ಆಹಾರ ಇಲಾಖೆ ನೇಮಕಾತಿ 2022 ಆಹಾರ ಇಲಾಖೆಯಲ್ಲಿ ಖಾಲಿ ಇರುವ 5043 ವಿವಿಧ ಹುದ್ದೆಗಳಿಗೆ ಆಸಕ್ತಿ ಹಾಗೂ ಅರ್ಹತೆ ಪಡೆದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತವೆ ಹಾಗೂ ಈ ಹುದ್ದೆಗಳು ಖಾಯಂ ಉದ್ಯೋಗಗಳಾಗಿರುತ್ತವೆ. ಆದಷ್ಟು ಅರ್ಹತೆ ಪಡೆದ ಅಭ್ಯರ್ಥಿಗಳು ಇಲಾಖೆಯ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಭಾರತೀಯ ಆಹಾರ ಇಲಾಖೆ ನೇಮಕಾತಿ ಕುರಿತಾದ ಹುದ್ದೆಗಳ ವಿವರಣೆ :
ನೇಮಕಾತಿ ಇಲಾಖೆ ಹೆಸರು : ಭಾರತೀಯ ಆಹಾರ ಇಲಾಖೆ ನೇಮಕಾತಿ
ಒಟ್ಟು ಹುದ್ದೆಗಳ ಸಂಖ್ಯೆ :
ಭಾರತೀಯ ಆಹಾರ ಇಲಾಖೆಯಲ್ಲಿ ಒಟ್ಟು 5043 ಹುದ್ದೆಗಳು ಖಾಲಿ ಇವೆ
ಕರ್ನಾಟಕದಲ್ಲಿ ಒಟ್ಟು 113 ಹುದ್ದೆಗಳು ಖಾಲಿ ಇವೆ
FIC ಹುದ್ದೆಗಳ ಹೆಸರು :
ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ
ಜೂನಿಯರ್ ಇಂಜಿನಿಯರ್ ( ಸಿವಿಲ್ ಇಂಜಿನಿಯರಿಂಗ್ ) | 48 |
ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್ / ಮೆಕ್ಯಾನಿಕಲ್ ಇಂಜಿನಿಯರಿಂಗ್) | 15 |
ಸ್ಟೆನೋ ಗ್ರೇಡ್-II | 73 |
AG-III (ಸಾಮಾನ್ಯ) | 948 |
AG-III (ಖಾತೆಗಳು) | 406 |
AG-III (ತಾಂತ್ರಿಕ) | 1406 |
AG-III (ಡಿಪೋ | 2054 |
AG-III (ಹಿಂದಿ) | 93 |
ಭಾರತೀಯ ಆಹಾರ ಇಲಾಖೆ ವಿವಿಧ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ :
ವಿದ್ಯಾರ್ಹತೆ :
• ಜೂನಿಯರ್ ಇಂಜಿನಿಯರ್ ( ಸಿವಿಲ್ ಇಂಜಿನಿಯರಿಂಗ್ ) – ಈ ಹುದ್ದೆಗೆ ಅಭ್ಯರ್ಥಿಯು ಸಿವಿಲ್ ಎಂಜಿನಿಯರಿಂಗ್ ನಲ್ಲಿ ಪದವಿ ಅಥವಾ ಸಿವಿಲ್ ಎಂಜಿನಿಯರಿನಲ್ಲಿ ಡಿಪ್ಲೋಮೋ ಒಂದು ವರ್ಷದ ಅನುಭವವನ್ನು ಪಡೆದಿರಬೇಕು.
• ಜೂನಿಯರ್ ಇಂಜಿನಿಯರ್ (ಎಲೆಕ್ಟ್ರಿಕಲ್ / ಮೆಕ್ಯಾನಿಕಲ್ ಇಂಜಿನಿಯರಿಂಗ್) – ಈ ಹುದ್ದೆಗೆ ಅಭ್ಯರ್ಥಿಯು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಅಥವಾ ಮೆಕಾನಿಕಲ್ ಎಂಜಿನಿಯರಿಂಗ್ ನಲ್ಲಿ ಪದವಿ ಅಥವಾ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ನಲ್ಲಿ ಡಿಪ್ಲೋಮೋ ಮತ್ತು ಒಂದು ವರ್ಷದ ಅನುಭವ ಹೊಂದಿರಬೇಕು.
• ಸ್ಟೆನೋ ಗ್ರೇಡ್-II – ಈ ಹುದ್ದೆಗೆ ಅಭ್ಯರ್ಥಿಯು ಇಂಗ್ಲಿಷ್ ಟೈಪಿಂಗ್ ಮತ್ತು ಶಾರ್ಟ್ ಹ್ಯಾಂಡ್ ನಲ್ಲಿ ಕ್ರಮವಾಗಿ 40 vpm 80 vpm ವೇಗದೊಂದಿಗೆ ಟೈಪಿಂಗ್ ಮಾಡುವ ಪದವಿಯನ್ನು ಪಡೆದಿರಬೇಕು.
• AG-III (ಸಾಮಾನ್ಯ) – ಈ ಹುದ್ದೆಗಳಿಗೆ ಅಭ್ಯರ್ಥಿಯು ಕಂಪ್ಯೂಟರ್ ಬಳಕೆಯಲ್ಲಿ ಪ್ರಾವಿಣ್ಯತೆ ಹೊಂದಿರವ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
• AG-III (ಖಾತೆಗಳು) – ಈ ಹುದ್ದೆಗಳಿಗೆ ಅಭ್ಯರ್ಥಿಯು ಕಂಪ್ಯೂಟರ್ ಬಳಕೆಯಲ್ಲಿ ಪ್ರಾವೀಣ್ಯತೆ ಹೊಂದಿರುವ ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿ ಪದವಿಯನ್ನು ಪಡೆದಿರಬೇಕು.
• AG-III (ಖಾತೆಗಳು) – ಕಂಪ್ಯೂಟರ್ ಬಳಕೆಯಲ್ಲಿ ಪ್ರಾವಿಣ್ಯತೆ ಹೊಂದಿರುವ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿ ಪಡೆದಿರಬೇಕು.
• AG-III (ತಾಂತ್ರಿಕ) – ಈ ಹುದ್ದೆಗಳಿಗೆ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ B.sc ಅಥವಾ ಬಿ.ಎಸ್ಸಿ.ಯಲ್ಲಿ ಈ ಕೆಳಗಿನ ಯಾವುದಾದರೂ ಒಂದು ವಿಷಯದೊಂದಿಗೆ : ಸಸ್ಯಶಾಸ್ತ್ರ/ ಪ್ರಾಣಿಶಾಸ್ತ್ರ/ ಜೈವಿಕ ತಂತ್ರಜ್ಞಾನ /ಜೈವಿಕ ರಾಸಾಯನಶಾಸ್ತ್ರ / ಸೂಕ್ಷ್ಮ ಜೀವವಿಜ್ಞಾನ / ಆಹಾರ ವಿಜ್ಞಾನ ಅಥವಾ ಬಿ ಟೆಕ್ ಬಿಇ ನಲ್ಲಿ ಆಹಾರ ವಿಜ್ಞಾನ ಅಥವಾ ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ ಅಥವಾ ಕೃಷಿ ಇಂಜಿನಿಯರಿಂಗ್ ಅಥವಾ ಜೈವಿಕ ತಂತ್ರಜ್ಞಾನ ಅಥವಾ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಬಳಕೆಯಲ್ಲಿ ಪರಿಣಿತಿ ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
• AG-III (ಡಿಪೋ) – ಈ ಹುದ್ದೆಗಳಿಗೆ ಯಾವುದೇ ಪದವಿಯಲ್ಲಿ ಅಭ್ಯರ್ಥಿಗಳು ಹಾಗೂ ಕಂಪ್ಯೂಟರ್ ಬಳಕೆಯಲ್ಲಿ ಪ್ರಾವಿಣ್ಯತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
• AG-III (ಹಿಂದಿ) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹಿಂದಿಯನ್ನ ಒಂದು ಮುಖ್ಯ ವಿಷಯವಾಗಿ ಹೊಂದಿರುವ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು. ಹಾಗೂ ಹಿಂದಿಯನ್ನು ಇಂಗ್ಲಿಷ್ ಭಾಷೆಗೆ ಅನುವಾದ ಮಾಡುವ ಕೌಶಲ್ಯ ಹೊಂದಿರಬೇಕು ಇದಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿ ಪಡೆದ ಸಂಸ್ಥೆಯಿಂದ ಅಥವಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು.
ವಯಸ್ಸಿನ ಮಿತಿ :
ಭಾರತೀಯ ಆಹಾರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ಇಲಾಖೆಯು ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಕನಿಷ್ಠ ವಯಸ್ಸಿನ ಮಿತಿ 18 ನಿಗದಿಪಡಿಸಲಾಗಿದೆ.
ಗರಿಷ್ಠ ವಯಸ್ಸಿನ ಮಿತಿ :
ಗರಿಷ್ಠ ವಯಸ್ಸಿನ ಮಿತಿಯನ್ನು ಪಡೆಯಲು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
ವೇತನ ಶ್ರೇಣಿ :
ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಮಾಸಿಕವಾಗಿ 28,200 ಯಿಂದ 88,100 ಇರುತ್ತದೆ.
ಆಯ್ಕೆ ವಿಧಾನ :
ಭಾರತೀಯ ಆಹಾರ ಇಲಾಖೆಯ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದ ಅಭ್ಯರ್ಥಿಗಳನ್ನು
• ಆನ್ಲೈನ್ ಪರೀಕ್ಷೆ ಹಾಗೂ
• ಪ್ರಮಾಣ ಪತ್ರ ಪರಿಶೀಲನೆ
( ತಮಿಳುನಾಡಿನ ಮೊದಲ ಹಂತದ ಪರೀಕ್ಷೆ ಕೇಂದ್ರ ಚೆನ್ನೈ/ ಕೊಯಂಬತ್ತೂರ್/ ಮಧುರೈ/ ಸೇಲಂ/ ತಿರುಚಿರಾಪಳ್ಳಿ/ ವೆಲ್ಲೂರ್ )
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಅರ್ಜಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.
ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು :
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 6 ಸಪ್ಟಂಬರ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 05 ಅಕ್ಟೋಬರ್ 2022.
ಸೂಚನೆ :
ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆಯ ಅಧಿಕೃತ ವೆಬ್ಸೈಟ್ ಹಾಗೂ ಅಧಿಕೃತ ಅಧಿಸೂಚನೆಯನ್ನು ಗಮನಿಸಿ ಸ್ಪಷ್ಟವಾಗಿ ಓದಿಕೊಂಡು ತದನಂತರದಲ್ಲಿ ಅರ್ಜಿಯನ್ನು ಸಲ್ಲಿಸಿ.
ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ ಫೇಸ್ಬುಕ್ ಗ್ರೂಪ್ಗಳ ಮೂಲಕ ಹಂಚಿಕೊಳ್ಳಿ.