BPNL Recruitment 2024: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಇಲಾಖೆ ಬೃಹತ್ ನೇಮಕಾತಿ 2024. ಭಾರತೀಯ ಪಶುಪಾಲನ್ ನಿಗಮ್ ಇಲಾಖೆಯಲ್ಲಿ ಖಾಲಿ ಇರುವ 2250 ಹಸು ಸೇವಕ, ಹಸು ಸಾಕಾಣಿ ಸಹಾಯಕ ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಪೂರ್ಣಗೊಳಿಸಿದ ಕರ್ನಾಟಕದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಹುದ್ದೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯಾದ ಆಯ್ಕೆ ವಿಧಾನ, ವೇತನ ಶ್ರೇಣಿ ವಿವರಣೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
BPNL Recruitment 2024 Vacancy Details
ನೇಮಕಾತಿ ಇಲಾಖೆ ಹೆಸರು : ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ( BPNL RECRUITMENT 2024 )
ಹುದ್ದೆಗಳ ಹೆಸರು :
1. ಹಸು ಪ್ರಚಾರ ವಿಸ್ತರಣೆ – 225 ಹುದ್ದೆಗಳು
2. ಹಸು ಸಾಕಾಣಿ ಸಹಾಯಕ – 675 ಹುದ್ದೆಗಳು
3. ಹಸು ಸೇವಕ – 1350
ಒಟ್ಟು ಹುದ್ದೆಗಳ ಸಂಖ್ಯೆ :
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಇಲಾಖೆಯಲ್ಲಿ ಒಟ್ಟು 2250 ಹುದ್ದೆಗಳು ಖಾಲಿ ಇವೆ.
ವೇತನ ಶ್ರೇಣಿ :
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಇಲಾಖೆಯ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ 18,000 – 26,000/- ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.
ವಿಶೇಷ ಸೂಚನೆ – ನಾವು ನೀಡುವ ಎಲ್ಲಾ ತರದ ಉದ್ಯೋಗದ ಮಾಹಿತಿಯು ಸಂಪೂರ್ಣವಾಗಿ ಉಚಿತವಾಗಿದ್ದು ನಾವು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಳ್ಳುವುದಿಲ್ಲ ಹಾಗೂ ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ Karnataka news hunter ಹೆಸರಿನಿಂದ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಯಾವುದೇ ರೀತಿಯ ಹಣವನ್ನು ಪಾವತಿ ಮಾಡಬೇಡಿ. ಹಾಗೂ ಈ ಕುರಿತು ಮಾಹಿತಿಯನ್ನು ನಮ್ಮ ವಾಟ್ಸಪ್ ನಂಬರ್ 8050798925 ಮೆಸೇಜ್ ಮಾಡಿ. ಸುರಕ್ಷಿತವಾಗಿರಿ ಮೋಸ ಹೋಗದಿರಿ.
ಶೈಕ್ಷಣಿಕ ಅರ್ಹತೆ :
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಹೆಚ್ಚಿನ ಮಾಹಿತಿಗಾಗಿ ನಾವು ನೀಡಿರುವ ಅಧಿಸೂಚನೆಯನ್ನು ಗಮನಿಸಿ
( ಶೈಕ್ಷಣಿಕ ಅರ್ಹತೆ ಕುರಿತು ಮಾಹಿತಿ ಪಡೆಯಲು ದಯವಿಟ್ಟು ಇಲಾಖೆಯ ಅಧಿಸೂಚನೆಯನ್ನು ಗಮನಿಸಿ )
ವಯಸ್ಸಿನ ಮಿತಿ :
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಇಲಾಖೆಯ ಹುದ್ದೆಗಳಿಗೆ ಅನುಸಾರವಾಗಿ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ ವಯೋಮಿತಿಯನ್ನು ನಿಗದಿಪಡಿಸಿದೆ.
ವಯೋಮಿತಿ ಸಡಿಲಿಕೆ ವಿವರಣೆ:
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಅನುಸಾರ ವಯೋಮಿತಿಯನ್ನು ನಿಗದಿಪಡಿಸಿದೆ.
ಅರ್ಜಿ ಶುಲ್ಕ :
ಪಶು ಪ್ರಚಾರಕ ವಿಸ್ತರಣೆ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ 944/-
ಪಶು ಸಾಕಣೆ ಸಹಾಯಕ ಹುದ್ದೆ ಅರ್ಜಿ ಶುಲ್ಕ 825/-
ಹಸು ಸೇವಕ ಹುದ್ದೆಗೆ : ಅರ್ಜಿ ಶುಲ್ಕ 708/-
ಆಯ್ಕೆ ವಿಧಾನ :
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಇಲಾಖೆಯ ನಿಯಮಗಳು ಅನುಸಾರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ ಹಾಗೂ ಸಂದರ್ಶನ ನಡೆಸಿ ನೇಮಕಾತಿ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬೇಕು. ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿ ಹಾಗೂ ಅರ್ಹತೆಯನ್ನು ಹೊಂದಿದ್ದರೆ ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿಕೊಂಡು ಹುದ್ದೆಗಳಿಗೆ ಅಗತ್ಯ ಇರುವ ಅಥವಾ ಪೂರಕ ದಾಖಲಾತಿಗಳನ್ನ ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸ ಬೇಕು. ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ವೇಳೆ ಏನಾದರೂ ತಂತ್ರಜ್ಞಾನ ದೋಷಗಳು ಕಂಡುಬಂದರೆ ಅರ್ಜಿಯನ್ನು ಕೆಲವು ಸಮಯದ ನಂತರ ಸಲ್ಲಿಸಿ.
ಹಂತ 1 : ಅಭ್ಯರ್ಥಿಯ ಮೊದಲನೇದಾಗಿ ಇಲಾಖೆಯ ಅಂತರ್ಜಾಲಕ್ಕೆ ಭೇಟಿ ನೀಡಿ ಅಥವಾ ನಾವು ಈ ಕೆಳಗೆ ನೀಡಿರುವ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಹಂತ 2 : ಅರ್ಜಿಯನ್ನು ಸಲ್ಲಿಸುವ ವೇಳೆ ಬೇಕಾಗುವ ದಾಖಲಾತಿಗಳನ್ನು ಸಿದ್ಧವಾಗಿರಿಸಿ. ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸದ ಪುರಾವೆ, ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳು, ಮೊಬೈಲ್ ಸಂಖ್ಯೆ ಇಮೇಲ್ ಐಡಿ ಇತ್ಯಾದಿ ಮುಂತಾದವುಗಳನ್ನು ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ನೀಡಬೇಕು.
ಹಂತ 3 : ಅರ್ಜಿಯನ್ನು ಸಲ್ಲಿಸಬೇಡಿ ಬೇಕಾಗುವ ಪ್ರಮುಖ ದಾಖಲಾತಿಗಳನ್ನ ಸಲ್ಲಿಸುವಂತೆ ಸೂಚಿಸಿದರೆ ಅವುಗಳನ್ನ ಅಗತ್ಯವಾಗಿ ಲಗತ್ತಿಸಬೇಕು.
ಹಂತ 4 : ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಿದ ಬಳಿಕ ಕೊನೆಯದಾಗಿ ನೀವು ನೀಡಿದ ಅಥವಾ ನೀವು ನಮೂದಿಸಿದ ಮಾಹಿತಿಯು ಸರಿಯಾಗಿದೆ ಎಂದು ಪರಿಶೀಲಿಸಿ ತದನಂತರ ಅರ್ಜಿಯನ್ನ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸಿದ ನಮೂನೆಯನ್ನ ಡೌನ್ಲೋಡ್ ಮಾಡಿಕೊಂಡು ಮುದ್ರಣ ಮಾಡಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 26 ಜುಲೈ 2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 05 ಅಗಸ್ಟ್ 2024
Job Alert : ಬೆಂಗಳೂರು ನಗರ ಗ್ರಾಮ ಪಂಚಾಯತ್ ಇಲಾಖೆ ನೇಮಕಾತಿ 2024
Apply Link | Click |
Notification Link | Click |
Telegram Join Link | Click |
Click | |
WhatsApp channel | Click |
ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ಆದಷ್ಟು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ ಹಾಗೂ facebook ಗ್ರೂಪ್ ಗಳ ಮೂಲಕ ಹಂಚಿಕೊಳ್ಳಿ ಉದ್ಯೋಗ ಮಾಹಿತಿ ಬಯಸುವ ಅಭ್ಯರ್ಥಿಗಳಿಗೆ ಶೇರ್ ಮಾಡಿ.