Forest Guard Jobs 894 Posts apply now ಭಾರತೀಯ ಅರಣ್ಯ ಇಲಾಖೆ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ 894 ಅರಣ್ಯ ರಕ್ಷಕ ಹುದ್ದೆಗಳಿಗೆ 10ನೇ ತರಗತಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಹಾಗೂ ಈ ಹುದ್ದೆಗಳಿಗೆ ಕರ್ನಾಟಕದ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಪಟ್ಟ ವಿದ್ಯಾರ್ಹತೆ/ವೇತನ ಶ್ರೇಣಿ/ಉದ್ಯೋಗದ ಸ್ಥಳ ಮುಂತಾದ ಮಾಹಿತಿಯನ್ನು ಪಡೆಯೋಣ.
ಅರಣ್ಯ ರಕ್ಷಕ ಹುದ್ದೆಗಳ ವಿವರಣೆ
ನೇಮಕಾತಿ ಇಲಾಖೆಯ ಹೆಸರು :
ಭಾರತೀಯ ಅರಣ್ಯ ಇಲಾಖೆ ನೇಮಕಾತಿ
ಹುದ್ದೆಗಳ ಹೆಸರು :
ಇಲಾಖೆಯಲ್ಲಿ ಒಟ್ಟು ಎರಡು ರೀತಿಯ ಹುದ್ದೆಗಳು ಖಾಲಿ ಇವೆ.
1) ಅರಣ್ಯ ರಕ್ಷಕ ಹುದ್ದೆ
2) ಅರಣ್ಯ ಅಧಿಕಾರಿ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ :
ಭಾರತೀಯ ಅರಣ್ಯ ಇಲಾಖೆಯಲ್ಲಿ ಒಟ್ಟು 894 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ.
ವಿದ್ಯಾರ್ಹತೆ:
ಭಾರತೀಯ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಎಸ್ ಎಸ್ ಎಲ್ ಸಿ / ದ್ವಿತೀಯ ಪಿಯುಸಿಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ವಯಸ್ಸಿನ ಮಿತಿ :
ಅಭ್ಯರ್ಥಿಗಳ ವಯಸ್ಸಿನ ಮಿತಿ ಕನಿಷ್ಠ 18 ವರ್ಷ ಗರಿಷ್ಠ 25 ವರ್ಷ ನಿಗದಿಪಡಿಸಲಾಗಿದೆ
ಓಬಿಸಿ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸಿನ ಮಿತಿ 18 ವರ್ಷದಿಂದ 25 ವರ್ಷ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಕನಿಷ್ಠ 18ರಿಂದ 30 ವರ್ಷ ನಿಗದಿಪಡಿಸಲಾಗಿದೆ.
ವೇತನ ಶ್ರೇಣಿ :
ಹುದ್ದೆಗಳಿಗೆ ಅನುಗುಣವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕನಿಷ್ಠ 16500 ಇಂದ 37,700 ವೇತನ ಇರುತ್ತದೆ.
ಉದ್ಯೋಗದ ಸ್ಥಳ :
ಇಲಾಖೆಯು ಭಾರತಾದ್ಯಂತ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳಿಗೆ ನಿಗದಿಪಡಿಸಿದ ಅರ್ಜಿ ಶುಲ್ಕ ಮತ್ತು ಅರ್ಜಿ ಶುಲ್ಕ ಸಲ್ಲಿಸುವ ವಿಧಾನ.
ಅರ್ಜಿ ಶುಲ್ಕ :
ಸಾಮಾನ್ಯ ಹಾಗೂ ಓಬಿಸಿ ವರ್ಗದ ಅಭ್ಯರ್ಥಿಗಳಿಗೆ 200 ನಿಗದಿಪಡಿಸಲಾಗಿದೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ ರೂ.200 ನಿಗದಿಪಡಿಸಲಾಗಿದೆ.
ಅರಣ್ಯ ರಕ್ಷಕ ಹುದ್ದೆಗೆ ದೈಹಿಕ ಅರ್ಹತೆ ಏನು ?
- ಭಾರತೀಯ ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸುವ ಪುರುಷ ಹಾಗೂ ಮಹಿಳಾ ವರ್ಗದ ಅಭ್ಯರ್ಥಿಗಳಿಗೆ ಹೊಂದಿರಬೇಕು. ದೈಹಿಕ ಅರ್ಹತೆ ಈ ಕೆಳಗಿನಂತಿದೆ.
ಪುರುಷ ಅಭ್ಯರ್ಥಿಗಳಿಗೆ ಎತ್ತರ : 163 Cm.
ಮಹಿಳಾ ಅಭ್ಯರ್ಥಿಗಳಿಗೆ ಎತ್ತರ : 150 Cm.
ಉತ್ತರ ಭಾರತ ವಲಯದ ಅಭ್ಯರ್ಥಿಗಳಿಗೆ ಪುರುಷರಿಗೆ ಎತ್ತರ 160 ಮತ್ತು ಮಹಿಳಾ ಅಭ್ಯರ್ಥಿಗಳಿಗೆ 148 Cm
ಎದೆ ವಿಸ್ತಾರ :
ಪುರುಷ ಅಭ್ಯರ್ಥಿಗಳಿಗೆ 79cm ಎದೆ ವಿಸ್ತರಿಸಿದಾಗ 5cm 84 ಸೆಂಟಿಮೀಟರ್ ಎದೆ ವಿಸ್ತಾರ ಹೊಂದಿರಬೇಕು.
ಓಟದ ಪರೀಕ್ಷೆ ಮತ್ತು ಎತ್ತರ ಜಿಗಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ.
ಪುರುಷ ಅಭ್ಯರ್ಥಿಗಳು 25 ಕಿಲೋಮೀಟರ್ ಓಟವನ್ನು ನಾಲ್ಕು ಗಂಟೆಯಲ್ಲಿ ತಲುಪಬೇಕು
ಅದೇ ರೀತಿ ಮಹಿಳಾ ಅಭ್ಯರ್ಥಿಗಳು 14 ಕಿ.ಮೀ ಓಟವನ್ನು ನಾಲ್ಕು ಗಂಟೆಯಲ್ಲಿ ತಲುಪಬೇಕು.
- ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲಾತಿಗಳು.
1) ಭಾವಚಿತ್ರ ಮತ್ತು ಸಹಿ (ಇವುಗಳನ್ನು ಸ್ಕ್ಯಾನ್ ಮಾಡಿ )
2) ನಿಮ್ಮ ಶೈಕ್ಷಣಿಕ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಎಲ್ಲ ದಾಖಲಾತಿಗಳು.
3) ವಾಸ ಸ್ಥಳ ( ನಿವಾಸ ಪ್ರಮಾಣ ಪತ್ರ )
4) ಜಾತಿ ಆದಾಯ ಪ್ರಮಾಣ ಪತ್ರ
5) ಆಧಾರ್ ಕಾರ್ಡ್
ಆಯ್ಕೆ ವಿಧಾನ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯು ಲಿಖಿತ ಪರೀಕ್ಷೆ/ ದೈಹಿಕ ಪರೀಕ್ಷೆ/ ವೈದ್ಯಕೀಯ ಪರೀಕ್ಷೆ ಹಾಗು ದಾಖಲಾತಿ ಪರಿಶೀಲನೆ ಮುಖಾಂತರ ಆಯ್ಕೆ ಮಾಡಲಾಗುತ್ತದೆ.
ಅರಣ್ಯ ಇಲಾಖೆ ನೇಮಕಾತಿ ಕುರಿತಾದ ಪ್ರಮುಖ ದಿನಾಂಕಗಳು.
( ಇಲಾಖೆಯಿಂದ ಶೀಘ್ರದಲ್ಲಿ ನೇಮಕಾತಿ ಕುರಿತು ಮಾಹಿತಿಯನ್ನು ವರ ಹಾಕುತ್ತದೆ ತದನಂತರ ಅರ್ಜಿಯನ್ನು ಸಲ್ಲಿಸಬಹುದು ಇಲಾಖೆಯು ಆಗಸ್ಟ್ ತಿಂಗಳಲ್ಲಿ ನೇಮಕಾತಿ ಕುರಿತು ಮಾಹಿತಿಯನ್ನು ತಿಳಿಸುತ್ತದೆ )
ಅರ್ಜಿ ಸಲ್ಲಿಕೆ ಆರಂಭ ದಿನಾಂಕ :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: ಅಗಸ್ಟ್ ತಿಂಗಳು 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ಸಪ್ಟಂಬರ್ ತಿಂಗಳು 2022
ಸೂಚನೆ :
ಭಾರತೀಯ ಅರಣ್ಯ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಪ್ರತಿಯೊಬ್ಬ ಅಭ್ಯರ್ಥಿಯು ಕೆಳಗಡೆ ನೀಡಿರುವ ಇಲಾಖೆಯ ಅಧಿಕೃತ ವೆಬ್ಸೈಟ್ ಮತ್ತು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ ಅರ್ಥ ಮಾಡಿಕೊಂಡು ತದನಂತರ ಅರ್ಜಿಯನ್ನು ಸಲ್ಲಿಸಿ.
ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ಗಳಲ್ಲಿ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯನ್ನ ಉದ್ಯೋಗದ ಮಾಹಿತಿ ಬಯಸುವ ಅಭ್ಯರ್ಥಿಗಳಿಗೆ ಶೇರ್ ಮಾಡಿ.