DHFWS Recruitment 2022 karnataka | 320 posts vacancy | 10th/puc/ jobs 2022 | District Health & Family Welfare Society

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ರಾಜ್ಯದಲ್ಲಿ ಕಾರ್ಯ ಇರುವ ವಿವಿಧ ಅರೆ ವೈದ್ಯಕೀಯ ಹುದ್ದೆಗಳಿಗೆ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬಹುದು. ಈ ಉದ್ಯೋಗದ ಸಂಬಂಧ ಪಟ್ಟ ವಿದ್ಯಾರ್ಹತೆ/ವೇತನ ಶ್ರೇಣಿ/ಕರ್ತವ್ಯದ ಸ್ಥಳ ಹೀಗೆ ಹಲವಾರು ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹುದ್ದೆಗಳ ವಿವರಣೆ :

ನೇಮಕಾತಿ ಇಲಾಖೆ ಹೆಸರು :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಹುದ್ದೆಗಳ ಹೆಸರು :
• ಮನಶಾಸ್ತ್ರಜ್ಞ 03 ಹುದ್ದೆಗಳು
• ಮನೋವೈದ್ಯಕೀಯ ಸಮಾಜ ಸೇವಕ 01 ಹುದ್ದೆ
• ಸೂಕ್ಷ್ಮ ಜೀವಶಾಸ್ತ್ರಜ್ಞ 06 ಹುದ್ದೆಗಳು ಸೈಕಲಾಜಿಸ್ಟ್
• ಸಹಾಯಕ ಕೀಟಶಾಸ್ತ್ರಜ್ಞ 01 ಹುದ್ದೆ
• ಭೌತ ಚಿಕಿತ್ಸೆ 05 ಹುದ್ದೆಗಳು
• ಡೆಂಟಲ್ ಮೆಕಾನಿಕ್ 03 ಹುದ್ದೆಗಳು
• ಜೂನಿಯರ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ ಅಥವಾ ಟೆಕ್ನಿಕಲ್ ಆಫೀಸರ್ ಒಟ್ಟು 54 ಹುದ್ದೆಗಳು
• ನೇತ್ರಾಧಿಕಾರಿ ಅಥವಾ ವಕ್ರೀಭವನ ತಜ್ಞ ಒಟ್ಟು 15 ಹುದ್ದೆಗಳು
• ಫಾರ್ಮಸಿ ಅಧಿಕಾರಿ ಅಥವಾ ಫಾರ್ಮಸಿಸ್ಟ್ 98 ಹುದ್ದೆಗಳು ಖಾಲಿ ಇವೆ
• ಇಸಿಜಿ ತಂತ್ರಜ್ಞಾನ ಅಧಿಕಾರಿ 5 ಹುದ್ದೆಗಳು
• ಡಯಾಲಿಸಿಸ್ ತಂತ್ರಜ್ಞಾನ ಅಧಿಕಾರಿ ಒಟ್ಟು 02 ಹುದ್ದೆಗಳು
• ಕಿರಿಯ ಆರೋಗ್ಯ ಸಹಾಯಕ ಒಟ್ಟು 126 ಹುದ್ದೆಗಳು
• ಎಲೆಕ್ಟ್ರಿಕೇಶನ ಒಟ್ಟು ಒಂದು ಹುದ್ದೆ ಖಾಲಿ ಇದೆ

ಒಟ್ಟು ಹುದ್ದೆಗಳ ಸಂಖ್ಯೆ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಒಟ್ಟು 320 ಹುದ್ದೆಗಳು ಖಾಲಿ ಇವೆ.

ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆ :

1) ಕಿರಿಯ ಆರೋಗ್ಯ ಸಹಾಯಕ ಮತ್ತು ಎಲೆಕ್ಟ್ರಿಕೇಶನ ಹಾಗೂ ಡೆಂಟಲ್ ಮೆಕಾನಿಕ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು

2) ಡಯಾಲಿಸಿಸ್ ತಂತ್ರಜ್ಞಾನ ಅಧಿಕಾರಿ ಹುದ್ದೆಗಳಿಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ಡಿಪ್ಲೋಮೋ ಇನ್ ಡಯಾಲಿಸಿಸ್ ಟೆಕ್ನಾಲಜಿ ಯಲ್ಲಿ ಪರಿಣಿತಿ ಪಡೆದಿರಬೇಕು.

3) ಇಸಿಜಿ ತಂತ್ರಜ್ಞಾನ ಹುದ್ದೆಗಳಿಗೆ ಅಭ್ಯರ್ಥಿಗಳು ಡಿಗ್ರಿ / ಬಿ ಎಸ್ ಸಿ ಇನ್ ಕೇರ್ ಟೆಕ್ನಾಲಜಿ ಪದವಿಯನ್ನು ಪಡೆದಿರಬೇಕು.

4) ಫಾರ್ಮಸಿ ಅಧಿಕಾರಿ ಅಥವಾ ಫಾರ್ಮಸಿಸ್ಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು 10ನೇ ತರಗತಿ ಅಥವಾ ಡಿಪ್ಲೋಮೋ ಇನ್ ಫಾರ್ಮಲಜಿ ಪದವಿಯನ್ನು ಪಡೆದಿರಬೇಕು.

Join Now

5) ನೇತ್ರಾಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ನೇತ್ರ ತಂತ್ರಜ್ಞಾನದಲ್ಲಿ ಡಿಪ್ಲೋಮೋ ಪಡೆದಿರಬೇಕು.

6) ಜೂನಿಯರ್ ಮೆಡಿಕಲ್ ಮ್ಯಾಪ್ ಟೆಕ್ನಾಲಜಿಸ್ಟ್ ಹುದ್ದೆಗಳಿಗೆ 10ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಅಥವಾ ಡಿ ಎಂ ಎಲ್ ಟಿ

7) ಭೌತ ಚಿಕಿತ್ಸಕ ಅಧಿಕಾರಿ ಹುದ್ದೆಗೆ ಪಿಸಿಯೋಥೆರಪಿಯಲ್ಲಿ ಪದವಿಯನ್ನು ಪಡೆದಿರಬೇಕು

8) ಸಹಾಯಕ ಕೀಟ ಶಾಸನ ಅಧಿಕಾರಿ ಈ ಹುದ್ದೆಗೆ ಪ್ರಾಣಿ ಶಾಸ್ತ್ರಜ್ಞದಲ್ಲಿ ಎಂ ಎಸ್ ಸಿ ಪದವಿ ಪಡೆದಿರಬೇಕು

9) ಸೂಕ್ಷ್ಮ ಶಾಸ್ತ್ರಜ್ಞ ಈ ಹುದ್ದೆಗೆ ಮೈಕ್ರೋ ಬಯಲಜಿಯಲ್ಲಿ ಎಂ ಎಸ್ ಸಿ ಪದವಿಯನ್ನು ಪಡೆದಿರಬೇಕು

10) ಮನೋವೈದ್ಯಕೀಯ ಸಮಾಜ ಸೇವಕ ಹುದ್ದೆಗೆ ಎಂ ಎ ಸಮಾಜ ಕಾರ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು

11) ಮನಶಾಸ್ತ್ರಜ್ಞ ಹುದ್ದೆಗೆ ಅಭ್ಯರ್ಥಿಗಳು ಮನಶಾಸ್ತ್ರದಲ್ಲಿ ಎಂ ಎಸ್ ಸಿ ಅಥವಾ ಎಂಎ ಪದವಿಯನ್ನು ಪಡೆದಿರಬೇಕು.

ಹುದ್ದೆಗಳಿಗೆ ನಿಗದಿಪಡಿಸಿದ ವಯಸ್ಸಿನ ಮಿತಿ :

ವಯೋಮಿತಿ :
ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ನಿಗದಿಪಡಿಸಲಾಗಿದೆ ಮೀಸಲಾತಿಗೆ ಅನುಗುಣವಾಗಿ
• 2A 2B 3A 3B ಅಭ್ಯರ್ಥಿಗಳಿಗೆ 3 ವರ್ಷ
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಐದು ವರ್ಷ ನಿಗದಿಪಡಿಸಲಾಗಿದೆ

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹುದ್ದೆಗಳಿಗೆ ನಿಗದಿಪಡಿಸಿದ ಅರ್ಜಿಯ ಶುಲ್ಕದ ವಿವರಣೆ

ಅರ್ಜಿಯ ಶುಲ್ಕ :
• ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 700
• 2A 2B 3A 3B ಅಭ್ಯರ್ಥಿಗಳಿಗೆ 400
• ಮಾಜಿ ಸೈನಿಕ ಅಭ್ಯರ್ಥಿಗಳಿಗೆ 200
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ರೂ.100

ವೇತನ ಶ್ರೇಣಿ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ ಮಾಸಿಕವಾಗಿ 40900-78200/-ವೇತನ ನಿಗದಿಪಡಿಸಲಾಗಿದೆ.

ಹುದ್ದೆಗಳಿಗೆ ಯಾವ ರೀತಿ ಅರ್ಜಿಯನ್ನು ಸಲ್ಲಿಸಬೇಕು

ಅರ್ಜಿ ಸಲ್ಲಿಸುವ ವಿಧಾನ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹುದ್ದೆಗಳಿಗೆ ಅರ್ಜಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.

ಹುದ್ದೆಗಳಿಗೆ ನಿಗದಿಪಡಿಸಿದ ಪ್ರಮುಖ ದಿನಾಂಕಗಳ ವಿವರಣೆ:

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ 29 ಆಗಸ್ಟ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 28 ಸಪ್ಟಂಬರ್.

ಸೂಚನೆ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಸಕ್ತ ಅಭ್ಯರ್ಥಿಗಳು ದಯವಿಟ್ಟು ಇಲಾಖೆಯ ಅಧಿಕೃತ ವೆಬ್ಸೈಟ್ ಹಾಗೂ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ ಅರ್ಜಿಯನ್ನು ಸಲ್ಲಿಸಬಹುದು.

ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಈ ಉದ್ಯೋಗದ ಮಾಹಿತಿಯನ್ನು ಪ್ರತಿಯೊಬ್ಬ ಅಭ್ಯರ್ಥಿಗೂ ಶೇರ್ ಮಾಡಿ.

Spread the love