Karnataka village accountant syllabus 2022 – Syllabus and exam pattern update

Syllabus for village accountant exam 2022 : ಕರ್ನಾಟಕ ಕಂದಾಯ ಇಲಾಖೆಯಿಂದ ಗ್ರಾಮ ಲೆಕ್ಕದ ಹುದ್ದೆಗಳಿಗೆ ಸಂಬಂಧಿಸಿದಂತೆ ಹೊಸ ಅಧಿಸೂಚನೆ ಪ್ರಕಟಿಸಿದೆ. ಈ ಅಧಿಸೂಚನೆಯ ಅನ್ವಯ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳಿಗೆ ಇನ್ನು ಮುಂದೆ ಸ್ಪರ್ಧಾತಕ ಪರೀಕ್ಷೆಗಳನ್ನು ಅಳವಡಿಸಿ ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ ಹಾಗೂ ಹುದ್ದೆಗಳಿಗೆ ನಿಗದಿಪಡಿಸಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಅನ್ವಯ ಪಠ್ಯಕ್ರಮಗಳ ಕುರಿತು ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

1.Syllabus for village accountant exam 2022

ಕರ್ನಾಟಕ ಕಂದಾಯ ಇಲಾಖೆ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ವಿವರಣೆ :
ಇಲಾಖೆಯ ಹೆಸರು :
ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ
ಶೈಕ್ಷಣಿಕ ವಿದ್ಯಾರ್ಹತೆ:
ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರೆ ಅರ್ಜಿಯನ್ನು ಸಲ್ಲಿಸಲು ಅಭ್ಯರ್ಥಿಗಳು ಅರ್ಹತೆಯನ್ನು ಪಡೆದಿರುತ್ತಾರೆ.
ವೇತನ ಶ್ರೇಣಿ :
ಗ್ರಾಮ ಲೆಕ್ಕದ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ 21,400 ರಿಂದ 42,000/-ವೇತನ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಅರ್ಜಿಯನ್ನು ಇಲಾಖೆಯ ಅಧಿಕೃತ ದಕ್ಷಿಣ ಮುಖಾಂತರ ಸಲ್ಲಿಸಬೇಕು.

ಕರ್ನಾಟಕ ಕಂದಾಯ ಇಲಾಖೆ ನೇಮಕಾತಿ ಕುರಿತಾದ ಸ್ಪರ್ಧಾತ್ಮಕ ಪರೀಕ್ಷೆ ಪಠ್ಯಕ್ರಮದ ವಿವರಣೆ :

ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಾಧಿಕಾರಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಮಾಡುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಿನಾಂಕ: 14.10.2022 ರಂದು ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಕೈಗೊಂಡ ಸಭೆಯಲ್ಲಿ ಚರ್ಚಿಸಿದ ವಿಷಯಗಳಿಗೆ ಸಮಿತಿ ಸದಸ್ಯರ ಅಭಿಪ್ರಾಯ
1) ಸ್ಪರ್ಧಾತ್ಮಕ ಪರೀಕ್ಷಾ ಶೈಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸುವ ಅಂಕಗಳನ್ನು ಪರಿಗಣಿಸುವ ಬಗ್ಗೆ
2) ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್ಲೈನ್ ಮುಖಾಂತರ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವಸತಿಯಿಂದ ನಡೆಸುವ ಬಗ್ಗೆ.
3) ಪರೀಕ್ಷೆಯ ಪಟ್ಟ ವಿಷಯ ಬಹು ಆಯ್ಕೆ ಪ್ರಶ್ನೆಗೆ ಸಂಬಂಧಿಸಿರುತ್ತದೆ.

2. Karnataka village accountant syllabus 2022

ಪ್ರಶ್ನೆ ಪತ್ರಿಕೆ – 1 ಅವಧಿ 2 ಗಂಟೆಗಳು
• ಸಾಮಾನ್ಯ ಜ್ಞಾನ : 25 ಅಂಕಗಳು
• ಕಂಪ್ಯೂಟರ್ ಜ್ಞಾನ : 25 ಅಂಕಗಳು
• ಸಾಮಾನ್ಯ ಕನ್ನಡ : 25 ಅಂಕಗಳು
• ಸಾಮಾನ್ಯ ಇಂಗ್ಲಿಷ್ : 25 ಅಂಕಗಳು
( ಗ್ರಾಮ ಲೆಕ್ಕದ ಹುದ್ದೆಗಳಿಗೆ ಸಂಬಂಧಿಸಿದಹ ಮೊದಲನೇ ಪ್ರಶ್ನೆ ಪತ್ರಿಕೆಯಲ್ಲಿ ಒಟ್ಟು 100 ಅಂಕಗಳನ್ನು ಒಳಗೊಂಡಿರುತ್ತದೆ )
ಪ್ರಶ್ನೆ ಪತ್ರಿಕೆ 2
• ಅಂಕಗಣಿತ : 25 ಅಂಕ
• ಅಂಕಿ ಅಂಶಗಳು : 25 ಅಂಕಗಳು
• ತಾರ್ಕಿಕ ವಿಷಯಗಳು : 25 ಅಂಕಗಳು
• ಕಂದಾಯ ನಿಯಮಗಳು : 25 ಅಂಕಗಳು
( ಗ್ರಾಮ ಲೆಕ್ಕದ ಹುದ್ದೆಗೆ ಸಂಬಂಧಿಸಿದ ಎರಡನೇ ಪ್ರಶ್ನೆ ಪತ್ರಿಕೆಯು 100 ಅಂಕಗಳನ್ನು ಒಳಗೊಂಡಿರುತ್ತದೆ )
4) ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಯ್ಕೆ ಪ್ರಾಧಿಕಾರದ ವತಿಯಿಂದ ಜಿಲ್ಲಾ ಮಟ್ಟದಲ್ಲಿ ನಡೆಸುವುದು
5) ಕರ್ನಾಟಕ ಜನರಲ್ ಸರ್ವೀಸಸ್ (ರೆವಿನ್ಯೂ ಸಬಾರ್ಡಿನೇಟ್ ಬ್ಯಾಂಚ್) ಕೇಡರ್ & ರಿಕ್ರೂಟ್‌ಮೆಂಟ್ (ಅಮೆಂಡ್‌ಮೆಂಟ್‌) ನಿಯಮಗಳು, 2009ರಲ್ಲಿನ ಗ್ರಾಮಲೆಕ್ಕಿಗರ ವೃಂದದ ಕಾಲಂ ನಂ. 3ರಲ್ಲಿ ನೇಮಕಾತಿಯು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ’ ಎಂದು ಸೇರ್ಪಡೆಗೊಳಿಸುವುದು
6) ರೋಸ್ಟರ್ ಪದ್ಧತಿಯನ್ನು ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 08 ಸೆಹಿಮ 1995, ಬೆಂಗಳೂರು ದಿನಾಂಕ: 20-06-1995 ರಂತೆ ಹಾಗೂ ತರುವಾಯ ಕಾಲಕಾಲಕ್ಕೆ ಆಗಿರುವ ತಿದ್ದುಪಡಿಗಳಂತೆ ನಿರ್ವಹಿಸುವುದು.
ಕಂದಾಯ ಇಲಾಖೆಯು ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ನೇರ ನೇಮಕಾತಿಯನ್ನು ತೆಗೆದುಹಾಕಿ ಸ್ಪರ್ಧಾತಕ ಪರೀಕ್ಷೆಗಳನ್ನು ಅಳವಡಿಸುವ ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ. ಗ್ರಾಮ ಲೆಕ್ಕದ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಅವಶ್ಯಕತೆ ಇದೆಯೇ ಅಥವಾ ಇಲ್ಲವೇ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ.
Notification Link : Click
ಸೂಚನೆ :
ಗ್ರಾಮ ಲೆಕ್ಕದ ಹುದ್ದೆಗಳಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯ ಪಠ್ಯಕ್ರಮದ ವಿವರಣೆ ಇಲಾಖೆಯ ಹೊರಡಿಸಿರುವ ಅಧಿಸೂಚನೆ ಪ್ರಕಾರವಿದ್ದು ಹೆಚ್ಚಿನ ಮಾಹಿತಿ ಪಡೆಯಲು ಕರ್ನಾಟಕ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಾವು ನೀಡಿರುವ ಇಲಾಖೆಯ ಅಧಿಸೂಚನೆಯನ್ನು ಗಮನಿಸಿ ಅಲ್ಲಿಂದ ಸಹ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
Spread the love