IBPS RURAL BANK RECRUITMENT 2023 – APPLY ONLINE FOR 8611 Assistant post

ಗ್ರಾಮೀಣ ಬ್ಯಾಂಕ್ ನೇಮಕಾತಿ 2023 ಇಲಾಖೆಯಲ್ಲಿ ಖಾಲಿ ಇರುವ 8611 ಆಫೀಸ್ ಅಸಿಸ್ಟೆಂಟ್, ಆಫೀಸರ್ ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ ಪದವಿ ಪಾಸಾದ ಅಭ್ಯರ್ಥಿಗಳಿಂದ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಕರ್ನಾಟಕದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಕೇಂದ್ರ ಸರಕಾರಿ ವೃತ್ತಿ ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ವಿಧಾನದ ವಿವರಣೆ, ಅರ್ಜಿ ಸಲ್ಲಿಸುವ ವಿಧಾನ, ಉದ್ಯೋಗದ ಸ್ಥಳ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

IBPS Vacancy notification 2023

ನೇಮಕಾತಿ ಇಲಾಖೆ ಹೆಸರು : ಗ್ರಾಮೀಣ ಬ್ಯಾಂಕ್ ನೇಮಕಾತಿ

ಹುದ್ದೆಗಳ ಹೆಸರು :
1. ಆಫೀಸ್ ಅಸಿಸ್ಟೆಂಟ್ ಹುದ್ದೆಗಳು : 5538
2. ಸ್ಕೇಲ್-1 ಆಫೀಸರ್ ಹುದ್ದೆಗಳು : 2485
3. ಸ್ಕೇಲ್-2, 3 ಆಫೀಸರ್ ಹುದ್ದೆಗಳು : 588

IBPS Vacancy details 2023

ಒಟ್ಟು ದೇಶದಾದ್ಯಂತ 8,61 ಹುದ್ದೆಗಳು ಖಾಲಿ ಇದ್ದು ಕರ್ನಾಟಕದಲ್ಲಿ 883 ಹುದ್ದೆಗಳು ಖಾಲಿ ಇವೆ. ಹುದ್ದೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಪಡೆಯಲು ನಾವು ನೀಡಿರುವ ಅಧಿಸೂಚನೆಯನ್ನು ಗಮನಿಸಿ.I

IBPS Recruitment 2023 eligibility details

ಶೈಕ್ಷಣಿಕ ವಿದ್ಯಾರ್ಹತೆ : ಇಲಾಖೆಯ ನಿಯಮಗಳ ಅನುಸಾರ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು ಮತ್ತು ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹಾಗೂ ಕಂಪ್ಯೂಟರ್ ಜ್ಞಾನವನ್ನು ಹೊಂದಿರಬೇಕು.

ವಯಸ್ಸಿನ ಮಿತಿ : ಗ್ರಾಮೀಣ ಬ್ಯಾಂಕ್ ನೇಮಕಾತಿ ಇಲಾಖೆಯ ಅಧಿಸೂಚನೆ ಪ್ರಕಾರ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ಗರಿಷ್ಠ ವಯಸ್ಸು 28 ವರ್ಷ ನಿಗದಿಪಡಿಸಲಾಗಿದೆ. ಅದೇ ರೀತಿ ಆಫೀಸರ್ ಹುದ್ದೆಗೆ ಕನಿಷ್ಠ 18 ವರ್ಷದಿಂದ ಗರಿಷ್ಠ 40 ವರ್ಷ ಮೀಸಲಾತಿ ನೀಡಲಾಗಿದೆ.

ಅರ್ಜಿ ಶುಲ್ಕ : ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂಪಾಯಿ 850/-
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ 175 ರೂ.

ನೇಮಕಾತಿ ವಿಧಾನ : ಇಲಾಖೆಯ ನಿಯಮಗಳು ಅನುಸಾರ
Office assistant
1. Preliminary exam
2. Main exam

Join Now

Officer :
1. Preliminary exam
2. Main exam
3. Interview

How to apply for IBPS Recruitment ( Office assistant, Office ) Jobs 2023

ಅರ್ಜಿ ಸಲ್ಲಿಸುವ ವಿಧಾನ : ಅಭ್ಯರ್ಥಿಯು ಇಲಾಖೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿ ಹಾಗೂ ಅರ್ಹತೆಯನ್ನು ಹೊಂದಿದ್ದರೆ ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿಕೊಂಡು ಹುದ್ದೆಗಳಿಗೆ ಅಗತ್ಯ ಇರುವ ಅಥವಾ ಪೂರಕ ದಾಖಲಾತಿಗಳನ್ನ ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸ ಬೇಕು. ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ವೇಳೆ ಏನಾದರೂ ತಂತ್ರಜ್ಞಾನ ದೋಷಗಳು ಕಂಡುಬಂದರೆ ಅರ್ಜಿಯನ್ನು ಕೆಲವು ಸಮಯದ ನಂತರ ಸಲ್ಲಿಸಿ.
ಹಂತ 1 : ಅಭ್ಯರ್ಥಿಯ ಮೊದಲನೇದಾಗಿ ಇಲಾಖೆಯ ಅಂತರ್ಜಾಲಕ್ಕೆ ಭೇಟಿ ನೀಡಿ ಅಥವಾ ನಾವು ಈ ಕೆಳಗೆ ನೀಡಿರುವ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಹಂತ 2 : ಅರ್ಜಿಯನ್ನು ಸಲ್ಲಿಸುವ ವೇಳೆ ಬೇಕಾಗುವ ದಾಖಲಾತಿಗಳನ್ನು ಸಿದ್ಧವಾಗಿರಿಸಿ. ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸದ ಪುರಾವೆ, ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳು, ಮೊಬೈಲ್ ಸಂಖ್ಯೆ ಇಮೇಲ್ ಐಡಿ ಇತ್ಯಾದಿ ಮುಂತಾದವುಗಳನ್ನು ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ನೀಡಬೇಕು.
ಹಂತ 3 : ಅರ್ಜಿಯನ್ನು ಸಲ್ಲಿಸಬೇಡಿ ಬೇಕಾಗುವ ಪ್ರಮುಖ ದಾಖಲಾತಿಗಳನ್ನ ಸಲ್ಲಿಸುವಂತೆ ಸೂಚಿಸಿದರೆ ಅವುಗಳನ್ನ ಅಗತ್ಯವಾಗಿ ಲಗತ್ತಿಸಬೇಕು.
ಹಂತ 4 : ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಿದ ಬಳಿಕ ಕೊನೆಯದಾಗಿ ನೀವು ನೀಡಿದ ಅಥವಾ ನೀವು ನಮೂದಿಸಿದ ಮಾಹಿತಿಯು ಸರಿಯಾಗಿದೆ ಎಂದು ಪರಿಶೀಲಿಸಿ ತದನಂತರ ಅರ್ಜಿಯನ್ನ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸಿದ ನಮೂನೆಯನ್ನ ಡೌನ್ಲೋಡ್ ಮಾಡಿಕೊಂಡು ಮುದ್ರಣ ಮಾಡಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 01 ಜೂನ್ 2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 21 ಜೂನ್ 2023

Apply Link : Click

Notification Link : Click

ಮುಖ್ಯ ಸೂಚನೆ :
ಗ್ರಾಮೀಣ ಬ್ಯಾಂಕ್ ನೇಮಕಾತಿ 2023 ಈ ಹುದ್ದೆಯ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಹಾಗೂ ಫೇಸ್ಬುಕ್ ಗ್ರೂಪ್ ಗಳ ಮೂಲಕ ಹಂಚಿಕೊಳ್ಳಿ, ಆದಷ್ಟು ಉದ್ಯೋಗ ಮಾಹಿತಿ ಬಯಸುವ ಅಭ್ಯರ್ಥಿಗಳಿಗೆ ಶೇರ್ ಮಾಡಿ.

Spread the love