bed Question Paper 2022 | Raichur University bed Question Paper | social science question paper 2022

ರಾಯಚೂರು ವಿಶ್ವವಿದ್ಯಾಲಯ ರಾಯಚೂರು 2022 ರಲ್ಲಿ ಬಿ ಎಡ್ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಸಮಾಜ ವಿಜ್ಞಾನ ವಿಷಯದ ಮೇಲೆ ಕೇಳಲಾದ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಳು ಈ ಕೆಳಗಿನಂತಿವೆ.

ರಾಯಚೂರು ವಿಶ್ವವಿದ್ಯಾಲಯ ಸಂಬಂಧಿಸಿದ ಹಿನ್ನೆಲೆ

ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಈ ಒಂದು ವಿದ್ಯಾ ಸಂಸ್ಥೆಯು ವಿವಿಧ ಕಾಲೇಜು ಮತ್ತು ವಿವಿಧ ವಿಶ್ವವಿದ್ಯಗಳನ್ನು ಒಳಗೊಂಡು ನೂತನವಾಗಿ 2020 ಎಡರಲ್ಲಿ ಆರಂಭಗೊಂಡಿದೆ. ರಾಯಚೂರು ವಿಶ್ವವಿದ್ಯಾಲಯ ಗೌರವಾನ್ವಿತ ಕುಲಪತಿಯಾಗಿ ಹರೀಶ್ ರಾಮಸ್ವಾಮಿ ಸ್ಥಾನವನ್ನ ಅಲಂಕರಿಸಿದ್ದಾರೆ. ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಗುಲ್ಬರ್ಗ ವಿಶ್ವವಿದ್ಯಾಲಯ ಅಡಿಯಲ್ಲಿ ಬರುವ ರೈಚೂರು ಮತ್ತು ಯಾದಗಿರಿ ಜಿಲ್ಲೆಯ ಒಟ್ಟು 224 ಕಾಲೇಜುಗಳೊಂದಿಗೆ ಹಾಗೂ 27 ಕೋರ್ಸ್ ಗಳನ್ನು ಒಳಗೊಂಡು ನೂತನವಾಗಿ ಆರಂಭಗೊಂಡಿದೆ.

ವಿಭಾಗ – ಎ

ಈ ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಆಂತರಿಕ ಆಯ್ಕೆಯ ಪ್ರಯೋಜನದಿಂದ ಪ್ರತಿಯೊಂದು ಮೂರು ಪುಟದಷ್ಟು ಉತ್ತರಿಸಿ.

1) ರಾಜಶಾಸ್ತ್ರ ಮತ್ತು ಅರ್ಥಶಾಸ್ತ್ರಗಳು ಹೇಗೆ ಸಮಾಜದ ವ್ಯವಸ್ಥೆ ಮತ್ತು ಪ್ರಕ್ರಿಯೆಗಳಾಗಿವೆ ? ಚರ್ಚಿಸಿ

ಅಥವಾ

ಇತಿಹಾಸ ಮತ್ತು ಭೂಗೋಳ ಶಾಸ್ತ್ರದ ಅಲ್ಪಕಾಲೀಕ ಮತ್ತು ಪ್ರಾದೇಶಿಕ ಆಯಾಮಗಳನ್ನು ಚರ್ಚಿಸಿರಿ ?

2) ಸಮಾಜ ವಿಜ್ಞಾನ ಬೋಧನೆಯ ಗುರಿಗಳು ಮತ್ತು ಉದ್ದೇಶಗಳನ್ನು ವಿವರಿಸಿ ?

Join Now

ಅಥವಾ

ಸಮಾಜ ವಿಜ್ಞಾನ ಪಠ್ಯಕ್ರಮದ ವಿಕಾಸದಲ್ಲಿರುವ ಸವಾಲುಗಳನ್ನು ಚರ್ಚಿಸಿರಿ ?

3) ಪರಿಕಲ್ಪನಾತ್ಮಕ ಯೋಜನೆ ಮತ್ತು ಪರಿಕಲ್ಪನಾತ್ಮಕ ನಕ್ಷೆಗಳೆಂದರೇನು ? ವಿವರಿಸಿರಿ

ಅಥವಾ

ಸಮಾಜದ ವಿಜ್ಞಾನದಲ್ಲಿ ವಿಮಶಾತ್ಮಕ ಸಂಶೋಧನಾ ಪಾತ್ರವನ್ನು ವಿವರಿಸಿ ?

4) 2005ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ವಿಶ್ಲೇಸಿರಿ ?

ಅಥವಾ

ವಿವಿಧ ಆಯೋಗಗಳ ವರದಿಗಳ ವಿಮರ್ಶೆಯನ್ನ ಸಮಾಜ ವಿಜ್ಞಾನ ಪಠ್ಯಕ್ರಮಗಳನ್ನು ಉಲ್ಲೇಖಿಸಿ ?

ವಿಭಾಗ – ಬಿ

ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಆಂತರಿಕ ಆಯ್ಕೆಯ ಪ್ರಯೋಜನದಿಂದ ಪ್ರತಿಯೊಂದುಕ್ಕೂ ಎರಡು ಪುಟದಷ್ಟು ಉತ್ತರಿಸಿ.

1) ಸಮಾಜ ವಿಜ್ಞಾನ ಮತ್ತು ಸಮಾಜ ಅಭ್ಯಾಸಗಳ ಪರಿಕಲ್ಪನೆಯನ್ನು ವಿವರಿಸಿ ?

ಅಥವಾ

ಸಮಾಜ ವಿಜ್ಞಾನ ಮತ್ತು ಸಮಾಜ ಅಭ್ಯಾಸಗಳ ನಡುವಿನ ವ್ಯತ್ಯಾಸಗಳು?

2) ಸ್ಥಳೀಯ ಇತಿಹಾಸ ಅಧ್ಯಯನ ಪದ್ಧತಿಯನ್ನು ವಿವರಿಸಿ ?

ಅಥವಾ

ಸಮಾಜ ವಿಜ್ಞಾನ ಪಠ್ಯಕ್ರಮ ಬೆಳವಣಿಗೆಯಲ್ಲಿ ಇರುವ ತತ್ವಗಳನ್ನು ವಿವರಿಸಿ ?

3) ವಿಮಶಾತ್ಮಕ ಚಿಂತನೆ ಮತ್ತು ಸಮಸ್ಯೆ ಪರಿಹಾರದ ಮಹತ್ವವನ್ನು ಬರೆಯಿರಿ ?

ಅಥವಾ

ಒಬ್ಬ ಸಮಾಜ ವಿಜ್ಞಾನ ಶಿಕ್ಷಕರಾಗಿ ವಿದ್ಯಾರ್ಥಿಗಳಲ್ಲಿ ನೀವು ಸಂವಿಧಾನಿಕ ದೃಷ್ಟಿಕೋನಗಳನ್ನು ಹೇಗೆ ಬೆಳೆಸುವಿರಿ ?

4) ವಿಶೇಷ ಅಗತ್ಯತೆಯುಳ್ಳ ಕಲಿಕಾಕಾರದ ಕುರಿತು ಲಘು ಟಿಪ್ಪಣಿ ಬರೆಯಿರಿ ?

ಅಥವಾ

ಕರ್ನಾಟಕ ರಾಜ್ಯದ ಆರನೇ ತರಗತಿಯ ಸಮಾಜ ವಿಜ್ಞಾನದ ಪಠ್ಯಪುಸ್ತಕವನ್ನು ವಿಮಶಾತ್ಮಕವಾಗಿ ಪುನರಾವಲೋಕಿಸಿ.

ವಿಭಾಗ – ಸಿ

ಈ ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಆಂತರಿಕ ಆಯ್ಕೆಯ ಪ್ರಯೋಜನದಿಂದ ಪ್ರತಿಯೊಂದು ಪುಟದಷ್ಟು ಉತ್ತರಿಸಿ.

1) ಕೊಠಾರಿ ಸಮಿತಿ ಮುಖ್ಯ ಲಕ್ಷಣಗಳು ?

ಅಥವಾ

ಹಂಟರ್ ಆಯೋಗ ಶಿಫಾರಸ್ಸುಗಳು.

2) ಪ್ರಾದೇಶಿಕ ಇತಿಹಾಸ.

ಅಥವಾ

ಸಾಮಾಜಿಕ ಮೌಲ್ಯಗಳ ಅಭಿವೃದ್ಧಿ.

3) ಸಮಾಜ ವಿಜ್ಞಾನಗಳಲ್ಲಿ ಸಮಾಜ ಶಾಸ್ತ್ರದ ಸ್ಥಾನದ ಕುರಿತು ಟಿಪ್ಪಣಿ ಬರೆಯಿರಿ.

ಅಥವಾ

ಅರ್ಥಶಾಸ್ತ್ರದ ಅರ್ಥ ಮತ್ತು ಮಹತ್ವವನ್ನು ವಿವರಿಸಿರಿ.

4) ವೈವಿಧ್ಯತೆಯ ಮೇಲೆ ಪ್ರಭಾವ ಬೀರುವ ಅಂಶಗಳು.

ಅಥವಾ

ಪಠ್ಯಪುಸ್ತಕದ ಮಹತ್ವ.

ಎಲ್ಲಾ ಪ್ರಶ್ನೆಗಳು ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಬಿ ಎಡ್ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ಸಮಾಜ ವಿಜ್ಞಾನ ಎಂಬ ಪಟ್ಟ ಪುಸ್ತಕದ ಅನುಗುಣವಾಗಿ ಪ್ರಶ್ನೆಗಳನ್ನು ಕೇಳಲಾಗಿದೆ.

ಸಮಾಜ ವಿಜ್ಞಾನ ಪ್ರಶ್ನೆ ಪತ್ರಿಕೆ ಪಿಡಿಎಫ್ ಪ್ರತಿಯನ್ನು ಈ ಕೆಳಗೆ ನೀಡಲಾಗಿರುತ್ತದೆ ಅಭ್ಯರ್ಥಿಗಳು ಅದನ್ನು ವೀಕ್ಷಿಸಬಹುದು.

 

ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಎಲ್ಲರಿಗೂ ಈ ಮಾಹಿತಿಯನ್ನು ಶೇರ್ ಮಾಡಿ.

Spread the love