ಅರಣ್ಯ ಇಲಾಖೆ ನೇಮಕಾತಿ 2022 ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ 1,218 ಅರಣ್ಯ ಅಧಿಕಾರಿ ಹುದ್ದೆಗಳಿಗೆ ಆಸಕ್ತಿ ಹೊಂದಿರುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಕರ್ನಾಟಕದ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು ಉದ್ಯೋಗಕ್ಕೆ ಸಂಬಂಧಿಸಿದ ವೇತನ ಶ್ರೇಣಿ / ಆಯ್ಕೆ ವಿಧಾನ / ಉದ್ಯೋಗ ಸ್ಥಳ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
ಅರಣ್ಯ ಇಲಾಖೆಯ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ವಿವರಣೆ :
ನೇಮಕಾತಿ ಇಲಾಖೆ ಹೆಸರು :
ಸಂಸದ ಅರಣ್ಯ ಇಲಾಖೆ ನೇಮಕಾತಿ
ಹುದ್ದೆಗಳ ಹೆಸರು :
• ಅರಣ್ಯ ಅಧಿಕಾರಿ
• ಮಲ್ಟಿ ಟಾಸ್ಕಿಂಗ್ ಸ್ಟಾಪ್ ( MTS )
• ಪ್ರಾಣಿ ರಕ್ಷಕ
ಒಟ್ಟು ಹುದ್ದೆಗಳ ಸಂಖ್ಯೆ :
ಭಾರತೀಯ ಸಂಸದ ಅರಣ್ಯ ಇಲಾಖೆಯಲ್ಲಿ ಒಟ್ಟು 1,218 ಹುದ್ದೆಗಳು ಖಾಲಿ ಇವೆ.
ಅರಣ್ಯ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದ ವೇತನ ಶ್ರೇಣಿ :
ಅರಣ್ಯ ರಕ್ಷಕ :
ಅರಣ್ಯ ರಕ್ಷಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯು ಮಾಸಿಕವಾಗಿ 20,000 ರಿಂದ 69,100/- ವೇತನ ಇರುತ್ತದೆ.
ಅರಣ್ಯ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆ :
ವಿದ್ಯಾರ್ಹತೆ :
ಸಂಸದ ಅರಣ್ಯ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಉಪಯೋಗಿಸುವ ಅಭ್ಯರ್ಥಿಯು ಯಾವುದೇ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು ಅಥವಾ ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು.
ಅರಣ್ಯ ಹುದ್ದೆಗಳಿಗೆ ನಿಗದಿಪಡಿಸಿದ ವಯಸ್ಸಿನ ಮಿತಿ :
ವಯೋಮಿತಿ :
ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಕನಿಷ್ಠ ವಯಸ್ಸು 18 ಗರಿಷ್ಠ ವಯಸ್ಸು 27 ವರ್ಷಗಳು
ವಯಮಿತಿಯಲ್ಲಿ ಸಡಿಲಿಕೆ :
• ಒಬಿಸಿ ವರ್ಗದವರಿಗೆ 3 ವರ್ಷ ಸಡಿಲಿಕೆ ಇರುತ್ತದೆ
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಐದು ವರ್ಷ ವಯಸ್ಸಿನಲ್ಲಿ ಸಡಿಲಿಕೆ ಇರುತ್ತದೆ
ಉದ್ಯೋಗದ ಸ್ಥಳ :
ಭಾರತೀಯ ಅರಣ್ಯ ಇಲಾಖೆಯು ಖಾಲಿ ಇರುವ 1,218 ಹುದ್ದೆಗಳಿಗೆ ಭಾರತದಾದ್ಯಂತ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಹುದ್ದೆಗಳಿಗೆ ಕರ್ನಾಟಕದ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು ಹೆಚ್ಚಿನ ಮಾಹಿತಿ ಪಡೆಯಲು ದಯವಿಟ್ಟು ಇಲಾಖೆಯ ಅಧಿಸೂಚನೆಯನ್ನು ಗಮನಿಸಿ
ಅರ್ಜಿ ಶುಲ್ಕ :
• ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ 100/-ರೂ
• ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ
ಅರಣ್ಯ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದ ದೈಹಿಕ ಪರೀಕ್ಷೆಯ ವಿವರಣೆ :
• ಪುರುಷ ಅಭ್ಯರ್ಥಿಗಳಿಗೆ 165cm ( ಎತ್ತರ )
• ಮಹಿಳಾ ಅಭ್ಯರ್ಥಿಗಳಿಗೆ 152 cm ( ಎತ್ತರ )
• ಉತ್ತರ ಭಾರತ ವಲಯದ ಪುರುಷ ಅಭ್ಯರ್ಥಿಗಳಿಗೆ 162.5 ಸೆಂಟಿಮೀಟರ್ ಮತ್ತು ಮಹಿಳಾ ಅಭ್ಯರ್ಥಿಗಳಿಗೆ 150cm
ಎದೆ ಸುತ್ತಳತೆ ಪುರುಷರಿಗೆ ಮಾತ್ರ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಎದೆ ಸುತ್ತಳತೆಯು ಕನಿಷ್ಠ 77-82 ಸೆಂಟಿಮೀಟರ್ ಎದೆ ವಿಸ್ತರಿಸಿದಾಗ 5cm ವಿಸ್ತಾರವಾಗಬೇಕು.
ಓಟದ ಪರೀಕ್ಷೆ ಮತ್ತು ಉದ್ದ ಜಿಗಿತ ಪುರುಷ ಅಭ್ಯರ್ಥಿಗೆ :
5 ಕಿ.ಮೀ 24 ನಿಮಿಷಗಳಲ್ಲಿ ಓಡುವುದು
ಓಟದ ಪರೀಕ್ಷೆ ಮತ್ತು ಉದ್ದ ಜಿಗಿತ ಮಹಿಳಾ ಅಭ್ಯರ್ಥಿಗಳಿಗೆ
1,600 ಮೀಟರ್ ( 1.6 ಕಿಲೋ ಮೀಟರ್ ) ಓಟವನ್ನು 30 ನಿಮಿಷದಲ್ಲಿ ಮುಗಿಸಬೇಕು
ಆಯ್ಕೆ ವಿಧಾನ :
• ಕಿರುಪಟ್ಟಿ
• ಲಿಖಿತ ಪರೀಕ್ಷೆ
• ದೈಹಿಕ ಪರೀಕ್ಷೆ
• ಡಾಕ್ಯುಮೆಂಟ್ ಪರಿಶೀಲನೆ
• ಮೆರಿಟ್ ಲಿಸ್ಟ್
ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು :
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 28 ಸೆಪ್ಟೆಂಬರ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 26 ಅಕ್ಟೋಬರ್ 2022
ಸೂಚನೆ :
ಅರಣ್ಯ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಪ್ರತಿಯೊಬ್ಬ ದಯವಿಟ್ಟು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ ಸ್ಪಷ್ಟವಾಗಿ ಓದಿಕೊಂಡು ತದನಂತರದಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
ಮುಖ್ಯ ಪದಗಳು :
ನಾವು ನೀಡಿರುವ ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಉದ್ಯೋಗ ಮಾಹಿತಿ ಬಯಸುವ ಪ್ರತಿಯೊಬ್ಬ ಶೇರ್ ಮಾಡಿ.