ಬೆಳಗಾವಿ ಜಿಲ್ಲೆಯ ನೇಮಕಾತಿ 2022 ಬೆಳಗಾವಿ ಜಿಲ್ಲೆಯಲ್ಲಿ ಖಾಲಿ ಇರುವ 254 ವಿವಿಧ ಹುದ್ದೆಗಳಿಗೆ 10ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗೆ ಸಂಬಂಧಿಸಿದ ವಿದ್ಯಾರ್ಹತೆ/ ವೇತನ ಶ್ರೇಣಿ/ ಉದ್ಯೋಗದ ಸ್ಥಳ/ ವಯಸ್ಸಿನ ಮಿತಿ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ ಅಭ್ಯರ್ಥಿಗಳು ಮಾಹಿತಿಯನ್ನು ಸ್ಪಷ್ಟವಾಗಿ ಓದಿಕೊಂಡು ತದನಂತ ಅರ್ಜಿಯನ್ನು ಸಲ್ಲಿಸಿ.
ಬೆಳಗಾವಿ ಜಿಲ್ಲೆಯ ಹುದ್ದೆಗಳ ವಿವರ :
ನೇಮಕಾತಿ ಇಲಾಖೆ ಹೆಸರು :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಜಿಲ್ಲೆ
ಹುದ್ದೆಗಳ ಹೆಸರು :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅಂಗನವಾಡಿ ಸಹಾಯಕಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಒಟ್ಟು ಹುದ್ದೆಗಳ ಸಂಖ್ಯೆ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಒಟ್ಟು 254 ವಿಧಗಳು ಖಾಲಿ ಇವೆ.
ಅಂಗನವಾಡಿ ಶಿಕ್ಷಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ನಿಗದಿಪಡಿಸಿದ ವಿದ್ಯಾರ್ಹತೆ:
ವಿದ್ಯಾರ್ಹತೆ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಅರ್ಹತೆಯನ್ನು ಹೊಂದಿರಬೇಕು.
• ಅಂಗನವಾಡಿ ಸಹಾಯಕಿ :
ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ ನಾಲ್ಕನೇ ತರಗತಿಯಿಂದ ಗರಿಷ್ಠ 9ನೇ ತರಗತಿ ಪಾಸಾದ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದು.
• ಅಂಗನವಾಡಿ ಕಾರ್ಯಕರ್ತೆ :
ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಬಿಡುಗಡೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ವೇತನ ಶ್ರೇಣಿ :
ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಗೌರವಧನ ಆಧಾರದ ಮೇಲೆ ಪ್ರತಿ ತಿಂಗಳಿಗೆ 5 ಸಾವಿರದಿಂದ ಹತ್ತು ಸಾವಿರ ಮಾಸಿಕ ವೇತನ ನಿಗದಿಪಡಿಸಲಾಗಿದೆ.
ವಯಸ್ಸಿನ ಮಿತಿ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತ ಹುದ್ದೆಗಳಿಗೆ ಇಲಾಖೆಯು ನಿಯಮಗಳ ಅನುಸಾರ ವಯಸ್ಸಿನ ಮಿತಿ ನಿಗದಿಪಡಿಸಲಾಗಿದೆ
• ಸಾಮಾನ್ಯ ವರ್ಗದವರಿಗೆ : ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷ
• ಪ್ರವರ್ಗ 2A/ 2B/ 3A/ 3B ವರ್ಗದವರಿಗೆ 38 ವರ್ಷ ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ :
ಅಂಗನವಾಡಿ ಸಹಾಯಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶೈಕ್ಷಣಿಕ ವಿದ್ಯಾರ್ಹತೆ ಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನ ನೇರ ನೇಮಕಾತಿ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 04 ಆಗಸ್ಟ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 05 ಸಪ್ಟಂಬರ್ 2022
ಅರ್ಜಿ ಸಲ್ಲಿಕೆಗೆ ಬೇಕಾದ ಪ್ರಮುಖ ದಾಖಲಾತಿಗಳು :
• ಅಭ್ಯರ್ಥಿಗಳಿಗೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆಯ ದಾಖಲಾತಿಗಳು
• ಅಭ್ಯರ್ಥಿಯ ಆಧಾರ್ ಕಾರ್ಡ್ ಅಥವಾ ವಾಸ ಸ್ಥಳ ಪ್ರಮಾಣ ಪತ್ರ
• ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ ಹಾಗೂ ಸಹಿ
ಉದ್ಯೋಗದ ವಿಧ : ಸರ್ಕಾರಿ ಉದ್ಯೋಗ
ಉದ್ಯೋಗದ ಸ್ಥಳ : ಬೆಳಗಾವಿ ಜಿಲ್ಲೆ ( ಕರ್ನಾಟಕ )
ಅಂಗನವಾಡಿ ಸಹಾಯಕಿ ಮತ್ತು ಕಾರ್ಯಕರ್ತ ಹುದ್ದೆಗಳಿಗೆ ಲಗತ್ತಿಸಬೇಕಾದ ಪ್ರಮುಖ ದಾಖಲಾತಿಗಳು:
• ಅರ್ಜಿ ನಿಗದಿತ ನಮೂನೆಯಲ್ಲಿ ( ಆನ್ಲೈನ್ )
• ಜನ ಪ್ರಮಾಣ ಪತ್ರ ಅಥವಾ ಜನುಮ ದಿನಾಂಕ ಇರುವ ಅಂಕಪಟ್ಟಿ.
• ಅಭ್ಯರ್ಥಿಯ ಜಾತಿ ಪ್ರಮಾಣ ಪತ್ರ (ಮೀಸಲಾತಿ ಬಯಸಿದಲ್ಲಿ )
• ಯೋಜನಾ ನಿರಾಶ್ತರರ ಬಗ್ಗೆ ತಹಶೀಲ್ದಾರ್ ರಿಂದ ಪಡೆದ ಪ್ರಮಾಣ ಪತ್ರ
• ನಿಗದಿತ ವಿದ್ಯಾರತಿ ಅಂಕಪಟ್ಟಿ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಖಾಲಿ ಹುದ್ದೆಗಳಿಗೆ ಆಯ್ಕೆಯ ಆದ್ಯತೆ ಈ ಕೆಳಗಿನಂತಿದೆ :
1) ಕನಿಷ್ಠ ನಾಲ್ಕನೇ ತರಗತಿ ಅಥವಾ ಗರಿಷ್ಠ 9ನೇ ತರಗತಿ ತೇರ್ಗಡೆ 9ನೇ ತರಗತಿ ಗಿಂತ ಹೆಚ್ಚಿನ ವಿದ್ಯಾರ್ಹತೆಯನ್ನು ಆಯ್ಕೆಗೆ ಪರಿಗಣಿಸಲಾಗುವುದಿಲ್ಲ.
2) ಅಂಕಗಳನ್ನ ನಮೂಯಿಸಿರುವ ಅಂಕಪಟ್ಟಿಯನ್ನು ಕಡ್ಡಾಯವಾಗಿ ಅಪ್ಡೇಟ್ ಮಾಡಿ ಮಾಡುವುದು
3) ಅಭ್ಯರ್ಥಿಗಳು ಪಾಸಾದ ತರಗತಿಯಲ್ಲಿ ಹೆಚ್ಚಿನ ವಿದ್ಯಾರ್ಹತೆ ಹಾಗೂ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
4) ಆಸಿಡ್ ದಾಳಿಗೆ ಒಳಗಾದ ಮೇಲೇರಿಗೆ ಪ್ರಾರ್ಥಮಾ ಆದ್ಯತೆ ನೀಡಲಾಗುತ್ತದೆ.
5) ಬಾಲ ನ್ಯಾಯ ಕಾಯ್ದೆಯಡಿ ಇಲಾಖೆಯ ಸಂಸ್ಥೆಗಳಲ್ಲಿ ರಾಜ್ಯ ಮಹಿಳಾ ನಿಲಯಗಳಲ್ಲಿ ಆಶ್ರತ ಪಡೆದ ಹಾಲಿ ಅಥವಾ ಮಾಜಿ ನಿವಾಸಿಗಳಿಗೆ ಎರಡನೇ ಆದ್ಯತೆ ಇರುತ್ತದೆ.
6) ವಿಧವೆಯರಿಗೆ ಮೂರನೆ ಆದ್ಯತೆ ವಿದಿವೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಗೆ ಮೊದಲ ಆದ್ಯತೆ ನೀಡಲಾಗುವುದು ನಂತರ ಇತರೆ ವಿಧಿವೇ ರನ್ನ ಪರಿಗಣಿಸಲಾಗುವುದು ಅರ್ಜಿ ಸಲ್ಲಿಸಿದ ನಂತರ ವಿಧಿಯರಾಗಿದ್ದಲ್ಲಿ ಪರಿಗಣಿಸಲಾಗುವುದಿಲ್ಲ
ಸೂಚನೆ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ ಜಿಲ್ಲೆಯಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಕ್ಕಿಂತ ಮುಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಹಾಗೂ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಥ ಮಾಡಿಕೊಂಡು ತದನಂತರ ಅರ್ಜಿಯನ್ನು ಸಲ್ಲಿಸಿ.
ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಈ ಮಾಹಿತಿಯನ್ನ ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ / ಫೇಸ್ಬುಕ್ ಗ್ರೂಪ್ / ಟೆಲಿಗ್ರಾಂ ಹೀಗೆ ಮುಂತಾದ ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳಿ ಆದಷ್ಟು ಈ ಮಾಹಿತಿಯನ್ನು ಉದ್ಯೋಗ ಮಾಹಿತಿ ಬಯಸುವ ಪ್ರತಿಯೊಬ್ಬ.