RRB Technician Recruitment 2024: ರೈಲ್ವೆ ನೇಮಕಾತಿ ಮಂಡಳಿ ಇಲಾಖೆ ನೇಮಕಾತಿ 2024 ಕಾಲಿ ಇರುವ 14298 ವಿವಿಧ ಹುದ್ದೆಗಳಿಗೆ 10ನೇ ತರಗತಿ/ದ್ವಿತೀಯ ಪಿಯುಸಿ ಹಾಗೂ ಪದವಿ ಪಾಸಾದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಕರ್ನಾಟಕದಲ್ಲಿ ಸಹ ಖಾಲಿ ಇದ್ದು ಆಸಕ್ತಿ ಹಾಗೂ ಅರ್ಹತೆ ಪಡೆದ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ರೈಲ್ವೆ ನೇಮಕಾತಿ ಮಂಡಳಿ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆ/ ಆಯ್ಕೆ ವಿಧಾನ/ ಅರ್ಜಿ ಸಲ್ಲಿಸುವ ವಿಧಾನ ಹಾಗೂ ವೇತನ ಶ್ರೇಣಿ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ. ದಯವಿಟ್ಟು ಅಭ್ಯರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ತದನಂತರ ಅರ್ಜಿ ಸಲ್ಲಿಸಿ.
RRB Technician Recruitment 2024: Details of posts
ನೇಮಕಾತಿ ಇಲಾಖೆ ಹೆಸರು : ರೈಲ್ವೆ ನೇಮಕಾತಿ ಮಂಡಳಿ
ಹುದ್ದೆಗಳ ಹೆಸರು :
1. ಟೆಕ್ನಿಷಿಯನ್ (ಗ್ರೇಡ್ |||): 8052 ಹುದ್ದೆಗಳು
( ಕ್ರೇನ್ ಡ್ರೈವರ್, ಡೀಸೆಲ್ ಎಲೆಕ್ಟ್ರಿಕಲ್, ಡೀಸೆಲ್ ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಟಿ ಆರ್ ಎಸ್, ಫಿಟ್ಟರ್, ಇಎಮ್ ಯು, ಪರ್ಮೆಂಟ್ ವೇ, ರೆಫ್ರಿಜರೇಷನ್ ಅಂಡ್ ಎಸಿ, ರಿವೆಟರ್, ಎಸ್ & ಟಿ, ಟ್ರ್ಯಾಕ್ ಮಿಷನ್, ಟರ್ನರ್, ವೆಲ್ಡರ್, ಗ್ಯಾರೇಜ್ ಮತ್ತು ವ್ಯಾಗನ್, ಬ್ಲಾಕ್ ಸ್ಮಿತ್, ಬ್ರಿಡ್ಜ್)
2. ಟೆಕ್ನಿಷಿಯನ್ (ಗ್ರೇಡ್-1) ಸಿಗ್ನಲ್: ಒಟ್ಟು 1092 ಹುದ್ದೆಗಳು
3. ಟೆಕ್ನಿಷಿಯನ್ (ಗ್ರೇಡ್-|||): ಒಟ್ಟು 5154 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ :
ರೈಲ್ವೆ ನೇಮಕಾತಿ ಮಂಡಳಿ ಇಲಾಖೆಯಲ್ಲಿ ಒಟ್ಟು 14298 ಹುದ್ದೆಗಳು ಖಾಲಿ ಇವೆ.
ವೇತನ ಶ್ರೇಣಿ :
ರೈಲ್ವೆ ನೇಮಕಾತಿ ಮಂಡಳಿ ಇಲಾಖೆಯ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ 19900 ರಿಂದ 68000/- ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ.
ವಿಶೇಷ ಸೂಚನೆ – ನಾವು ನೀಡುವ ಎಲ್ಲಾ ತರದ ಉದ್ಯೋಗದ ಮಾಹಿತಿಯು ಸಂಪೂರ್ಣವಾಗಿ ಉಚಿತವಾಗಿದ್ದು ನಾವು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಳ್ಳುವುದಿಲ್ಲ ಹಾಗೂ ತೆಗೆದುಕೊಂಡಿರುವುದಿಲ್ಲ. ಒಂದು ವೇಳೆ Karnataka news hunter ಹೆಸರಿನಿಂದ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಯಾವುದೇ ರೀತಿಯ ಹಣವನ್ನು ಪಾವತಿ ಮಾಡಬೇಡಿ. ಹಾಗೂ ಈ ಕುರಿತು ಮಾಹಿತಿಯನ್ನು ನಮ್ಮ ವಾಟ್ಸಪ್ ನಂಬರ್ 8050798925 ಮೆಸೇಜ್ ಮಾಡಿ. ಸುರಕ್ಷಿತವಾಗಿರಿ ಮೋಸ ಹೋಗದಿರಿ.
Eligibility criteria for RRB Technician Recruitment 2024
ಶೈಕ್ಷಣಿಕ ಅರ್ಹತೆ :
ಟೆಕ್ನಿಷಿಯನ್ ಗ್ರೇಡ್-3ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪಾಸ್ ಆಗಿರಬೇಕು ಇದರ ಜೊತೆಗೆ ಸಂಬಂಧಿತ ಟ್ರೇಡ್ ಪ್ರಮಾಣ ಪತ್ರ ಪಡೆದಿರಬೇಕು.
ಟೆಕ್ನಿಷಿಯನ್ ಗ್ರೇಡ್-1: ಹುದ್ದೆಗಳಿಗೆ ಅಭ್ಯರ್ಥಿಯ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರ ಎಲೆಕ್ಟ್ರಾನಿಕ್ಸ್ ಕಂಪ್ಯೂಟರ್ ಸೈನ್ಸ್/ ಮಾಹಿತಿ ತಂತ್ರಜ್ಞಾನ/ ಇನ್ಸ್ಟ್ರೋಮೇಷನ್ ನಲ್ಲಿ ಬ್ಯಾಚುರಲ್ ಆಫ್ ಸೈನ್ಸ್ ಪಡೆದಿರಬೇಕು ಅಥವಾ ಮನೆತ ಪಡೆದ ಸಂಸ್ಥೆಯಿಂದ B.Sc/ ಭೌತಶಾಸ್ತ್ರ/ ಕಂಪ್ಯೂಟರ್ ಸೈನ್ಸ್/ಎಲೆಕ್ಟ್ರಾನಿಕ್ಸ್/ ಮಾಹಿತಿ ತಂತ್ರಜ್ಞಾನ ಶೈಕ್ಷಣಿಕ ಅರ್ಹತೆ ಪಡೆದಿರಬೇಕು.
( ಶೈಕ್ಷಣಿಕ ಅರ್ಹತೆ ಕುರಿತು ಮಾಹಿತಿ ಪಡೆಯಲು ದಯವಿಟ್ಟು ಇಲಾಖೆಯ ಅಧಿಸೂಚನೆಯನ್ನು ಗಮನಿಸಿ )
ವಯಸ್ಸಿನ ಮಿತಿ :
ರೈಲ್ವೆ ನೇಮಕಾತಿ ಮಂಡಳಿ ಇಲಾಖೆಯ ವಿವಿಧ ಹುದ್ದೆಗಳಿಗೆ ಅನುಸಾರವಾಗಿ ಕನಿಷ್ಠ 18 ವರ್ಷ ಗರಿಷ್ಠ 40 ವರ್ಷ ವಯೋಮಿತಿಯನ್ನು ನಿಗದಿಪಡಿಸಿದೆ.
ವಯೋಮಿತಿ ಸಡಿಲಿಕೆ ವಿವರಣೆ:
ರೈಲ್ವೆ ನೇಮಕಾತಿ ಮಂಡಳಿ ಇಲಾಖೆಯ ನಿಯಮಗಳು ಅನುಸಾರ ವಯೋಮಿತಿ ಸಡಿಲಿಕೆ ನಿಗದಿಪಡಿಸಿದೆ.
ಅರ್ಜಿ ಶುಲ್ಕ :
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ – 500/-
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ – 250/-
• ಮಹಿಳಾ ಅಭ್ಯರ್ಥಿಗಳಿಗೆ: 250/-
• 2a/2b/3a/3b ಅಭ್ಯರ್ಥಿಗಳಿಗೆ – 500/-
• ಅಂಗವಿಕಲ ಅಭ್ಯರ್ಥಿಗಳಿಗೆ : 250/-
( ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳಿಗೆ ನಿಯಮಗಳ ಅನುಸಾರದ ಅರ್ಜಿ ಶುಲ್ಕವನ್ನು ಮರುಪಾವತಿ ಮಾಡಲಾಗುತ್ತದೆ )
How to apply online for RRB Technician Recruitment 2024
ಆಯ್ಕೆ ವಿಧಾನ :
ರೈಲ್ವೆ ನೇಮಕಾತಿ ಮಂಡಳಿ ಇಲಾಖೆಯ ನಿಯಮಗಳು ಅನುಸಾರ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:
ರೈಲ್ವೆ ನೇಮಕಾತಿ ಮಂಡಳಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಅರ್ಜಿಗಳನ್ನು ಸಲ್ಲಿಸಬೇಕು. ರೈಲ್ವೆ ನೇಮಕಾತಿ ಮಂಡಳಿ ಇಲಾಖೆಯ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿ ಹಾಗೂ ಅರ್ಹತೆಯನ್ನು ಹೊಂದಿದ್ದರೆ ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿಕೊಂಡು ಹುದ್ದೆಗಳಿಗೆ ಅಗತ್ಯ ಇರುವ ಅಥವಾ ಪೂರಕ ದಾಖಲಾತಿಗಳನ್ನ ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸ ಬೇಕು. ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ವೇಳೆ ಏನಾದರೂ ತಂತ್ರಜ್ಞಾನ ದೋಷಗಳು ಕಂಡುಬಂದರೆ ಅರ್ಜಿಯನ್ನು ಕೆಲವು ಸಮಯದ ನಂತರ ಸಲ್ಲಿಸಿ.
Step by step application process
ಹಂತ 1 : ಅಭ್ಯರ್ಥಿಯ ಮೊದಲನೇದಾಗಿ ಇಲಾಖೆಯ ಅಂತರ್ಜಾಲಕ್ಕೆ ಭೇಟಿ ನೀಡಿ ಅಥವಾ ನಾವು ಈ ಕೆಳಗೆ ನೀಡಿರುವ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಹಂತ 2 : ಅರ್ಜಿಯನ್ನು ಸಲ್ಲಿಸುವ ವೇಳೆ ಬೇಕಾಗುವ ದಾಖಲಾತಿಗಳನ್ನು ಸಿದ್ಧವಾಗಿರಿಸಿ. ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸದ ಪುರಾವೆ, ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳು, ಮೊಬೈಲ್ ಸಂಖ್ಯೆ ಇಮೇಲ್ ಐಡಿ ಇತ್ಯಾದಿ ಮುಂತಾದವುಗಳನ್ನು ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ನೀಡಬೇಕು.
ಹಂತ 3 : ಅರ್ಜಿಯನ್ನು ಸಲ್ಲಿಸಬೇಡಿ ಬೇಕಾಗುವ ಪ್ರಮುಖ ದಾಖಲಾತಿಗಳನ್ನ ಸಲ್ಲಿಸುವಂತೆ ಸೂಚಿಸಿದರೆ ಅವುಗಳನ್ನ ಅಗತ್ಯವಾಗಿ ಲಗತ್ತಿಸಬೇಕು.
ಹಂತ 4 : ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಿದ ಬಳಿಕ ಕೊನೆಯದಾಗಿ ನೀವು ನೀಡಿದ ಅಥವಾ ನೀವು ನಮೂದಿಸಿದ ಮಾಹಿತಿಯು ಸರಿಯಾಗಿದೆ ಎಂದು ಪರಿಶೀಲಿಸಿ ತದನಂತರ ಅರ್ಜಿಯನ್ನ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸಿದ ನಮೂನೆಯನ್ನ ಡೌನ್ಲೋಡ್ ಮಾಡಿಕೊಂಡು ಮುದ್ರಣ ಮಾಡಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ.
Important dates for RRB Technician Recruitment 2024
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 02 October 2024
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: 16 October 2024
ಮುಖ್ಯ ಸೂಚನೆ:
ಈ ಹಿಂದೆ 9144 ಹುದ್ದೆಗಳ ನೇಮಕಾತಿಗಾಗಿ ಮಾರ್ಚ್ 2024ರಲ್ಲಿ ಇಲಾಖೆಯು ಅರ್ಜಿ ಆಹ್ವಾನಿಸಲಾಗಿತ್ತು ಮತ್ತೆ ಇದೀಗ 5154 ಹೊಸ ಹುದ್ದೆಗಳನ್ನು ಸೇರಿಸಿ ಒಟ್ಟು 14298 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಅವಕಾಶ ಕಲ್ಪಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಿ.
ಉದ್ಯೋಗದ ಸ್ಥಳ: ಭಾರತ
Apply Link | Click |
Notification Link | Click |
Telegram Join Link | Click |
Click | |
WhatsApp channel | Click |
Conclusion :
ನಾವು ನೀಡಿರುವ ಈ ರೈಲ್ವೆ ನೇಮಕಾತಿ ಮಂಡಳಿಣ ಇಲಾಖೆಯ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ಆದಷ್ಟು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ ಹಾಗೂ Facebook ಗ್ರೂಪ್ ಗಳ ಮೂಲಕ ಹಂಚಿಕೊಳ್ಳಿ ಉದ್ಯೋಗ ಮಾಹಿತಿ ಬಯಸುವ ಅಭ್ಯರ್ಥಿಗಳಿಗೆ ಶೇರ್ ಮಾಡಿ.