Karnataka labour department recruitment 2022 | KPSC recruitment 2022 | labor intensive posts 2022

ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ( KPSC ) ಇಲಾಖೆ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ ಕಾರ್ಮಿಕ ನಿರೀಕ್ಷಕ ಹುದ್ದೆಗಳಿಗೆ ಅರ್ಹತೆ ಪಡೆದಂತ ಹಾಗೂ ಆಸಕ್ತಿವುಳ್ಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಈ ಹುದ್ದೆಗಳಿಗೆ ಕರ್ನಾಟಕದ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು. ಕಾರ್ಮಿಕ ನಿರೀಕ್ಷಕರ ಹುದ್ದೆಗೆ ಸಂಬಂಧಿಸಿದ ವೇತನ ಶ್ರೇಣಿ / ಆಯ್ಕೆ ವಿಧಾನ / ಅರ್ಜಿ ಸಲ್ಲಿಕೆ ವಿಧಾನ / ಉದ್ಯೋಗದ ಸ್ಥಳ ಮುಂತಾದ ವಿವರಣೆಯನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

ಕರ್ನಾಟಕ ಲೋಕಸೇವಾ ಇಲಾಖೆಯ ಹುದ್ದೆಗಳ ಪ್ರಮುಖ ವಿವರಣೆ :

ನೇಮಕಾತಿ ಇಲಾಖೆಯ ಹೆಸರು :
ಕರ್ನಾಟಕ ಲೋಕಸೇವಾ ಆಯೋಗ

ಹುದ್ದೆಗಳ ಹೆಸರು :
ಕಾರ್ಮಿಕ ನಿರೀಕ್ಷಕ ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ :
ಕರ್ನಾಟಕ ಲೋಕಸೇವಾ ಆಯೋಗ ಇಲಾಖೆಯಲ್ಲಿ ಒಟ್ಟು 20 ಹುದ್ದೆಗಳು ಖಾಲಿ ಇವೆ.

ಕಾರ್ಮಿಕ ನಿರೀಕ್ಷಕ ಹುದ್ದೆಗಳಿಗೆ ನಿಗದಿಪಡಿಸಿದ ಶೈಕ್ಷಣಿಕ ವಿದ್ಯಾರ್ಹತೆ :

ವಿದ್ಯಾರ್ಹತೆ :
ಕರ್ನಾಟಕ ಲೋಕಸೇವಾ ಆಯೋಗ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿ ಪೂರ್ಣಗೊಳಿಸಬೇಕು.

ವಯೋಮಿತಿ :
ಕರ್ನಾಟಕ ಲೋಕಸೇವಾ ಆಯೋಗದ ಇಲಾಖೆಯಲ್ಲಿ ಖಾಲಿ ಇರುವ ಕಾರ್ಮಿಕ ನಿರೀಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಗರಿಷ್ಠ ವಯಸ್ಸಿನ ಮಿತಿ 35 ವರ್ಷ ನಿಗದಿಪಡಿಸಲಾಗಿದೆ. ಅದೇ ರೀತಿ ಮೀಸಲಾತಿಯಲ್ಲಿ ಸಡಿಲಿಕ್ಕೆ ನೀಡಲಾಗಿದೆ

ವೇತನ ಶ್ರೇಣಿ:
ಕಾರ್ಮಿಕ ನಿರೀಕ್ಷಕ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 33450 ಯಿಂದ 62,600 ಪ್ರತಿ ತಿಂಗಳ ವೇತನ ಇರುತ್ತದೆ.

ವಯೋಮಿತಿಯ ಸಡಿಲಿಕೆಯ ವಿವರಣೆ :
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷಗಳು
• ಪ್ರವರ್ಗ 2A / 2B / 3A / 3B ವರ್ಗದವರಿಗೆ 3 ವರ್ಷ ಸಲ್ಲಿಕೆ ಇರುತ್ತದೆ

Join Now

ಉದ್ಯೋಗದ ಸ್ಥಳ : ಕರ್ನಾಟಕದಲ್ಲಿ

ಕರ್ನಾಟಕ ಲೋಕಸೇವಾ ಆಯೋಗ ಇಲಾಖೆಯ ಹುದ್ದೆಗಳಿಗೆ ನಿಗದಿಪಡಿಸಿದ ಅರ್ಜಿ ಶುಲ್ಕದ ವಿವರಣೆ :

• ಸಾಮಾನ್ಯ ಅಭ್ಯರ್ಥಿಗಳಿಗೆ ರೂಪಾಯಿ 635
• ಪ್ರವರ್ಗ 2A / 2B / 3A / 3B ವರ್ಗದವರಿಗೆ 335 ರೂಪಾಯಿ
• ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂಪಾಯಿ 85
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ 1 ಅಭ್ಯರ್ಥಿಗಳಿಗೆ 35 ರೂಪಾಯಿ ನಿಗದಿಪಡಿಸಲಾಗಿದೆ.
ಅಭ್ಯರ್ಥಿಗಳು ಅರ್ಜಿಯ ಶುಲ್ಕವನ್ನು ಆನ್ಲೈನ್ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಅರ್ಜಿಯ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ.

ಕಾರ್ಮಿಕ ನಿರೀಕ್ಷಕ ಹುದ್ದೆಗಳಿಗೆ ನಿಗದಿಪಡಿಸಿದ ಆಯ್ಕೆ ವಿಧಾನದ ಪ್ರಕ್ರಿಯೆ :

ನೇಮಕಾತಿ ವಿಧಾನ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ಸ್ಪರ್ಧಾತ್ಮಕ ಪರೀಕ್ಷೆ, ದಾಖಲಾತಿ ಪರಿಶೀಲನೆ, ಕನ್ನಡ ಭಾಷಾ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಅರ್ಜಿಯನ್ನು ಇಲಾಖೆ ಅಧಿಕೃತ ವೆಬ್ಸೈಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು

ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳ ವಿವರಣೆ :

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 30 ಸೆಪ್ಟೆಂಬರ್ 2022 ಅಂದರೆ ಇಂದಿನ ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 31 ಅಕ್ಟೋಬರ್ 2022

ಅರ್ಜಿ ಸಲ್ಲಿಸುವ ವಿಧಾನ:

• ಮೊದಲನೆಯದಾಗಿ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಥ ಮಾಡಿಕೊಂಡು ಇಲಾಖೆ ನಿಗದಿಪಡಿಸಿದ ಅರ್ಹತಾ ಮಾನದಂಡಗಳನ್ನು ಹೊಂದಿದ್ದರೆ ಅರ್ಜಿಯನ್ನು ಸಲ್ಲಿಸಬಹುದು ( ಅರ್ಜಿ ಸಲ್ಲಿಸುವ ವೆಬ್ ಸೈಟ್ ಲಿಂಕ್ ಕೆಳಗಡೆ ನೀಡಿರುತ್ತೇನೆ )

• ನೀವು ಅರ್ಜಿಯನ್ನು ಆನ್ಲೈನ್ ಮುಖಾಂತರ ಆಗಬೇಕು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ನಿಮ್ಮ ಇಮೇಲ್ ಐಡಿ ಹಾಗೂ ನಿಮ್ಮ ದೂರವಾಣಿ ಸಂಖ್ಯೆ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ಹಾಗೂ ನಿಮ್ಮ ದಾಖಲಾತಿ ವಿವರಗಳು ಆಧಾರ್ ಕಾರ್ಡ್, ಶೈಕ್ಷಣಿಕ ಅಂಕಪಟ್ಟಿಗಳು, ವಾಸ ಸ್ಥಳ ಹೀಗೆ ಮುಂತಾದ ವ್ಯಕ್ತಿಗಳನ್ನ ಸಿದ್ಧಪಡಿಸಿಕೊಳ್ಳಿ.

• ಕಾರ್ಮಿಕ ವೀಕ್ಷಕರ ಅಧಿಕಾರಿ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಲು ಕೆಳಗೆ ನೀಡಿರುವ ಇಲಾಖೆ ಅಧಿಕೃತ ವೆಬ್ಸೈಟ್ ಬಳಸಿಕೊಳ್ಳಿ.

• ಅರ್ಜಿ ಸಲ್ಲಿಕೆ ವೇಳೆಯಲ್ಲಿ ನಿಮ್ಮ ಭಾವಚಿತ್ರ ಹಾಗೂ ನಿಮ್ಮ ಸಹಿಯನ್ನು ಮಾಡಿ ಇರಿಸಿಕೊಳ್ಳಿ.

ಸೂಚನೆ :
ಕರ್ನಾಟಕ ಲೋಕಸೇವಾ ಆಯೋಗದ ಇಲಾಖೆಯಲ್ಲಿ ಖಾಲಿ ಇರುವ ಕಾರ್ಮಿಕ ನಿರೀಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ದಯವಿಟ್ಟು ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆ ಮತ್ತು ಇಲಾಖೆ ಹೊರಡಿಸಿರುವ ವೆಬ್ಸೈಟ್ ಮುಖಾಂತರ ಹುದ್ದೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆದು ತದನಂತರ ಸಲ್ಲಿಸಿ.

ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ ಮತ್ತು ಫೇಸ್ಬುಕ್ ಗ್ರೂಪ್.

ಇನ್ನೂ ಉದ್ಯೋಗದ ಹೆಚ್ಚಿನ ಮಾಹಿತಿ ಪಡೆಯಲು ದಯವಿಟ್ಟು ನಮ್ಮ ವಾಟ್ಸಪ್ ನಂಬರ್ 8050798925 ಈ ಒಂದು ನಂಬರ್ ಮೂಲಕ ನೀವು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಧನ್ಯವಾದಗಳು