Indian Navy Recruitment 2022 | Indian Navy Agniveer Recruitment 2022 | Apply Online for 2800 Posts

Indian Navy Recruitment 2022  : ಭಾರತೀಯ ನೌಕಾಪಡೆ ಇಲಾಖೆಯ ನೇಮಕಾತಿ 2022 ಭಾರತೀಯ ನೌಕ ಪಡೆ ಇಲಾಖೆಯಲ್ಲಿ ಖಾಲಿ ಇರುವಂತ 2800 ಹುದ್ದೆಗಳಿಗೆ ಅವಿವಾಹಿತ ಪುರುಷ ಮತ್ತು ಅವಿವಾಹಿತ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯಾರು ಅಗ್ನಿವೀರ್ ( SSR ) ಆಗಿ ದಾಖಲಾತಿಗಾಗಿ ಭಾರತ ಸರ್ಕಾರವು ನಿಗದಿಪಡಿಸಿದ ಅರ್ಹತಾ ಷರತ್ತುಗಳನ್ನು ಪೂರೈಸಿ 01-ನವಂಬರ್-2022 ಬ್ಯಾಚ್ ಗಾಗಿ. ಈ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ, ವೇತನ, ಉದ್ಯೋಗದ ಸ್ಥಳ ಮುಂತಾದ ಮಾಹಿತಿಯನ್ನು ಪಡೆಯೋಣ.

ನೇಮಕಾತಿ ಇಲಾಖೆಯ ಹೆಸರು :
ಭಾರತೀಯ ನೌಕಾಪಡೆ ಇಲಾಖೆ ನೇಮಕಾತಿ 2022.

ಹುದ್ದೆಗಳ ಹೆಸರು :
ಅಗ್ನಿವೀರ್ ( ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ )

ಒಟ್ಟು ಹುದ್ದೆಗಳ ಸಂಖ್ಯೆ :
ಅಗ್ನಿವೀರ್ ( ಪುರುಷ ) 2240
ಅಗ್ನಿವೀರ್ ( ಮಹಿಳಾ) 560
ಭಾರತೀಯ ನೌಕಾಪಡೆ ಇಲಾಖೆಯಲ್ಲಿ ಒಟ್ಟು 2800 ಹುದ್ದೆಗಳ ನೇಮಕಾತಿ ನಡೆಯುತ್ತಿದೆ

ಶೈಕ್ಷಣಿಕ ವಿದ್ಯಾರ್ಹತೆ :
ಭಾರತೀಯ ನೌಕಾಪಡೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಯಾವುದೇ ಮಾನ್ಯತೆಯ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ‌ ಗಣಿತ ಮತ್ತು ಭೌತಶಾಸ್ತ್ರ ದೊಂದಿಗೆ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಅಥವಾ 10+2 ಪಾಸಾಗಿರಬೇಕು ಮತ್ತು ರಸಾಯನಶಾಸ್ತ್ರ ಬಯೋಲಜಿ ಕಂಪ್ಯೂಟರ್ ಸೈನ್ಸ್ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಓದಿರಬೇಕು ಈ ಕುರಿತ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.

ವಯಸ್ಸಿನ ಮಿತಿ :
ಅಭ್ಯರ್ಥಿಗಳು 01-ನವಂಬರ್-1999 ರಿಂದ 30-ಏಪ್ರಿಲ್-2005 ರ ದಿನಾಂಕದ ನಡುವೆ ಜನಿಸಿರಬೇಕು ( ಎರಡು ದಿನಾಂಕಗಳನ್ನು ಒಳಗೊಂಡಂತೆ )

ವಯೋಮಿತಿಯಲ್ಲಿ ಸಡಿಲಿಕೆ :
ಭಾರತೀಯ ನೌಕಾಪಡೆಯ ನಿಯಮಗಳ ಅನುಸಾರವಾಗಿ ಸಡಿಲಿಕೆಯನ್ನು ನೀಡಲಾಗಿರುತ್ತದೆ ವಯಸ್ಸಿನ ಸಿಡಿಲಿಕೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.

ವೇತನ ಮತ್ತು ಭತ್ತೆಗಳು :
ಯಾವ ಅಭ್ಯರ್ಥಿಗಳು ಈ ಅಗ್ನಿವೀರ್ ಹುದ್ದೆಗಳಿಗೆ ಆಯ್ಕೆ ಯಾಗುತ್ತಾರೋ ಅಂತಹ ಅಭ್ಯರ್ಥಿಗಳಿಗೆ ಇಲಾಖೆಯು ಪ್ರತಿ 30,000 ಪ್ಯಾಕೇಜ್ ಅನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲ ಇದರ ಜೊತೆಗೆ ಅಪಾಯ ಮತ್ತು ಕಷ್ಟ ಕೊಡುಗೆ ಮತ್ತು ಪ್ರಯಾಣದ ಭತ್ತೆಗಳು ಸಹ ಪಾವತಿ ಮಾಡಲಾಗುತ್ತದೆ

Join Now

ಸೇವಾ ನಿಧಿ :
ಸೇವಾ ನಿಧಿಯು ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ನೀಡುವ ಮಾಸಿಕ ವೇತನ ಹಾಗೂ ಭತ್ತೆ ಕುರಿತು ವರದಿ ನೀಡುತ್ತದೆ. ಇದರ ಕುರಿತ ಮಾಹಿತಿ ಈ ಕೆಳಗಿನಂತಿದೆ.

Indian Navy Recruitment 2022 | Indian Navy Agniveer Recruitment 2022 | Apply Online for 2800 Posts

ಅರ್ಜಿಯ ಶುಲ್ಕ :
ಭಾರತೀಯ ನೌಕಾಪಡೆಯ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.

ದೈಹಿಕ ಸಾಮರ್ಥ್ಯ : 

01Gender1.6 Km runSquats (Uthak Baithak)Push-upsBent Knee Sit-up
02Male06 min 30 sec2012
03Female08 min1510

ಆಯ್ಕೆ ವಿಧಾನ :
ಅಗ್ನಿವೀರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನ ಶಾರ್ಟ್ ಲಿಸ್ಟಿಂಗ್, ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು :
ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಪ್ರಾರಂಭದ ದಿನಾಂಕ 15-ಜುಲೈ-2022 ಅದೇ ರೀತಿ ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 22-ಜುಲೈ-2022

ಅಗ್ನಿವೀರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಇಲಾಖೆಯೂ ಕೇವಲ ಏಳು ದಿನದ ಕಾಲಾವಕಾಶ ನೀಡಿದ್ದು ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಗಳು ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ವಿಧಾನ :
ಅಗ್ನಿವೀರ್ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವಂತಹ ಪ್ರತಿಯೊಬ್ಬ ಅಭ್ಯರ್ಥಿಗಳು ಭಾರತೀಯ ನೌಕಾಪಡೆಯ ಇಲಾಖೆಯ ಅಧಿಕೃತ ವೆಬ್ಸೈಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.

ಸೂಚನೆ :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ಇಲಾಖೆಯ ಅಧಿಕೃತ ಅಧಿಸೂಚನೆ ಪ್ರಕಾರ ಇರುತ್ತದೆ ಈ ಉದ್ಯೋಗದ ಹೆಚ್ಚಿನ ಮಾಹಿತಿಯನ್ನು ಪಡೆಯಲು ದಯವಿಟ್ಟು ಕೆಳಗೆ ನೀಡಿರುವ ಅಧಿಸೂಚನೆ ಲಿಂಕನ್ನು ಕ್ಲಿಕ್ ಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಿ.

  • ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲಾತಿಗಳು
    1) ವಿದ್ಯಾರ್ಥಿಯ ಆಧಾರ್ ಕಾರ್ಡ್
    2) ವಿದ್ಯಾರ್ಥಿಯ ದ್ವಿತೀಯ ಪಿಯುಸಿ ಅಂಕಪಟ್ಟಿ
    3) ಜಾತಿ ಆದಾಯ ಪ್ರಮಾಣ ಪತ್ರ
    4) ವಿದ್ಯಾರ್ಥಿಗಳಿಗ ಬಿಪಿಎಲ್ ಕಾರ್ಡ್.

 

Spread the love