ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಇಲಾಖೆಯ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಹಾಗೂ ಮಾಲಿ ಹೀಗೆ ವಿವಿಧ ಹುದ್ದೆಗಳಿಗೆ ಇಲಾಖೆಯು ಅರ್ಜಿಯನ್ನು ಆಸಕ್ತಿ ಮತ್ತು ಅರ್ಹತೆ ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ, ವೇತನ ಶ್ರೇಣಿ, ಉದ್ಯೋಗದ ಸ್ಥಳ ಮುಂತಾದ ಸಂಪೂರ್ಣ ವಿವರವನ್ನು ಈ ಕೆಳಗಿನಂತೆ ತಿಳಿಸಲಾಗಿದೆ.
ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಇಲಾಖೆಯ ಹುದ್ದೆಗಳ ನೇಮಕಾತಿಯ ವಿವರಣೆ :
ನೇಮಕಾತಿ ಇಲಾಖೆ ಹೆಸರು :
ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಇಲಾಖೆಯ
ಹುದ್ದೆಗಳ ಹೆಸರು :
• ಸ್ಟೆನೋಗ್ರಾಫರ್
• ಅಸಿಸ್ಟೆಂಟ್ ಸ್ಯಾನಿಟರಿ ಇನ್ಸ್ಪೆಕ್ಟರ್
• ಮಾಲಿ
ಒಟ್ಟು ಹುದ್ದೆಗಳ ಸಂಖ್ಯೆ :
ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಇಲಾಖೆಯಲ್ಲಿ ಒಟ್ಟು ಮೂರು ಹುದ್ದೆಗಳು ಖಾಲಿ ಇವೆ.
ಶೈಕ್ಷಣಿಕ ವಿದ್ಯಾರ್ಹತೆ :
ಸ್ಟೆನೋಗ್ರಾಫರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಚೇರ್ಗಡೆ ಹೊಂದಿರಬೇಕು ಹಾಗೂ ಇದರ ಜೊತೆಗೆ ಇಂಗ್ಲೀಷ್ ಹಿರಿಯ ದರ್ಜೆ ಶೀಘ್ರ ಲಿಪಿ ಹಾಗು ಟೈಪ್ ರೈಟಿಂಗ್ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.
ಅಥವಾ ಕರ್ನಾಟಕ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ತೇರಗಡೆ ಹೊಂದಿರಬೇಕು ಇದರ ಜೊತೆಗೆ 3 ವರ್ಷಗಳ ಡಿಪ್ಲೋಮೋ ಕಮರ್ಷಿಯಲ್ ಪ್ರಾಕ್ಟೀಸ್ ಕೋರ್ಸ್ ( ಇಂಗ್ಲಿಷ್ ) ಪಡೆದಿರಬೇಕು.
ಅಸಿಸ್ಟೆಂಟ್ ಸ್ಯಾನಿಟರಿ ಇನ್ಸ್ಪೆಕ್ಚರ್ :
ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪಾಸ್ ಮತ್ತು ಸ್ಯಾನಿಟರಿ ಹೆಲ್ತ್ ಇನ್ ಪೆಕ್ಟರ್ ನಲ್ಲಿ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಹೊಂದಿರಬೇಕು .
ಅಥವಾ
ಈ ಹುದ್ದೆಗೆ ಆಯ್ಕೆಯಾಗಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಸ್ಯಾನಿಟರಿ ಹೆಲ್ತ್ ಇನ್ಸ್ಪೆಕ್ಚರ್ ಅಥವಾ ಹೆಲ್ತ್ ಇನ್ ಫ್ಯೆಕ್ಟರ್ ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್ ಹೊಂದಿರಬೇಕು.
ಮಾಲಿ :
ಮಾಲಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿರಬೇಕು.
ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಹುದ್ದೆಗಳಿಗೆ ನಿಗದಿಪಡಿಸಿದ ವಯಸ್ಸಿನ ಮಿತಿ :
ವಯಸ್ಸಿನ ಮಿತಿ :
ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಗರಿಷ್ಠ 30 ವರ್ಷ ನಿಗದಿಪಡಿಸಲಾಗಿದೆ.
ಉದ್ಯೋಗದ ಸ್ಥಳ : ಬೆಳಗಾವಿ
ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲಾತಿಗಳು.
• ಅಭ್ಯರ್ಥಿಗಳ ಇತ್ತೀಚಿನ ಭಾವಚಿತ್ರ
• ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಆಧಾರ್ ಕಾರ್ಡ್ ಮತ್ತು ವಾಸ ಸ್ಥಳದ ಯಾವುದಾದರು ಒಂದು ದುಡಿಕಂಡದ ಪತ್ರ
• ವಿದ್ಯಾರ್ಹತೆಗೆ ಸಂಬಂಧಿಸಿದ ಅಂಕ ಪಟ್ಟಿಗಳು
• ಮೀಸಲಾತಿಗೆ ಸಂಬಂಧಿಸಿದ ಜಾತಿ ಆದಾಯ ಪ್ರಮಾಣ ಪತ್ರ
ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ :
• ಬೆಳಗಾವಿಯಲ್ಲಿ ಖಾಲಿ ಇರುವ ಮಾಲಿ ಸ್ಟೆನೋಗ್ರಾಫರ್/ ಹಾಗೂ ಅಸಿಸ್ಟೆಂಟ್ ಸ್ಯಾನಿಟರಿ/ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಂಚೆ ಮೂಲಕ ಸಲ್ಲಿಸಬೇಕು.
• ಅರ್ಜಿದಾರರು ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಇಲಾಖೆಯ ಅಧಿಕೃತ ಅಂತರ್ಜಾಲಕ್ಕೆ ಭೇಟಿ ನೀಡಿ ಅಲ್ಲಿ ಇರುವಂತ ಅರ್ಜಿ ನಮೂನೆಯನ್ನು ಪಡೆದುಕೊಂಡು ಭರ್ತಿ ಮಾಡಿ ಅರ್ಜಿ ನಮೂನೆಯನ್ನು ಸಂಬಂಧಿಸಿದ ವಿಳಾಸಕ್ಕೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸುವ ಅಂಚೆಯ ವಿಳಾಸ :
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ,
ಕಂಟೋನ್ಮೆಂಟ್ ಬೋರ್ಡ್,
ಬಿ.ಸಿ.ನಂ 41 ಖಾನಾಪುರ ರೋಡ್,
ಕ್ಯಾಂಪ್ ಬೆಳಗಾವಿ 590001
ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಇಲಾಖೆಯ ನಿಗದಿಪಡಿಸಿದ ಅರ್ಜಿಯ ಶುಲ್ಕ :
ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸವ ಅಭ್ಯರ್ಥಿಗಳಿಗೆ ಇಲಾಖೆಯು 500 ರೂಪಾಯಿ ಡಿಡಿ ಯನ್ನು ”Chief executive officer, Contonment board, Belgaum”ಇವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಸಲ್ಲಿಸಬೇಕು.
ಬೆಳಗಾವಿ ಕಂಟೋನ್ಮೆಂಟ್ ಬೋರ್ಡ್ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು.
ಅರ್ಜಿ ಸಲ್ಲಿಕೆ ಆರಂಭ ದಿನಾಂಕ : 30 ಜುಲೈ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 9 ಸಪ್ಟಂಬರ್ 2022
ಸೂಚನೆ :
ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದಕ್ಕಿಂತ ಮುಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಮತ್ತು ಅದೇ ಸೂಚನೆ ಗಮನಿಸಿ ಸ್ಪಷ್ಟವಾಗಿ ಓದಿ ಅರ್ಥೈಸಿಕೊಂಡು ತದನಂತರದಲ್ಲಿ ಅರ್ಜಿಯನ್ನು ಸಲ್ಲಿಸಿ. ನಾವು ಈ ಹುದ್ದೆಗಳಿಗೆ ಸಂಬಂಧಿಸಿದ ಇಲಾಖೆಯ ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ನಮೂನೆಯನ್ನು ಈ ಕೆಳಗಡೆ ನೀಡಿರುತ್ತೇವೆ ಅದನ್ನು ಡೌನ್ಲೋಡ್ ಮಾಡಿಕೊಂಡು ಬರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ.
ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್, ಟೆಲಿಗ್ರಾಂ ಗ್ರೂಪ್, ಫೇಸ್ಬುಕ್ ಹೀಗೆ ಹಲವಾರು ಜಾಲತಾಣದಲ್ಲಿ ಹಂಚಿಕೊಳ್ಳಿ, ಇದರಿಂದ ನೀವು ನಿರುದ್ಯೋಗಿ ಅಭ್ಯರ್ಥಿಗಳಿಗೆ ಮಾಡುವ ಒಂದು ಸಹಾಯವಾಗಿದೆ.
ಅಭ್ಯರ್ಥಿಗಳು ಅರ್ಜಿಯನ್ನು ಇಲಾಖೆಯ ಅಂಚೆ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಬಹುದು ಅಥವಾ ಖುದ್ದಾಗಿದ್ದಾವೆ ಇಲಾಖೆಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿದಾರರು ಆದಷ್ಟು ಬೇಗ ಈ ಮಾಹಿತಿಯನ್ನು ಎಲ್ಲಾ ಸ್ನೇಹಿತರಿಗೂ ತಿಳಿಸಿರಿ ಹಾಗು ಇಲಾಖೆ ನಿಗದಿ ಪಡಿಸಿದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಿ
ಕರ್ನಾಟಕ ನ್ಯೂಸ್ ಹಂಟರ್ ಅಂತರ್ಜಾಲ ಸ್ಥಾಪನೆಗೆ ಕಾರಣವಾದ ಅಂಶಗಳು:
• ಕರ್ನಾಟಕ ನ್ಯೂಸ್ ಹಂಟರ್ ಅಂತರ್ಜಾಲ ಕರ್ನಾಟಕದವರಿಗಾಗಿ ಸ್ಥಾಪನೆಯಾದ ಒಂದು ಅಂತರ್ಜಾಲವಾಗಿದೆ.
• ಈ ಅಂತರ್ಜಲದಲ್ಲಿ ರಾಜ್ಯ ಸರಕಾರ ಮತ್ತು ಕೇಂದ್ರ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಹೊರಡಿಸುವ ಪ್ರಮುಖ ಉದ್ಯೋಗದ ಮಾಹಿತಿಯನ್ನು ತಿಳಿಸಿಕೊಡುತ್ತದೆ.
• ಕರ್ನಾಟಕ ನ್ಯೂಸ್ ಅಂತರ್ ಅಂತರ್ಜಾಲದಲ್ಲಿ ಸಿನಿಮಾ ಸುದ್ದಿ ಮತ್ತು ರಾಜಕೀಯ ಸುದ್ದಿ ಹಾಗೂ ಕ್ರಿಕೆಟಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಈ ಒಂದು ಅಂತರ್ಜಲದಲ್ಲಿ ಉಚಿತವಾಗಿ ಮಾಹಿತಿಯನ್ನು ಪಡೆಯಬಹುದು.
ಕರ್ನಾಟಕ ನ್ಯೂಸ್ ಹಂಟರ್ ಅಂತರ್ಜಾಲಕ್ಕೆ ಮಾಡಬೇಕಾದ ಸಹಾಯಗಳು :
• ಈ ಅಂತರಜಾಲದಲ್ಲಿ ಪ್ರಕಟಣೆಗೊಳ್ಳುವ ಯಾವುದೇ ಉದ್ಯೋಗ ಮಾಹಿತಿ ಅಥವಾ ಪ್ರಮುಖ ಸುದ್ದಿಗಳಲ್ಲಿ ಏನಾದ್ರೂ ದೋಷಗಳು ಕಂಡು ಬಂದಲ್ಲಿ ವೀಕ್ಷಕರು ನಮ್ಮ ಗಮನಕ್ಕೆ ತರಬೇಕು.
• ಇದು ನೀವು ಮಾಡುವ ಒಂದು ಪುಟ್ಟ ಸಹಾಯವಾಗಿದೆ ಇದರಿಂದ ನಮ್ಮಿಂದಾಗುವ ಸರಿ ತಪ್ಪುಗಳನ್ನ ಸರಿಪಡಿಸಿಕೊಳ್ಳಲು ನೀವು ನಮಗೆ ಅವಕಾಶವನ್ನು ಮಾಡಿಕೊಡಬಹುದು.
• ಈ ಅಂತರಜಾಲದ ಬಗ್ಗೆ ವೀಕ್ಷಕರು ಎಲ್ಲರಿಗೂ ಮಾಹಿತಿಯನ್ನು ನೀಡಿ ಇದರಲ್ಲಿರುವ ಮಾಹಿತಿಯನ್ನು ಪ್ರತಿಯೊಬ್ಬರೊಂದಿಗೆ ಹಂಚಿಕೊಳ್ಳಿ ಏಕೆಂದರೆ ನಿಮ್ಮ ಈ ಪುಟ್ಟ ಸಹಾಯದಿಂದ ಇನ್ನೊಬ್ಬ ಅಭ್ಯರ್ಥಿ ಅಥವಾ ವ್ಯಕ್ತಿಗೆ ಸಹಾಯವಾಗುತ್ತದೆ.