪಾಯಿ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮಹಿಳಾ ಅಭ್ಯರ್ಥಿಗಳಿಗೆ ರೂಪಾಯಿ 350 ಅಥವಾ 150 ರೂಪಾಯಿ ನಿಗದಿಪಡಿಸಿದೆ.

ಅರ್ಜಿ ಸಲ್ಲಿಸುವ ವಿಧಾನ : ಅಭ್ಯರ್ಥಿಯು ಇಲಾಖೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿ ಹಾಗೂ ಅರ್ಹತೆಯನ್ನು ಹೊಂದಿದ್ದರೆ ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿಕೊಂಡು ಹುದ್ದೆಗಳಿಗೆ ಅಗತ್ಯ ಇರುವ ಅಥವಾ ಪೂರಕ ದಾಖಲಾತಿಗಳನ್ನ ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸ ಬೇಕು. ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ವೇಳೆ ಏನಾದರೂ ತಂತ್ರಜ್ಞಾನ ದೋಷಗಳು ಕಂಡುಬಂದರೆ ಅರ್ಜಿಯನ್ನು ಕೆಲವು ಸಮಯದ ನಂತರ ಸಲ್ಲಿಸಿ.
ಹಂತ 1 : ಅಭ್ಯರ್ಥಿಯ ಮೊದಲನೇದಾಗಿ ಇಲಾಖೆಯ ಅಂತರ್ಜಾಲಕ್ಕೆ ಭೇಟಿ ನೀಡಿ ಅಥವಾ ನಾವು ಈ ಕೆಳಗೆ ನೀಡಿರುವ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಹಂತ 2 : ಅರ್ಜಿಯನ್ನು ಸಲ್ಲಿಸುವ ವೇಳೆ ಬೇಕಾಗುವ ದಾಖಲಾತಿಗಳನ್ನು ಸಿದ್ಧವಾಗಿರಿಸಿ. ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸದ ಪುರಾವೆ, ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳು, ಮೊಬೈಲ್ ಸಂಖ್ಯೆ ಇಮೇಲ್ ಐಡಿ ಇತ್ಯಾದಿ ಮುಂತಾದವುಗಳನ್ನು ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ನೀಡಬೇಕು.
ಹಂತ 3 : ಅರ್ಜಿಯನ್ನು ಸಲ್ಲಿಸಬೇಡಿ ಬೇಕಾಗುವ ಪ್ರಮುಖ ದಾಖಲಾತಿಗಳನ್ನ ಸಲ್ಲಿಸುವಂತೆ ಸೂಚಿಸಿದರೆ ಅವುಗಳನ್ನ ಅಗತ್ಯವಾಗಿ ಲಗತ್ತಿಸಬೇಕು.
ಹಂತ 4 : ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಿದ ಬಳಿಕ ಕೊನೆಯದಾಗಿ ನೀವು ನೀಡಿದ ಅಥವಾ ನೀವು ನಮೂದಿಸಿದ ಮಾಹಿತಿಯು ಸರಿಯಾಗಿದೆ ಎಂದು ಪರಿಶೀಲಿಸಿ ತದನಂತರ ಅರ್ಜಿಯನ್ನ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸಿದ ನಮೂನೆಯನ್ನ ಡೌನ್ಲೋಡ್ ಮಾಡಿಕೊಂಡು ಮುದ್ರಣ ಮಾಡಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ.

ಆಯ್ಕೆ ವಿಧಾನ :
• ಲಿಖಿತ ಪರೀಕ್ಷೆ
• ಕೌಶಲ್ಯ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 06-ಮಾರ್ಚ್-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 31-ಮಾರ್ಚ್ 2023

Notification Link : Click

Apply Link : Click

ಮುಖ್ಯ ಪದಗಳು :
ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿಯನ್ನು ಸಲ್ಲಿಸುವ ಮುನ್ನ ಸಂಪೂರ್ಣವಾಗಿ ಅಧಿಸೂಚನೆಯನ್ನು ಓದಿ ಸ್ಪಷ್ಟವಾಗಿ ಅರ್ಥೈಸಿಕೊಂಡ ನಂತರವೇ ಅರ್ಜಿಯನ್ನು ಸಲ್ಲಿಸಿ.

Spread the love