ಜಿಲ್ಲಾ ಆಯುಷ್ ಕಚೇರಿ ಕಲಬುರಗಿ ನೇಮಕಾತಿ 2023. ಇಲಾಖೆಯಲ್ಲಿ ಖಾಲಿ ಇರುವ ಔಷಧ ವಿತರಕರು, ಸ್ತ್ರೀರೋಗ ಅಟೆಂಡರ್ ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ 10ನೇ ತರಗತಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕಲಬುರಗಿ – ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿ ಮತ್ತು ಅರ್ಹತೆ ಪಡೆದ ಅಭ್ಯರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ತದನಂತರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
ನೇಮಕಾತಿ ಇಲಾಖೆ ಹೆಸರು :
ಜಿಲ್ಲಾ ಆಯುಷ್ ಕಛೇರಿ ಕಲಬುರಗಿ
ಹುದ್ದೆಗಳ ಹೆಸರು :
1. ಆಯುಷ್ ತಜ್ಞವೈದ್ಯರು
2. ಔಷಧ ವಿತರಕರು
3. ಮಸಾಜಿಸ್ಟ್
4. ಕ್ಷಾರಸೂತ್ರ ಅಟೆಂಡರ್
5. ಸ್ತ್ರೀರೋಗ ಅಟೆಂಡರ್ ( ಮಹಿಳೆ )
6. ಮಲ್ಟಿ ಪರ್ಪಸ್ ವರ್ಕರ್
ಒಟ್ಟು ಹುದ್ದೆಗಳ :
1. ಆಯುಷ್ ತಜ್ಞವೈದ್ಯರು 08 ಹುದ್ದೆಗಳು
2. ಔಷಧ ವಿತರಕರು 07 ಹುದ್ದೆಗಳು
3. ಮಸಾಜಿಸ್ಟ್ 4 ಹುದ್ದೆಗಳು
4. ಕ್ಷಾರಸೂತ್ರ ಅಟೆಂಡರ್ 8 ಹುದ್ದೆಗಳು
5. ಸ್ತ್ರೀರೋಗ ಅಟೆಂಡರ್ ( ಮಹಿಳೆ ) 4 ಹುದ್ದೆಗಳು
6. ಮಲ್ಟಿ ಪರ್ಪಸ್ ವರ್ಕರ್ 4 ಹುದ್ದೆಗಳು
ರಾಷ್ಟ್ರೀಯ ಆಯುಷ್ ಕಚೇರಿ ಇಲಾಖೆಯಲ್ಲಿ ಒಟ್ಟು 32 ಹುದ್ದೆಗಳು ಖಾಲಿ ಇವೆ.
ಉದ್ಯೋಗದ ಸ್ಥಳ : ಕಲಬುರಗಿ – ಕರ್ನಾಟಕ
ಶೈಕ್ಷಣಿಕ ವಿದ್ಯಾರ್ಹತೆ:
ಕ್ಷಾರಸೂತ್ರ ಅಟೆಂಡರ್ / ಸ್ತ್ರೀರೋಗ ಅಟೆಂಡರ್ ( ಮಹಿಳೆ ) / ಮಲ್ಟಿ ಪರ್ಪಸ್ ವರ್ಕರ್ ಹುದ್ದೆಗಳಿಗೆ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಹತ್ತನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆ ಪಡೆದಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.
ಮಸಾಜಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕನಿಷ್ಠ 7th ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು
ಔಷಧ ವಿತರಕರು ಹುದ್ದೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಎಸ್ ಎಸ್ ಎಲ್ ಸಿ ಹಾಗೂ ಡಿಪ್ಲೋಮೋ ಇನ್ ಫಾರ್ಮಸಿ ವಿಷಯದಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದು.
ಆಯುಷ್ ತಜ್ಞವೈದ್ಯರು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಲು ಬಯಸುವ ಅಭ್ಯರ್ಥಿಗಳು M.D, M.S, ಹಾಗೂ ಸಾರ್ಥಕ್ವತ್ರ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅರ್ಹತೆ ಪಡೆದಿರುತ್ತಾರೆ.
ವಯೋಮಿತಿ ವಿವರಣೆ :
ಇಲಾಖೆಯ ನಿಯಮಗಳ ಅನುಸಾರ ವಯೋಮಿತಿಯನ್ನು ನಿಗದಿಪಡಿಸಿದೆ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನಾವು ನೀಡಿರುವ ಅಧಿಸೂಚನೆಯನ್ನು ಗಮನಿಸಿ.
ವಯೋಮಿತಿಯಲ್ಲಿ ಮೀಸಲಾತಿ :
ಇಲಾಖೆಯ ನಿಯಮಗಳ ಅನುಸಾರ ವಯೋಮಿತಿಯಲ್ಲಿ ಸಡಲಿಕ್ಕೆ ಸಹ ಇರುತ್ತದೆ.
ವೇತನ ಶ್ರೇಣಿ ವಿವರಣೆ :
1. ಆಯುಷ್ ತಜ್ಞವೈದ್ಯರು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ 35000/ವೇತನ ಇರುತ್ತದೆ
2. ಔಷಧ ವಿತರಕರು ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ 15,821/-ವೇತನ ನಿಗದಿಪಡಿಸಿದೆ.
3. ಮಸಾಜಿಸ್ಟ್ / ಕ್ಷಾರಸೂತ್ರ ಅಟೆಂಡರ್/ ಸ್ತ್ರೀರೋಗ ಅಟೆಂಡರ್ ( ಮಹಿಳೆ ) ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ 11356 ವೇತನ ನಿಗದಿಪಡಿಸಲಾಗಿದೆ.
4. ಮಲ್ಟಿ ಪರ್ಪಸ್ ವರ್ಕರ್ ಅರ್ಜಿ ಸಲ್ಲಿಸಿದ ಅಭ್ಯರ್ಥಿಗೆ ನಿಯಮಗಳ ಅನುಸಾರ 10,300/-ವೇತನ ಇರುತ್ತದೆ.
ಆಯ್ಕೆ ವಿಧಾನ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ನಾವು ನೀಡಿರುವ ಇಲಾಖೆಯ ಅಧಿಸೂಚನೆಯನ್ನು ಗಮನಿಸಿ.
ಅರ್ಜಿ ಸಲ್ಲಿಸುವ ವಿಧಾನ : ಅಭ್ಯರ್ಥಿಯು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಅಭ್ಯರ್ಥಿಗಳು ಸಂಬಂಧಿಸಿದ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ, ನಿಗಧಿತ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು ಅಥವಾ ಈ ಕೆಳಗಡೆ ನೀಡಲಾದ ಅಪ್ಲಿಕೇಷನ್ ಫಾರ್ಮ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಿ.
ಹಂತ 2 : ಅಪ್ಲಿಕೇಷನ್ ಫಾರ್ಮ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಕೊನೆಯದಾಗಿ, ಅಪ್ಲಿಕೇಷನ್ ಫಾರ್ಮ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಲಗತ್ತಿಸಲು ಸೂಚಿಸಿದ್ದರೆ, ಅವುಗಳನ್ನು ಲಗತ್ತಿಸಿ ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಯ ವಿಳಾಸಕ್ಕೆ ಖುದ್ದಾಗಿ ಹಾಜರಾಗಿ ಸಲ್ಲಿಸಬೇಕು.
ಅಂಚೆ ವಿಳಾಸ :
ಜಿಲ್ಲಾ ಆಯುಷ್ ಕಚೇರಿ, ಗಾಜಿಪುರ ಕಲಬುರಗಿ ( ನಿಗದಿತ ರೀತಿಯಲ್ಲಿ, ಪೋಸ್ಟ್, ಸ್ವೀಟ್ ಪೋಸ್ಟ್ ಅಥವಾ ಯಾವುದೇ ಇತರ ಸೇವೆಯ ಮೂಲಕ 16 ಮಾರ್ಚ್ 2023 ಅಥವಾ ಅದಕ್ಕಿಂತ ಮೊದಲು ಅರ್ಜಿಯನ್ನ ಸಲ್ಲಿಸಲು ಅವಕಾಶ ನೀಡಿದೆ.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 28.02.2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 16.03.2023
Notification Link : Click
ಮುಖ್ಯ ಪದಗಳು :
ಜಿಲ್ಲಾ ಆಯುಷ್ ಕಚೇರಿ ಇಲಾಖೆ ನೇಮಕಾತಿ 2023 ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸುವ ಮುಂಚೆ ಅಭ್ಯರ್ಥಿಗಳು ಇಲಾಖೆಯ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ಮಾಹಿತಿಯನ್ನು ಅರ್ಥೈಸಿಕೊಂಡ ಬಳಿಕ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ.