Rishi Sunak wife – Is Rishi Sunak related to Narayana Murthy?

ನಮ್ಮ ಭಾರತ ದೇಶದ ರಿಷಿ ಸುನಾಕ್ ಅವರು ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಒಂದು ಕಾಲದಲ್ಲಿ ಭಾರತವನ್ನು ಆಳುತ್ತಿದ್ದ ಬ್ರಿಟನ್ ಈಗ ಭಾರತದ ರಿಷಿ ಸುನಾಕ್ ಬ್ರಿಟನ್ ದೇಶವನ್ನು ಆಳುತ್ತಿದ್ದಾರೆ ಅಂದರೆ ಇದು ನಮ್ಮ ದೇಶ ಖುಷಿ ಪಡುವ ಸಂಗತಿ. ಬ್ರಿಟನ್ ನೂತನ ಪ್ರಧಾನಿಯಾಗಿ ಆಯ್ಕೆಯಾದ ರಿಷಿ ಸುನಾಕ್ ಅವರ ಬಗ್ಗೆ ತಿಳಿಯ ಬೇಕಾದ ಪ್ರಮುಖ ಸಂಗತಿಯನ್ನು ನಾವು ನಿಮ್ಮ ಮುಂದೆ ತರುತ್ತಿದ್ದೇವೆ.

ಬ್ರಿಟನ್ ದೇಶದ ಮುಂದಿನ ಪ್ರಧಾನಿಯಾಗಿ ನಮ್ಮ ಭಾರತ ದೇಶದ ಮೂಲ ನಿವಾಸಿ ರಿಷಿ ಸುನಾಕ್ ಅವರು ಆಯ್ಕೆಯಾಗಿದ್ದಾರೆ. ಭಾರತದ ಮೊಟ್ಟ ಮೊದಲ ಯುಕೆಯ ಪ್ರಧಾನಿಯಾಗಿ ಹುದ್ದೆಯನ್ನು ಅಲಂಕರಿಸಿದ ಭಾರತದ ಪ್ರಥಮ ಪ್ರಜೆ ಇವರಾಗಿದ್ದಾರೆ. ಹಾಗಾದರೆ ನಿಮ್ಮಲ್ಲಿ ರಿಷಿ ಸುನಾಕ್ ಬಗ್ಗೆ ಕೆಲವೊಂದು ಪ್ರಶ್ನೆಗಳು ಮೂಡಬಹುದು ಅವಕೆಲ್ಲ ಉತ್ತರಗಳನ್ನು ನಾವು ಈ ಕೆಳಗಿನಂತೆ ಉತ್ತರಿಸುತ್ತೇವೆ.

ರಿಷಿ ಸುನಾಕ್ ಯಾರು ? ಭಾರತದ ಮೂಲದವರಾದರೆ ಅವರ ಹಿನ್ನೆಲೆ ಏನು ?

ಹೌದು ನಿಮಗೆ ಈಗ ರಿಷಿ ಸುನಾಕ್ ಯಾರು ? ಭಾರತದ ಮೂಲದವರಾದರೆ ಅವರ ಹಿನ್ನೆಲೆ ಏನು ಎಂಬ ಪ್ರಶ್ನೆಗಳು ಮೂಡುವುದು ಸಹಜ. 42 ವರ್ಷದ ಈ ರಿಷಿ ಸುನಾಕ್ ಸುನಾಕ್ ಅವರು ಭಾರತ ಮತ್ತು ಪೂರ್ವ ಆಫ್ರಿಕಾದಿಂದ ವಲಸೆ ಬಂದಂತ ಸಿರಿವಂತ ಅಥವಾ ಶ್ರೀಮಂತ ವ್ಯಕ್ತಿ. ಇವರು ಭಾರತ ದೇಶದ ಧರ್ಮಗಳಲ್ಲಿ ಒಂದಾದ ಹಿಂದೂ ವಂಶಸ್ಥರಾಗಿದ್ದಾರೆ. ಹಾಗೂ ಪ್ರಮುಖ ವಿಚಾರ ಏನೆಂದರೆ ಭಾರತದ ಇನ್ಫೋಸಿಸ್ ಸಂಸ್ಥೆ ಸ್ಥಾಪಕರಾದ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿಯ ಮುದ್ದಿನ ಮಗಳಾದ ಪುತ್ರಿ ಅಕ್ಷತಾ ಮೂರ್ತಿಯನ್ನು ಪತಿಯಾಗಿದ್ದಾರೆ.

ರಿಷಿ ಸುನಾಕ್‌ ಅವರ ಕುಟುಂಬ :

ಸುನಾಕ್ ಅವರ ತಂದೆಯ ಹೆಸರು ಯಶವೀರ್ ಸುನಾಕ್ ಅವರು ಭಾರತ ರಾಷ್ಟ್ರೀಯ ಆರೋಗ್ಯ ಸೇವೆಯ ಸಾಮಾನ್ಯ ವೈದ್ಯರಾಗಿದ್ದವರು. ರಿಷಿ ಸುನಾಕ್ ಇವರ ತಾಯಿಯ ಹೆಸರು ಉಷಾ ಸುನಾಕ್ ಇವರು ಸಹ ರಾಸಾಯನ ಶಾಸ್ತ್ರಜ್ಞರ ಅಂಗಡಿಯನ್ನು ಬೆಳೆಸುತ್ತಿದ್ದರು. ಸುನಾಕ್ ಅವರು ಹಿಂದೆ ಸಂದರ್ಶನ ಒಂದರಲ್ಲಿ ಈ ರೀತಿಯಾಗಿ ಹೇಳಿದ್ದರು ಅದೇನೆಂದರೆ ತಂದೆ ಹಾಗೂ ತಾಯಿ ಸ್ಥಳೀಯ ಸಮುದಾಯಗಳಿಗೆ ಸೇವೆಯನ್ನ ಸಲ್ಲಿಸುವುದನ್ನು ನೋಡುತ್ತಾ ಬೆಳದಿದ್ದೆ. ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವುದು ನನ್ನ ಅದೃಷ್ಟವಾಗಿದ್ದೆ ಎಂದು ತಿಳಿಸಿದ್ದಾರೆ.

ಸುನಾಕ್ ಅವರ ವೈವಾಹಿಕ ಜೀವನ:

ರಿಷಿ ಸುನಾಕ್ ಅವರು ಕ್ಯಾಲಿಫೋರ್ನಿಯಾದಲ್ಲಿ ಅಧ್ಯಯನ ಮಾಡುತ್ತಿದ್ದ ಸಮಯದಲ್ಲಿ ಅಕ್ಷತಾ ಮೂರ್ತಿಯವರನ್ನು ಭೇಟಿಯಾಗಿದ್ದರು ಇವರ ನಡುವೆ ಸ್ನೇಹ ಹಾಗೂ ಪ್ರೀತಿ ಉಂಟಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ರಿಷಿ ಸುನಾಕ್ ಹಾಗೂ ಅಕ್ಷತಾ ಮೂರ್ತಿಯವರಿಗೆ ಇದೀಗ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ ಅವರ ಹೆಸರು ಕೃಷ್ಣ ಹಾಗೂ ಅನುಷ್ಕಾ.

ಬ್ರಿಟನ್ ಪ್ರಧಾನಿಯಾಗಿ ನೇಮಕಗೊಂಡ ಹಿನ್ನೆಲೆ ರಿಷಿ ಸುನಾಕ್ ಅವರು ಬ್ರಿಟನ್ ದೇಶದ ಕುರಿತು ತಮ್ಮ ಮೊದಲ ಭಾಷಣವನ್ನು ಮಾಡಿದ್ದಾರೆ ಅದೇನೆಂದರೆ, ಇದೀಗ ನಮ್ಮ ದೇಶವು ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಕಾರಣ ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ದೇಶದ ಮೇಲೆ ಸಾರಿದ ಯುದ್ಧದ ಪರಿಣಾಮದಿಂದ ಈ ಸ್ಥಿತಿ ಬ್ರಿಟನ್ ದೇಶಕ್ಕೆ ಬಂದಿದೆ.

ಈ ಹಿಂದೆ ಬ್ರಿಟನ್ ಪ್ರಧಾನಿಯಾದ ವೀಜ್ ಟ್ರಸ್ ಅವರು ದೇಶದ ಆರ್ಥಿಕ ಗುರಿಗಳಿಗಾಗಿ ಹಲವಾರು ಕೆಲಸಗಳನ್ನು ಕೈಗೊಂಡಿದ್ದಾರೆ ನಾನು ಅವರ ಕೆಲಸಗಳಿಗೆ ಅಥವಾ ಅವರ ನಿರ್ಧಾರಗಳಿಗೆ ಒಪ್ಪಿಕೊಳ್ಳುತ್ತೇನೆ. ಅವರು ಮಾಡಿರುವ ಕೆಲವು ತಪ್ಪುಗಳನ್ನು ಈಗ ಸರಿಪಡಿಸೋಣ.

ಇದೀಗ ಅವರು ಮಾಡಿರುವ ಎಲ್ಲಾ ತಪ್ಪುಗಳನ್ನು ನಾನು ಸರಿಪಡಿಸುತ್ತೇನೆ ಕೇವಲ ನಾನು ಮಾತಿನಿಂದ ಮಾತ್ರವಲ್ಲದೆ ಕೆಲಸವನ್ನು ಮಾಡಿ ತೋರಿಸುತ್ತೇನೆ ಎಂದು ರಿಷಿ ಸುನಾಕ್ ಅವರು ತಿಳಿಸಿದ್ದಾರೆ.

Join Now
Spread the love