1. Chamarajanagar district court recruitment 2022
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ ಚಾಮರಾಜನಗರದಲ್ಲಿ ಖಾಲಿ ಇರುವ ಟೈಪಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಿಸಿದ ವಯೋಮಿತಿ ವಿವರಣೆ / ಅರ್ಜಿ ಸಲ್ಲಿಸುವ ವಿಧಾನ / ವೇತನ ಶ್ರೇಣಿ ಹಾಗೂ ಆಯ್ಕೆ ಪ್ರಕ್ರಿಯೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ವಿವರಣೆ :
ನೇಮಕಾತಿ ಇಲಾಖೆ ಹೆಸರು :
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ ಚಾಮರಾಜನಗರ
ಹುದ್ದೆಗಳ ಹೆಸರು:
• ಬೆರಳಚ್ಚುಗಾರ : 04 ಹುದ್ದೆಗಳು
• ಬೆರಳಚ್ಚು ನಕಲುಗಾರ : 07 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ :
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ ಚಾಮರಾಜನಗರ ಇಲಾಖೆಯಲ್ಲಿ ಒಟ್ಟು 11 ಹುದ್ದೆಗಳು ಖಾಲಿ ಇವೆ.
2. Educational Qualification Details for Chamarajanagar District Court Recruitment 2022 Posts :
ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆ ವಿವರಣೆ :
ಶೈಕ್ಷಣಿಕ ವಿದ್ಯಾರ್ಹತೆ :
ಬೆರಳಚ್ಚು ನಕಲುಗಾರ :
1. ದ್ವಿತೀಯ ಪಿ.ಯು.ಸಿ ಅಥವಾ ಮೂರು ವರ್ಷಗಳ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ರೀಸ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು ಮತ್ತು
2. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆಸುವ ಕಿರಿಯ ದರ್ಜೆ (Junior Grade) ಕನ್ನಡ ಮತ್ತು ಆ೦ಗ್ಲ ಭಾಷೆಗಳ ಬೆರಳಚ್ಚು ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತ ಅಂದರ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ / ಸೆಕ್ರೇಟರಿಯಟಲ್ ಪ್ರಾಕ್ಟಿಸ್ ಅಥವಾ ತತಮಾನ ವಿದ್ಯಾರ್ಹತ.
ಬೆರಳಚ್ಚುಗಾರ :
1. ದ್ವಿತೀಯ ಪಿ.ಯು.ಸಿ. ಅಥವಾ ಮೂರು ವರ್ಷಗಳ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರತಕ್ಕದ್ದು ಮತ್ತು
2. ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆಸುವ ಹಿರಿಯ ದರ್ಜೆ ( Senior Grade) ಕನ್ನಡ ಮತ್ತು ಆಂಗ್ಲ ಭಾಷೆಗಳ ಬೆರಳಚ್ಚು ವಿಷಯಗಳಲ್ಲಿ ತೇರ್ಗಡೆ ಹೊಂದಿರಬೇಕು ಅಥವಾ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟಿಸ್ / ಸೆಕ್ರೇಟರಿಯೇಟಲ್ ಪ್ರಾಕ್ಟಿಸ್ ಅಥವಾ ತತ್ಸಮಾನ ವಿದ್ಯಾರ್ಹತೆಯಲ್ಲಿ ತೇರ್ಗಡೆ ಪಡೆದಿರಬೇಕು.
3. Chamarajanagar District Court Recruitment 2022 Pay Scale Description for Department Posts :
ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2022 ಇಲಾಖೆಯ ಹುದ್ದೆಗಳಿಗೆ ನಿಗದಿಪಡಿಸಿದ ವೇತನ ಶ್ರೇಣಿಯ ವಿವರಣೆ :
ವೇತನ ಶ್ರೇಣಿ :
ಬೆರಳಚ್ಚು ನಕಲುಗಾರ :
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ ಮಾಸಿಕವಾಗಿ ವೇತನ ಶ್ರೇಣಿಯು 21400-500-22400-550-24600-600-27000-650-29600-750-32600-850-36000-950-39800-1100-42000/ ನಿಗದಿಪಡಿಸಲಾಗಿದೆ.
ಬೆರಳಚ್ಚುಗಾರ :
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಪ್ರತಿ ತಿಂಗಳಿಗೆ ವೇತನ 21400-500-22400-550-24600-600-27000-650-29600-750-32600-850-36000-950-39800-1100-42000/ ನಿಗದಿಪಡಿಸಲಾಗಿದೆ. ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
ಉದ್ಯೋಗದ ಸ್ಥಳ :
ಚಾಮರಾಜನಗರ ಕರ್ನಾಟಕ
ವಯೋಮಿತಿ ವಿವರಣೆ :
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಚಾಮರಾಜನಗರ ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಪ್ರತಿಯೊಬ್ಬ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಗರಿಷ್ಠ ವಯಸ್ಸು 35 ವರ್ಷ ನಿಗದಿಪಡಿಸಲಾಗಿದೆ ಮೀಸಲಾತಿ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ವಯೋಮಿತಿ ಸಡಿಲಿಕೆಯ ವಿವರಣೆ :
• ಪ್ರವರ್ಗ 2a / 2b / 3a / 3b ವರ್ಗದವರಿಗೆ 38 ವರ್ಷ ಮೀರಿರಬಾರದು
• ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ಅಭ್ಯರ್ಥಿಗಳಿಗೆ 40 ವರ್ಷ ಮೀರಿದಬಾರದು.
4. Application Fee Details for Chamarajanagar District Court Recruitment 2022 Posts :
ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಅರ್ಜಿ ಶುಲ್ಕದ ವಿವರಣೆ :
ಅರ್ಜಿ ಶುಲ್ಕ :
• ಸಾಮಾನ್ಯ ವರ್ಗ / ಪ್ರವರ್ಗ 2a / 2b / 3a / 3b ವರ್ಗದವರಿಗೆ 200 ರೂಪಾಯಿ.
• ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕ ಪಾವತಿ ಮಾಡಬೇಕಾದ ವಿಧಾನ :
ಅಭ್ಯರ್ಥಿಗಳು ಕೆಳಗಡೆ ನೀಡಲಾದ ಲಿಂಕ್ ಮುಖಾಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ State Bank Collect 300 Online Payment through Net – Banking / Credit – Card/Debit – Card ಸೌಲಭ್ಯದ ಮೂಲಕ ಮಾತ್ರ ಪಾವತಿಸತಕ್ಕದ್ದು. ಇದನ್ನು ಹೊರತುಪಡಿಸಿ ಯಾವುದೇ ಚಲನ್ ಡಿಮ್ಯಾಂಡ್ ಡ್ರಾಫ್ಟ್ : ಪೋಸ್ಟಲ್ ಆರ್ಡರ್ ಮನಿ ಆರ್ಡರ್ ಇವುಗಳನ್ನು ಸ್ವೀಕರಿಸಲಾಗುವುದಿಲ್ಲ. ಶುಲ್ಕ ಪಾವತಿಸದ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಆಯ್ಕೆ ವಿಧಾನ :
ಬೆರಳಚ್ಚುಗಾರ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು 15 ನಿಮಿಷಗಳ ಉಕ್ತಲೇಖನದಲ್ಲಿ ಕೊಡುವ ವಿಷಯವನ್ನು ಬೆರಳಚ್ಚು ಮಾಡುವ ಸಾಮರ್ಥ್ಯ ಪರೀಕ್ಷೆ” ಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ 1 : 5 ಅನುಪಾತದಲ್ಲಿ ಸಂದರ್ಶನ ನಡೆಸಲಾಗುವುದು ಸಾಮರ್ಥ್ಯ ಪರೀಕ್ಷೆ’ ಯಲ್ಲಿ ಗರಿಷ್ಟ ಅಂಕಗಳು 100 ಮತ್ತು ಪರೀಕ್ಷೆ ಪಾಸಾಗಲು ಶೇಕಡಾ 50 ಗಳಿಸಿರಬೇಕು)
ಬೆರಳಚ್ಚು ನಕಲುಗಾರ :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳು ಮತ್ತು 15 ನಿಮಿಷಗಳ ಉಕ್ತಲೇಖನದಲ್ಲಿ ಕೊಡುವ ವಿಷಯವನ್ನು ಬೆರಳಚ್ಚು ಮಾಡುವ ಸಾಮರ್ಥ್ಯ ಪರೀಕ್ಷೆ” ಯಲ್ಲಿ ಗಳಿಸುವ ಅಂಕಗಳ ಆಧಾರದ ಮೇಲೆ 1 : 5 ಅನುಪಾತದಲ್ಲಿ ಸಂದರ್ಶನ ನಡೆಸಲಾಗುವುದು ಸಾಮರ್ಥ್ಯ ಪರೀಕ್ಷೆ’ ಯಲ್ಲಿ ಗರಿಷ್ಟ ಅಂಕಗಳು 100 ಮತ್ತು ಪರೀಕ್ಷೆ ಪಾಸಾಗಲು ಶೇಕಡಾ 50 ಗಳಿಸಿರಬೇಕು)
5. Description of Application Procedure for Chamarajanagar District Court Recruitment 2022 Posts :
ಚಾಮರಾಜನಗರ ಜಿಲ್ಲಾ ನ್ಯಾಯಾಲಯ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಅರ್ಜಿ ಸಲ್ಲಿಸುವ ವಿಧಾನದ ವಿವರಣೆ :
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ON-LINE ಮೂಲಕ ಅರ್ಜಿ ಭರ್ತಿ ಮಾಡುವ ಮೊದಲು ಕೆಳಕಂಡ ಸೂಚನೆಗಳನ್ನು ಕಡ್ಡಾಯವಾಗಿ ತಿಳಿದುಕೊಳ್ಳತಕ್ಕದ್ದು.
1. ಅಭ್ಯರ್ಥಿಗಳು ಅರ್ಜಿಯನ್ನು ON-LINE ಮೂಲಕ ಕೊಟ್ಟಿರುವ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಓದಿಕೊಳ್ಳಬೇಕು ಮತ್ತು ತಪ್ಪಾಗದಂತೆ ನೋಡಿಕೊಳ್ಳುವುದು. ಸರಿಯಾದ ಮಾಹಿತಿ ನೀಡದೇ ಇರುವ ಮತ್ತು ಅಪೂರ್ಣ ಮಾಹಿತಿಯುಳ್ಳ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
2. ಅಭ್ಯರ್ಥಿಗಳು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸುವುದು ಹಾಗೂ ಇ-ಮೇಲ್ ಐಡಿಯನ್ನು ಹೊಂದಿದ್ದಲ್ಲಿ ನಮೂದಿಸುವುದು. ಒಂದು ಇಮೇಲ್ ವೇಳೆ SMS ಅಥವಾ ಇಮೇಲ್ ಮುಖಾಂತರ ಅಭ್ಯರ್ಥಿಗಳಿಗೆ ಸಂದೇಶ ತಲುಪದಿದ್ದಲ್ಲಿ ಈ ಪ್ರಾಧಿಕಾರವು ಹೊಣೆಯಾಗುವುದಿಲ್ಲ ಹಾಗೂ ನೇಮಕಾತಿಯ ಸಂಬಂಧಿಸಿದ ಮಾಹಿತಿಗಳಿಗಾಗಿ ಕಾಲ ಕಾಲಕ್ಕೆ ಈ ಜಿಲ್ಲಾ ನ್ಯಾಯಾಂಗ ಘಟಕದ ಜಾಲತಾಣವನ್ನು ಪರಿಶೀಲಿಸುವುದು.
3. ಅಭ್ಯರ್ಥಿಯು ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲು ಈ ಕೆಳಕಂಡ ನಿರ್ದೇಶನಗಳನ್ನು ಪಾಲಿಸತಕ್ಕದ್ದು.
4. ತದನಂತರ ಅಭ್ಯರ್ಥಿಯು ON-LINE ಅರ್ಜಿಯಲ್ಲಿ ಕೋರಲಾದ ಎಲ್ಲಾ ಮಾಹಿತಿಗಳನ್ನೂ ಭರ್ತಿ ಮಾಡಿ ನಿಗದಿತ ಶುಲ್ಕ ಪಾವತಿಸಲು ಅರ್ಜಿಯಲ್ಲಿ ತಿಳಿಸಿರುವಂತೆ ಕ್ರಮ ಕೈಗೊಳ್ಳುವುದು. ತದನಂತರ ಅರ್ಜಿಯನ್ನು ಶುಲ್ಕವನ್ನು ತುಂಬಿದ ಪ್ರತಿಯನ್ನು Download ಮಾಡಿಕೊಂಡು ನೇಮಕಾತಿ ಪ್ರಕ್ರಿಯೆ ಮುಗಿಯುವವರೆಗೂ ತಮ್ಮ ಹತ್ತಿರ ಕಾಯ್ದಿರಿಸಿಕೊಳ್ಳತಕ್ಕದ್ದು ಹಾಗೂ ಅರ್ಹತಾ ಪರೀಕ್ಷೆಯ ಸಮಯದಲ್ಲಿ ಹಾಜರುಪಡಿಸತಕ್ಕದ್ದು,
6. Details of important dates related to Chamarajanagar District Court Department Recruitment 2022 Posts :
ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳ ವಿವರಣೆ :
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ 27 ಅಕ್ಟೋಬರ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 30 ನವಂಬರ್ 2022
Apply Link : Click
ಸೂಚನೆ :
ಚಾಮರಾಜನಗರ ಜಿಲ್ಲಾ ನ್ಯಾಯಾಲಯ ಇಲಾಖೆಯಲ್ಲಿ ಖಾಲಿ ಇರುವ ಬೆರಳಚ್ಚುಗಾರ / ಬೆರಳಚ್ಚುನಕಲುಗಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆ ನೀಡಿರುವ ಅಧಿಸೂಚನೆಯನ್ನು ಗಮನಿಸಿ ಸ್ಪಷ್ಟವಾಗಿ ಓದಿ ತದನಂತರದಲ್ಲಿ ಅರ್ಜಿಯನ್ನು ಸಲ್ಲಿಸಬೇಕು.