Mysore Zilla Panchayat recruitment 36 Assistant post 2022 – Karnataka news Hunter

ಮೈಸೂರು ಜಿಲ್ಲಾ ಪಂಚಾಯತ್ ನೇಮಕಾತಿ 2022. ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 36 ವಿವಿಧ ಹುದ್ದೆಗಳಾದ ಆಡಳಿತ ಸಹಾಯಕ ಹಾಗೂ ತಾಂತ್ರಿಕ ಸಹಾಯಕ ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 17,600 ರಿಂದ 29,000 ವೇತನ ನೀಡಲಾಗುತ್ತದೆ. ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ವಿಧಾನ / ಅರ್ಜಿ ಸಲ್ಲಿಸುವ ವಿಧಾನ ಆಯ್ಕೆ ವಿಧಾನ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ. ಅಭ್ಯರ್ಥಿಗಳು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ

Mysore Zilla Panchayat recruitment 2022 – apply online for 36 post

ನೇಮಕಾತಿ ಇಲಾಖೆ ಹೆಸರು :
ಮೈಸೂರು ಜಿಲ್ಲಾ ಪಂಚಾಯತ್ ಇಲಾಖೆ

ಹುದ್ದೆಗಳ ಹೆಸರು :
ತಾಂತ್ರಿಕ ಸಹಾಯಕ ಅಭಿಯಂತರರು
ತಾಂತ್ರಿಕ ಸಂಯೋಜಕರು
ಮಾಹಿತಿ ಶಿಕ್ಷಣ ಸಂವಹನ ಸಂಯೋಜಕರು
ತಾಂತ್ರಿಕ ಸಹಾಯಕರು ( ಕೃಷಿ ಇಲಾಖೆ )
ತಾಂತ್ರಿಕ ಸಹಾಯಕರು ( ತೋಟಗಾರಿಕೆ ಇಲಾಖೆ )
ತಾಂತ್ರಿಕ ಸಹಾಯಕರು ( ಅರಣ್ಯ ಇಲಾಖೆ )
ತಾಂತ್ರಿಕ ಸಹಾಯಕರು ( ರೇಷ್ಮೆ ಇಲಾಖೆ )
ಆಡಳಿತ ಸಹಾಯಕರು

ಒಟ್ಟು ಹುದ್ದೆಗಳ ಸಂಖ್ಯೆ :
ಮೈಸೂರು ಜಿಲ್ಲಾ ಪಂಚಾಯತ್ ಇಲಾಖೆಯಲ್ಲಿ ಒಟ್ಟು 36 ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ವೇತನ ಶ್ರೇಣಿಯ ವಿವರಣೆ :-

  • ತಾಂತ್ರಿಕ ಸಹಾಯಕ ಅಭಿಯಂತರರು ಒಟ್ಟು 4 ಹುದ್ದೆಗಳಿಗೆ. ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ ವೇತನ ಶ್ರೇಣಿ 24,000 ನಿಗದಿಪಡಿಸಲಾಗಿದೆ.
  • ತಾಂತ್ರಿಕ ಸಂಯೋಜಕರು ಒಟ್ಟು 2 ಹುದ್ದೆಗಳು. ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 29,000 ವೇತನ ನೀಡಲಾಗುತ್ತದೆ.
  • ಮಾಹಿತಿ ಶಿಕ್ಷಣ ಸಹನಾ ಸಂಯೋಜಕರು ಒಟ್ಟು ಒಂದು ಹುದ್ದೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 24,000 ವೇತನ ನೀಡಲಾಗುತ್ತದೆ.
  • ತಾಂತ್ರಿಕ ಸಹಾಯಕರು ಕೃಷಿ ವಿಭಾಗ ಒಟ್ಟು 4 ಹುದ್ದೆಗಳು ಖಾಲಿ ಇವೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ 24,000/- ನಿಗದಿಪಡಿಸಲಾಗಿದೆ.
  • ತಾಂತ್ರಿಕ ಸಹಾಯಕರು ತೋಟಗಾರಿಕೆ ವಿಭಾಗ ಒಟ್ಟು ಮತ್ತು ಹುದ್ದೆಗಳು ಖಾಲಿ ಇವೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ 24,000 ನೀಡಲಾಗುತ್ತದೆ.
  • ತಾಂತ್ರಿಕ ಸಹಾಯಕರು ಅರಣ್ಯ ವಿಭಾಗ ಒಟ್ಟು 06 ಹುದ್ದೆಗಳು ಖಾಲಿಯಿದ್ದು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 24,000 ವೇತನ ನೀಡಲಾಗುತ್ತದೆ.
  • ತಾಂತ್ರಿಕ ಸಹಾಯಕರು ರೇಷ್ಮೆ ಒಟ್ಟು ಉದ್ಯೋಗ ಸಂಖ್ಯೆ 01 ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 24 ಸಾವಿರ ವೇತನ ನಿಗದಿಪಡಿಸಲಾಗಿದೆ.
  • ಆಡಳಿತ ಸಹಾಯಕರು ಒಟ್ಟು 08 ಹುದ್ದೆಗಳು ಖಾಲಿ ಇವೆ. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕವಾಗಿ 17600 ನಿಗದಿಪಡಿಸಲಾಗಿದೆ.

ಮೈಸೂರು ಜಿಲ್ಲಾ ಪಂಚಾಯತ್ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ವಯೋಮಿತಿ ವಿವರಣೆ

ವಯೋಮಿತಿ :
ಮೈಸೂರು ಜಿಲ್ಲಾ ಪಂಚಾಯತ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳು ಗರಿಷ್ಠ ವಯಸ್ಸು 40 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಸಹ ನೀಡಲಾಗಿದೆ.

ಮೈಸೂರು ಜಿಲ್ಲಾ ಪಂಚಾಯತ್ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ನಿಧಿಪಡಿಸಿದ ಶೈಕ್ಷಣಿಕ ವಿದ್ಯಾರ್ಹತೆ ವಿವರಣೆ

ಶೈಕ್ಷಣಿಕ ವಿದ್ಯಾರ್ಹತೆ :-

1) ತಾಂತ್ರಿಕ ಸಹಾಯಕ ಅಭಿಯಂತರರು – 04 ಹುದ್ದೆ
ಬಿ.ಇ (ಸಿವಿಲ್) ಶೈಕ್ಷಣಿಕ ಅರ್ಹತೆ ಜೊತೆಗೆ ಗಣಕಯಂತ್ರ ಜ್ಞಾನ ಹೊಂದಿರಬೇಕು.

Join Now

2) ತಾಂತ್ರಿಕ ಸಂಯೋಜಕರು – 02 ಹುದ್ದೆ
ಬಿ.ಇ (ಸಿವಿಲ್) ಶೈಕ್ಷಣಿಕ ಅರ್ಹತೆ ಜೊತೆಗೆ ಗಣಕಯಂತ್ರ ಜ್ಞಾನ ಹೊಂದಿರಬೇಕು.

3) ಮಾಹಿತಿ ಶಿಕ್ಷಣ ಸಂವಹನ ಸಂಯೋಜಕರು – 01 ಹುದ್ದೆ
ಸ್ನಾತಕೋತ್ತರ ಪದವಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

4) ತಾಂತ್ರಿಕ ಸಹಾಯಕರು (ಕೃಷಿ ಇಲಾಖೆ) – 04 ಹುದ್ದೆ
ಬಿ.ಎಸ್ಸಿ (ಕೃಷಿ) ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

5) ತಾಂತ್ರಿಕ ಸಹಾಯಕರು (ತೋಟಗಾರಿಕೆ ಇಲಾಖೆ) – 10 ಹುದ್ದೆ
ಬಿ.ಎಸ್ಸಿ (ತೋಟಗಾರಿಕೆ) ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

6) ತಾಂತ್ರಿಕ ಸಹಾಯಕರು (ಅರಣ್ಯ ಇಲಾಖೆ) – 06 ಹುದ್ದೆ
ಬಿ.ಎಸ್ಸಿ (ಅರಣ್ಯ) ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

7) ತಾಂತ್ರಿಕ ಸಹಾಯಕರು (ರೇಷ್ಮೆ ಇಲಾಖೆ) – 01 ಹುದ್ದೆ
ಬಿ.ಎಸ್ಸಿ (ರೇಷ್ಮೆ) ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

8) ಆಡಳಿತ ಸಹಾಯಕರು – 08 ಹುದ್ದೆ
ಬಿ.ಕಾಂ ಪದವೀಧರರಾಗಿರಬೇಕು. ಕನ್ನಡ ಮತ್ತು ಇಂಗ್ಲೀಷ್ ಟೈಪಿಂಗ್ ನಲ್ಲಿ ಪರಿಣಿತಿ ಹೊಂದಿರಬೇಕು. MS Word, Excel, PowerPoint ರಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು

ಅರ್ಜಿ ಶುಲ್ಕ :
ಮೈಸೂರು ಜಿಲ್ಲಾ ಪಂಚಾಯತ್ ಈ ಇಲಾಖೆಯ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ :-

  • ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹಾಯ್ ಗ್ರಾಮ ಪಂಚಾಯಿತಿ ವ್ಯಾಪ್ತಿಗಳ ಕೊಡುವ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಲು ಅರ್ಹತೆ ಪಡೆದಿರುತ್ತಾರೆ.
  • ಹಂತ 1 : ಇಲಾಖೆಯ Official Site ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ Apply Online Link ಮೇಲೆ ಕ್ಲಿಕ್ ಮಾಡಿ Application ತೆರೆದುಕೊಳ್ಳಿ.
  • ಹಂತ 2 : Application ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
  • ಹಂತ 3 : ಕೊನೆಯದಾಗಿ, Application ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು Upload ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ Upload ಮಾಡಿ (ಅಗತ್ಯವಿದ್ದರೆ ಮಾತ್ರ).
  • ಆಯ್ಕೆ ವಿಧಾನ :
    ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶೈಕ್ಷಣಿಕ ವಿದ್ಯಾರ್ಥಿಯಲ್ಲಿ ಪಡೆದಂತ ಅಂಕಗಳ ಆಧಾರದ ಮೇಲೆ ಹಾಗೂ ಮೂಲ ದಾಖಲಾತಿಗಳ ಪರಿಶೀಲನೆ ಅನುಭವದ ಆಧಾರದ ಮೇಲೆ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 15-ಡಿಸೆಂಬರ್-2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 30-12-2022

Apply Link : Click

WedSite :Click

ಸೂಚನೆ :-
ಮೈಸೂರು ಜಿಲ್ಲಾ ಪಂಚಾಯತ್ ಇಲಾಖೆ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ ತಾಂತ್ರಿಕ ಸಹಾಯಕ ಅಭಿಯಂತರರು, ಆಡಳಿತ ಸಹಾಯಕರು ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸುವುದಕ್ಕಿಂತ ಮುಂಚೆ ಇಲಾಖೆಯು ಹೊರಡಿಸುವ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ಅರ್ಥೈಸಿಕೊಂಡು ತದನಂತರ ಅರ್ಜಿಯನ್ನು ಸಲ್ಲಿಸಿ.

Spread the love