ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ 23 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನ ಇಲಾಖೆಯ ನಿಯಮಗಳು ಅನುಸಾರ ನೇರ ನೇಮಕಾತಿ ಮಾಡಲಾಗುತ್ತದೆ. ಈ ಹುದ್ದೆಗಳು ಕರ್ನಾಟಕದ ಬೆಳಗಾವಿ ಜಿಲ್ಲೆಯಲ್ಲಿ ಖಾಲಿ ಇದ್ದು ಕರ್ನಾಟಕ ಅಥವಾ ಬೆಳಗಾವಿ ಜಿಲ್ಲೆಯಲ್ಲಿ ಹುದ್ದೆಗಳನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
DHFWS BELAGAVI RECRUITMENT 2022 – APPLY ONLINE FOR 23 POST :
ನೇಮಕಾತಿ ಇಲಾಖೆ ಹೆಸರು :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಹುದ್ದೆಗಳ ಹೆಸರು :
• MBBS ವೈದ್ಯಾಧಿಕಾರಿಗಳು
• ಸ್ತ್ರೀರೋಗ ತಜ್ಞ ವೈದ್ಯರು
• ಮಕ್ಕಳ ತಜ್ಞರು
• ಮಾನಸಿಕ ರೋಗ ತಜ್ಞರು
• ಫಿಸಿಷಿಯನ್
ಒಟ್ಟು ಹುದ್ದೆಗಳ ಸಂಖ್ಯೆ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬೆಳಗಾವಿ ಈ ಇಲಾಖೆಯಲ್ಲಿ ಒಟ್ಟು 23 ಹುದ್ದೆಗಳು ಖಾಲಿ ಇವೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ಬೆಳಗಾವಿ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿಗದಿಪಡಿಸುವ ಶೈಕ್ಷಣಿಕ ವಿದ್ಯಾರ್ಹತೆ :
ಶೈಕ್ಷಣಿಕ ವಿದ್ಯಾರ್ಹತೆ :
MBBS ವೈದ್ಯಾಧಿಕಾರಿಗಳು :
ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು MBBS ದೊಂದಿಗೆ ಇಂಟರ್ನ ಶಿಪ್ ಪೂರೈಸಬೇಕು. ಹಾಗೂ ಕೆ.ಎಂ.ಸಿ.ನಲ್ಲಿ ಕಡ್ಡಾಯವಾಗಿ ನೋಂದಣಿ ಆಗಿರಬೇಕು
ಸ್ತ್ರೀ ರೋಗ ತಜ್ಞ ವೈದ್ಯರು :
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು DGO / DNB / MD / ( O&G ) ಹಾಗೂ ಕಡ್ಡಾಯವಾಗಿ ಕೆಎಂಸಿಯಲ್ಲಿ ನೋಂದಣಿಯನ್ನು ಹೊಂದಿರತಕ್ಕದ್ದು.
ಮಕ್ಕಳ ತಜ್ಞರು :
ಅಭ್ಯರ್ಥಿಗಳು ಹುದ್ದೆಗಳಿಗೆ DCH / DNB / MD ( Paediatrics ) ಕೆ.ಎಂ.ಸಿ ನೋಂದಣಿಯನ್ನು ಪಡೆದವರು ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ.
ಮಾನಸಿಕ ರೋಗ ತಜ್ಞರು :
ಈ ಹುದ್ದೆಗಳಿಗೆ ಅಭ್ಯರ್ಥಿಗಳು MD in psychologist ಶೈಕ್ಷಣಿಕ ವಿದ್ಯಾರ್ಹತೆಯನ್ನು ಪಡೆಯಬೇಕು.
ಫಿಸಿಷಿಯನ್ :
MD In Medicine ಶೈಕ್ಷಣಿಕ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಬೇಕು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಬೆಳಗಾವಿ ಜಿಲ್ಲೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ವಯೋಮಿತಿ ವಿವರಣೆ :
ವೇತನ ಶ್ರೇಣಿ ವಿವರಣೆ :
ಬೆಳಗಾವಿ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ವೇತನ ನಿಗದಿಪಡಿಸಲಾಗಿದೆ.
MBBS ವೈದ್ಯಾಧಿಕಾರಿಗಳು :
ಈ ಹುದ್ದೆಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಮಾಸಿಕ ಸಂಚಿತ ವೇತನವಾಗಿ ರೂಪಾಯಿ 36,750 ವೇತನ ನಿಗದಿಪಡಿಸಲಾಗಿದೆ.
ಸ್ತ್ರೀರೋಗ ತಜ್ಞ ವೈದ್ಯರು :
ಸ್ತ್ರೀ ರೋಗ ತಜ್ಞ ಈ ಒಂದು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಪ್ರತಿ ತಿಂಗಳಿಗೆ 1,25,000 ವೇತನ ಇರುತ್ತದೆ.
ಮಕ್ಕಳ ತಜ್ಞರು :
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾಸಿಕವಾಗಿ ಪ್ರತಿ ತಿಂಗಳಿಗೆ 1,25,000 ವೇತನ ಇರುತ್ತದೆ.
ಮಾನಸಿಕ ರೋಗ ತಜ್ಞರು :
ಮಾನಸಿಕ ರೋಗ ತಜ್ಞರು ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ ಪ್ರತಿ ತಿಂಗಳಿಗೆ 1,25,000 ವೇತನ ನಿಗದಿಪಡಿಸಲಾಗಿದೆ.
ಫಿಸಿಷಿಯನ್ :
ಈ ಹುದ್ದೆಗೆ ಅಭ್ಯರ್ಥಿಗಳು ಮಾಸಿಕವಾಗಿ 1,25,000 ವೇತನ ಇರುತ್ತದೆ.
ವಯೋಮಿತಿ ವಿವರಣೆ :
ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿಗದಿಪಡಿಸಿರುವ ವಯೋಮಿತಿಯ ವಿವರಣೆ. ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ನಿಗದಿಪಡಿಸಲಾಗಿದೆ.
ಗರಿಷ್ಠ ವಯೋಮಿತಿ :
• MBBS ವೈದ್ಯಾಧಿಕಾರಿಗಳು : ಹುದ್ದೆಗೆ 70 ವರ್ಷ
• ಸ್ತ್ರೀರೋಗ ತಜ್ಞ ವೈದ್ಯರು : ಹುದ್ದೆಗೆ 65 ವರ್ಷ
• ಮಕ್ಕಳ ತಜ್ಞರು : ಹುದ್ದೆಗೆ 65 ವರ್ಷ
• ಮಾನಸಿಕ ರೋಗ ತಜ್ಞರು : 65 ವರ್ಷ
• ಫಿಸಿಷಿಯನ್ : ಹುದ್ದೆಗೆ 65 ವರ್ಷ
ಮೀಸಲಾತಿ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಕ್ಕೆ ನೀಡಲಾಗಿದೆ
ಅರ್ಜಿ ಶುಲ್ಕದ ವಿವರಣೆ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಳಗಾವಿ ಜಿಲ್ಲೆ ನೇಮಕಾತಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಈ ಹುದ್ದೆಗೆ ವಾಕ್ ಇನ್ ಇಂಟರ್ವ್ಯೂ ಮೂಲಕ ಅರ್ಜಿಯನ್ನ ಸಲ್ಲಿಸಬಹುದು.
ಆಯ್ಕೆ ವಿಧಾನ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ನೇರ ನೇಮಕಾತಿ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
Steps to Apply for DHFWS Belagavi Medical Officers, Pediatrician Jobs 2022
ವಾಕ್ ಇನ್ ಇಂಟರ್ವ್ಯೂ ನಡೆಯುವ ಸ್ಥಳ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದ ಅಧಿಕಾರಿಗಳ ಕಚೇರಿ ಆವರಣ, ಬೆಳಗಾವಿ, ಕರ್ನಾಟಕ ಈ ವಿಳಾಸಕ್ಕೆ 25 ನವಂಬರ್ 2020ರ ಒಳಗಾಗಿ ನಿಮ್ಮ ಎಲ್ಲಾ ದಾಖಲೆಗಳ ಪ್ರತಿಯನ್ನು ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 17.11.2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 25.11.2022
Notification Link : Click
ಸೂಚನೆ :
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆ ಹೊರಡಿಸಿರುವ ಅಧಿಶೋಧನೆಯನ್ನು ಸ್ಪಷ್ಟವಾಗಿ ಓದಿಕೊಂಡು ಅರ್ಥೈಸಿಕೊಂಡು ತದನಂತರವೇ ಅರ್ಜಿಯನ್ನು ಸಲ್ಲಿಸಬೇಕು.