Raichur headmaster came to school drinking alcohol: ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷರತಾ ಪರಬ್ರಹ್ಮ ಗುರುವೇ ತತ್ಮೈ ಶ್ರೀ ಗುರುವೇ ನಮಃ ಎಂಬ ನುಡಿಯನ್ನು ನಾವು ಸ್ಮರಿಸುತ್ತಾ ಬಂದಿದ್ದೇವೆ ಆದರೆ ಈಗಿನ ದಿನಮಾನಗಳಲ್ಲಿ ಗುರುವಿಗೆ ಗುರುವಿನ ಸ್ಥಾನಕ್ಕೆ ಅವಮಾನವಾಗುವ ರೀತಿ ಕೆಲವೊಂದು ಘಟನೆಗಳು ನಡೆಯುತ್ತಲೇ ಇರುತ್ತವೆ. ಅದೇ ರೀತಿ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕು ಗೋನಾಳ ಗ್ರಾಮದ ಅಂಬಾದೇವಿ ನಗರದಲ್ಲಿ ಮುಖ್ಯ ಗುರುಗಳಾದ ಶ್ರೀ ನಿಂಗಪ್ಪ ಅವರು ಶಾಲೆ ಅವಧಿಯಲ್ಲಿ ಮಧ್ಯಪಾನ ಸೇವಿಸಿ ಶಾಲೆಯ ಅಡಿಗೆ ಕೋಣೆಯ ರೂಮ್ ಎದುರಿಗೆ ಮಲಗಿಕೊಂಡಿದ್ದಾರೆ.
Raichur headmaster came to school drinking alcohol: ಮದ್ಯಪಾನ ಸೇವಿಸಿ ಶಾಲೆಗೆ ಬಂದ ಹೆಡ್ ಮಾಸ್ಟರ್
ಶ್ರೀ ನಿಂಗಪ್ಪ ಅವರು ಶಾಲೆಯ ಅವಧಿಯಲ್ಲಿ ಮದ್ಯಪಾನ ಸೇವಿಸಿ ಅಡುಗೆಯ ಕೋಣೆಯಲ್ಲಿ ಮಲಗಿಕೊಂಡಿರುವ ದೃಶ್ಯವನ್ನು ಮೊಬೈಲ್ ಮೂಲಕ ಸೆರೆ ಹಿಡಿದು ಅಂತರ್ಜಾಲತಾಣದಲ್ಲಿ ಬಿಡುಗಡೆಯಾಗಿದೆ ಇದಕ್ಕೆ ಸಂಬಂಧಿಸಿದ ಕೆಲವೊಂದಿಷ್ಟು ಮಾಹಿತಿಯನ್ನು ಈ ಕೆಳಗಿನಂತೆ ತಿಳಿಸಲಾಗಿದೆ.
ಹಲವಾರು ದಶಕಗಳಿಂದಲೂ ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ವಂಚಿತರಾದ ಬಡವರು ಮತ್ತು ಗೋಹೀನರು ವಾಸಿಸುತ್ತಿರುವ ಕಾಲೋನಿಯಲ್ಲಿ ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ ಜನಗಳೇ ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿದ್ದಾರೆ, ಹಲವಾರು ಹೋರಾಟದಿಂದ ಕರ್ನಾಟಕ ಸರ್ಕಾರವು ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಪರಿಣಾಮವಾಗಿ ಪ್ರತಿಯೊಬ್ಬರು ಸಹ ಶಿಕ್ಷಣವನ್ನು ಕಲಿಯುವ ಅವಕಾಶ ನೀಡಿದೆ ಆದರೆ ಕೆಲವೊಂದು ಶಾಲೆಗಳಲ್ಲಿ ಶಿಕ್ಷಕರ ಅಥವಾ ಮುಖ್ಯ ಗುರುಗಳ ಅಲಭ್ಯದಿಂದ ಅಥವಾ ಇಂತಹ ಕೃತ್ಯಗಳಿಂದ ಮಕ್ಕಳು ಸರಿಯಾಗಿ ಶಿಕ್ಷಣವನ್ನು ಪಡೆಯುತ್ತಿಲ್ಲ ಅವರಿಗೆ ಅಕ್ಷರ ಓದಲು ಅಥವಾ ಬರೆಯಲು ಸರಿಯಾಗಿ ಬರುತ್ತಿಲ್ಲ ಎಂಬುದು ವಿಪರ್ಯಾಸವಾಗಿದೆ.
ನಿರ್ಲಕ್ಷಿತ ಸಮುದಾಯದ ಮಕ್ಕಳೇ ಅಧಿಕ ಸಂಖ್ಯೆಯಲ್ಲಿ ಇರುವ ಈ ಶಾಲೆಯು ಇಲಾಖೆಯ ನಿರ್ಲಕ್ಷ ದಿಂದ ಮುಚ್ಚುವ ಹಂತಕ್ಕೆ ತಲುಪಿದೆ. ಇದೊಂದು ಶಿಕ್ಷಕ ವೃತ್ತಿಗೆ ಮಾಡುತ್ತಿರುವ ಅವಮಾನವಾಗಿದೆ.
ರಾಯಚೂರು ಶಿಕ್ಷಣ ಇಲಾಖೆಗೆ ಮಕ್ಕಳ ಭವಿಷ್ಯ ಹಾಳಾದರು ಚಿಂತೆಯಿಲ್ಲ.
ಮಧ್ಯ ಸೇವನೆಯಿಂದ ಸರಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಆದಾಯ ಬರುತ್ತಿರುವುದಕ್ಕೆನೋ ಸರಕಾರ ಇಂತಹ ಶಿಕ್ಷಕರ ಮೇಲೆ ಕ್ರಮಕೈಗೊಳ್ಳಲು ಹಿಂದೆಟು ಹಾಕುತ್ತಿದೆ.
ಮಧ್ಯ ಸೇವಿಸಿ ಶಾಲಾ ಆವರಣದಲ್ಲೇ ಮಲಗಿದ ಮುಖ್ಯಯೊಪಾಧ್ಯಾಯರನ್ನು ಸೇವೆಯಿಂದ ಅಮಾನತ್ತು ಮಾಡಿ ಉತ್ತಮ ಶಿಕ್ಷಕರನ್ನು ನೇಮಿಸಿ ಮಕ್ಕಳ ಸ್ನೇಹಿ ವಾತಾವರಣ ಅಲ್ಲಿನ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.