North East Forntier Railway recruitment 2022-23 | 10th Pass, PUC, ITI Pass Jobs

ರೈಲ್ವೆ ಇಲಾಖೆ ನೇಮಕಾತಿ 2022-23. ಈಶಾನ್ಯ ಗಡಿ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ದ್ವಿತೀಯ ಪಿಯುಸಿ / 10ನೇ ತರಗತಿ / ಐಟಿಐ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ವಿಧಾನದ ವಿವರಣೆ / ಅರ್ಜಿ ಸಲ್ಲಿಸುವ ವಿಧಾನ / ಉದ್ಯೋಗದ ಸ್ಥಳ ಮುಂತಾದ ಮಾಹಿತಿ ಈ ಕೆಳಗಿನಂತೆ ವಿವರಿಸಲಾಗಿದೆ. ಅರ್ಜಿದಾರರು ದಯವಿಟ್ಟು ಈ ಮಾಹಿತಿಯನ್ನು ಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ.

ಈಶಾನ್ಯ ಫ್ರಾಂಟಿಯರ್ ರೈಲ್ವೇ ನೇಮಕಾತಿ 2022-23 / ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ವಿವರಣೆ

ಇಲಾಖೆ ಹೆಸರು :
ಈಶಾನ್ಯ ಫ್ರಾಂಟಿಯರ್ ರೈಲ್ವೇ ವಲಯ

ಹುದ್ದೆಗಳ ಹೆಸರು :
• ಸ್ಕೌಟ್ ಮತ್ತು ಗೇಟ್ಸ್ ಕೋಟಾ ( ಹಂತ-1 )
• ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾ ( ಮಟ್ಟ-2 )

ಒಟ್ಟು ಹುದ್ದೆಗಳ ಸಂಖ್ಯೆ :
ಈಶಾನ್ಯ ಫ್ರಾಂಟಿಯರ್ ರೈಲ್ವೇ ವಲಯದಲ್ಲಿ ಒಟ್ಟು 12 ಹುದ್ದೆಗಳು ಖಾಲಿ ಇವೆ.

ಉದ್ಯೋಗದ ಸ್ಥಳ :
ಈ ಹುದ್ದೆಗಳು ಭಾರತಾದ್ಯಂತ ನೇಮಕಾತಿ ಮಾಡಲಾಗುತ್ತದೆ

ಈಶಾನ್ಯ ಫ್ರಾಂಟಿಯರ್ ರೈಲ್ವೇ ನೇಮಕಾತಿ 2022-23 / ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ ವಿವರಣೆ

ಶೈಕ್ಷಣಿಕ ವಿದ್ಯಾರ್ಹತೆ :
ಸ್ಕೌಟ್ ಮತ್ತು ಗೇಟ್ಸ್ ಕೋಟಾ ( ಹಂತ-1 ) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ಹತ್ತನೇ ತರಗತಿ ಹಾಗೂ ಐಟಿಐ ಪಾಸ್ ಆಗಿರಬೇಕು.

ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾ ( ಮಟ್ಟ-2 ) ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಂತ ಸಂಸ್ಥೆ ಅಥವಾ ಮಂಡಳಿಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.

ವಯೋಮಿತಿ ವಿವರಣೆ :
ಈಶಾನ್ಯ ಫ್ರಾಂಟಿಯರ್ ರೈಲ್ವೆ ವಲಯ ನೇಮಕಾತಿ ಸಂಬಂಧಿಸಿದ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಪ್ರತಿಯೊಬ್ಬ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ಗರಿಷ್ಠ ವಯಸ್ಸು 33 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಸಹ ಇರುತ್ತದೆ.

Join Now

ಈಶಾನ್ಯ ಫ್ರಾಂಟಿಯರ್ ರೈಲ್ವೇ ನೇಮಕಾತಿ 2022-23 / ಹುದ್ದೆಗಳಿಗೆ ಸಂಬಂಧಿಸಿದ ಅರ್ಜಿ ಶುಲ್ಕದ ವಿವರಣೆ

ಅರ್ಜಿ ಶುಲ್ಕ :
• ಎಲ್ಲಾ ವರ್ಗದ ಅಭ್ಯರ್ಥಿಗಳು : 500/-
• ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ 250/-

ಅರ್ಜಿ ಶುಲ್ಕ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್ / ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ /ಆನ್ಲೈನ್ ಮೂಲಕ ಸಹ ಪಾವತಿ ಮಾಡಬಹುದು.

ಆಯ್ಕೆ ವಿಧಾನ :
ಈಶಾನ್ಯ ಫ್ರಾಂಟಿಯರ್ ರೈಲ್ವೆ ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ಲಿಖಿತ ಪರೀಕ್ಷೆ / ದಾಖಲಾತಿ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

  • ಅರ್ಜಿ ಸಲ್ಲಿಕೆಯ ವಿಧಾನ:
    ಅಭ್ಯರ್ಥಿಗಳು ಅರ್ಜಿಯನ್ನು ಆಫ್ಲೈನ್ ಮೂಲಕ ಸಲ್ಲಿಸಬೇಕು.
  • ಮೊದಲು, ಅಧಿಕೃತ ವೆಬ್‌ಸೈಟ್ @nfr.indianrailways.gov.in ಗೆ ಭೇಟಿ ನೀಡಿ ಮತ್ತು ನೀವು ಅರ್ಜಿ ಸಲ್ಲಿಸಲಿರುವ ಈಶಾನ್ಯ ಫ್ರಾಂಟಿಯರ್ ರೈಲ್ವೇ ನೇಮಕಾತಿ ಅಥವಾ ವೃತ್ತಿಗಳನ್ನು ಪರಿಶೀಲಿಸಿ.
  • ಸ್ಕೌಟ್ಸ್ ಮತ್ತು ಗೈಡ್ಸ್ ಕೋಟಾ ಉದ್ಯೋಗಗಳಿಗಾಗಿ ಅರ್ಜಿ ನಮೂನೆಯನ್ನು ಅಧಿಕೃತ ವೆಬ್‌ಸೈಟ್ ಅಥವಾ ಅಧಿಸೂಚನೆ ಲಿಂಕ್‌ನಿಂದ ಡೌನ್‌ಲೋಡ್ ಮಾಡಿ.
  • ಅರ್ಜಿ ನಮೂನೆಯನ್ನು ಪ್ರಾರಂಭಿಸುವ ಮೊದಲು ಕೊನೆಯ ದಿನಾಂಕವನ್ನು ಪರಿಶೀಲಿಸಿ.
  • ಯಾವುದೇ ತಪ್ಪುಗಳಿಲ್ಲದೆ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
    ಅರ್ಜಿ ಶುಲ್ಕವನ್ನು ಪಾವತಿಸಿ (ಅನ್ವಯಿಸಿದರೆ) ಮತ್ತು ಕೊನೆಯ ದಿನಾಂಕದ ಮೊದಲು (03-ಜನವರಿ-2023).
  • ಸ್ವಯಂ-ದೃ;ಢೀಕರಿಸಿದ ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಅರ್ಜಿಯನ್ನು ಸಲ್ಲಿಸಿ.
  • ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯ ಸಂಖ್ಯೆ/ಕೊರಿಯರ್ ಸ್ವೀಕೃತಿ ಸಂಖ್ಯೆಯನ್ನು ಕ್ಯಾಪ್ಚರ್ ಮಾಡಿ

ಅಂಚೆ ವಿಳಾಸ :
ಪ್ರಧಾನ ಮುಖ್ಯ ಸಿಬ್ಬಂದಿ ಅಧಿಕಾರಿ, ಈಶಾನ್ಯ ಫ್ರಾಂಟಿಯರ್ ರೈಲ್ವೆ ಹೆಚ್ಕ್ಯು, ಮಾಲಿಗಾಂವ್, ಗುವಾಹಟಿ-781011 ಗೆ ಕಳುಹಿಸಬೇಕಾಗುತ್ತದೆ.

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 03-ಡಿಸೆಂಬರ್-2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 03-ಜನವರಿ-2022

Apply Link : Click

Notification Link :Click

ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಮತ್ತು ಫೇಸ್ಬುಕ್ ಗ್ರೂಪ್ ಗಳ ಮೂಲಕ ಹಂಚಿಕೊಳ್ಳಿ ಆದಷ್ಟು ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ.

ಸೂಚನೆ :
ಈಶಣ್ಣ ಗಡಿ ರೈಲ್ವೇ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ಅದನ್ನು ಅರ್ಥೈಸಿಕೊಂಡು ತದನಂತರವೇ ಅರ್ಜಿಯನ್ನ ಸಲ್ಲಿಸಿ.

Spread the love