SSLR Karnataka Licensed Surveyor Recruitment 2023; Apply Online For 2000 Posts
ಭೂಮಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಿಂದ ಬೃಹತ್ ನೇಮಕಾತಿ 2023. ಇಲಾಖೆಯಲ್ಲಿ ಖಾಲಿ ಇರುವ ಭೂಮಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ಸಂಬಂಧಿಸಿದ ವಯೋಮಿತಿ ವಿವರಣೆ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ. ಅಭ್ಯರ್ಥಿಗಳು ಪ್ರತಿದಿನ ಸರ್ಕಾರಿ ಅಥವಾ ಖಾಸಗಿ ಉದ್ಯೋಗದ ಮಾಹಿತಿಯನ್ನು ಪಡೆಯಲು www Karnatakanewshunter.com ವೆಬ್ಸೈಟ್ ಪರಿಶೀಲಿಸಿ
ನೇಮಕಾತಿ ಇಲಾಖೆಯ ಹೆಸರು :
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ
SSLR Karnataka Licensed Surveyor Recruitment 2023
ಹುದ್ದೆಗಳ ಹೆಸರು :
ಪರವಾನಿಗೆ ಭೂಮಾಪಕರು
ಒಟ್ಟು ಹುದ್ದೆಗಳ ಸಂಖ್ಯೆ :
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ 2000 ಪರವಾನಿಗೆ ಭೂಮಾಪಕರು ಹುದ್ದೆಗಳಿಗೆ ಇಲಾಖೆಯು ಅರ್ಜಿ ಆಹ್ವಾನಿಸಲಾಗಿದೆ.
ವಯೋಮಿತಿ :
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ನೇಮಕಾತಿ 2023ರ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ಗರಿಷ್ಠ ವಯೋಮಿತಿ 65 ವರ್ಷ ನಿಗದಿಪಡಿಸಲಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ:
• ಎಸ್‌ಎಸ್‌ಎಲ್‌ಆರ್ ಕರ್ನಾಟಕ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಸಿವಿಲ್, ಐಟಿಐನಲ್ಲಿ ಪಿಯುಸಿ, ಡಿಪ್ಲೊಮಾ , ಬಿಇ ಅಥವಾ ಬಿ.ಟೆಕ್ ಪೂರ್ಣಗೊಳಿಸಿರಬೇಕು.
• ಪಿಯುಸಿ ಸೈನ್ಸ್ ನಲ್ಲಿ ಗಣಿತ ವಿಷಯದಲ್ಲಿ 60% ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಅಥವಾ
• ಬಿಇ (ಸಿವಿಲ್)/ ಬಿಟೆಕ್ (ಸಿವಿಲ್)/ ಸಿವಿಲ್ ಇಂಜಿನಿಯರಿಂಗ್ ಡಿಪ್ಲೋಮಾದಲ್ಲಿ ಉತ್ತೀರ್ಣ ಅಥವಾ
• ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ “ಲ್ಯಾಂಡ್ ಅಂಡ್ ಸಿಟಿ ಸರ್ವೆ’ಯಲ್ಲಿ ಪದವಿ ಪೂರ್ವ ಡಿಪ್ಲೋಮಾದಲ್ಲಿ ಉತ್ತೀರ್ಣ, ಅಥವಾ
• ಕರ್ನಾಟಕ ಸರ್ಕಾರದ ಉದ್ಯೋಗ ಹಾಗೂ ತರಬೇತಿ ಇಲಾಖೆ ನಡೆಸುವ ಐಟಿಐ ಇನ್ ಸರ್ವೇ ಟ್ರೇಡ್ ನಲ್ಲಿ ಉತ್ತೀರ್ಣರಾಗಿರಬೇಕು. ಅಥವಾ
• ರಾಜ್ಯ ಸರ್ಕಾರದ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಅಥವಾ ಸರ್ವೇ ಆಫ್ ಇಂಡಿಯಾ ಅಥವಾ ಸರ್ಕಾರಿ ವಲಯಕ್ಕೆ ಒಳಪಟ್ಟ ಸಂಸ್ಥೆಗಳಲ್ಲಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕನಿಷ್ಠ 10 ವರ್ಷಗಳ ಭೂಮಾಪನ ಸೇವೆ ಸಲ್ಲಿಸಿ ನಿವೃತ್ತರಾದವರು ಸಹ ಪರವಾನಗಿ ಪಡೆಯಲು ಅರ್ಹರಾಗಿರುತ್ತಾರೆ. ( ಶೈಕ್ಷಣಿಕ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇಲಾಖೆಯ ಅಧಿಸೂಚನೆಯನ್ನು ಗಮನಿಸಿ )
ಭೂಮಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಜಿಲ್ಲಾವಾರು ವಿವರಣೆ
1) ಉಡುಪಿ ಜಿಲ್ಲೆಯಲ್ಲಿ 86 ಹುದ್ದೆಗಳು
2) ಉತ್ತರ ಕನ್ನಡ ಜಿಲ್ಲೆಯಲ್ಲಿ 75 ಹುದ್ದೆಗಳು
3) ಕೊಡಗು ಜಿಲ್ಲೆಯಲ್ಲಿ 25 ಹುದ್ದೆಗಳು
4) ಕೋಲಾರ ಜಿಲ್ಲೆಯಲ್ಲಿ 53 ಹುದ್ದೆಗಳು
5) ಗದಗ ಜಿಲ್ಲೆಯಲ್ಲಿ 54 ಹುದ್ದೆಗಳು
6) ಚಿಕ್ಕಮಗಳೂರು ಜಿಲ್ಲೆಯಲ್ಲಿ 83 ಹುದ್ದೆಗಳು
7) ಚಿತ್ರದುರ್ಗ ಜಿಲ್ಲೆಯಲ್ಲಿ 73 ಹುದ್ದೆಗಳು
8) ಚಾಮರಾಜನಗರ ಜಿಲ್ಲೆಯಲ್ಲಿ 35 ಹುದ್ದೆಗಳು
9) ತುಮಕೂರು ಜಿಲ್ಲೆಯಲ್ಲಿ 110 ಹುದ್ದೆಗಳು
10) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 36 ಹುದ್ದೆಗಳು
11) ದಾವಣಗೆರೆ ಜಿಲ್ಲೆಯಲ್ಲಿ 95 ಹುದ್ದೆಗಳು
12) ಧಾರವಾಡ ಜಿಲ್ಲೆಯಲ್ಲಿ 92 ಹುದ್ದೆಗಳು
13) ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 66 ಹುದ್ದೆಗಳು
14) ಬೆಂಗಳೂರು ಜಿಲ್ಲೆಯಲ್ಲಿ 125 ಹುದ್ದೆಗಳು
15) ಬಿಜಾಪುರ ಜಿಲ್ಲೆಯಲ್ಲಿ 32 ಹುದ್ದೆಗಳು
16) ಬೆಳಗಾವಿ ಜಿಲ್ಲೆಯಲ್ಲಿ 85 ಹುದ್ದೆಗಳು
17) ಬಳ್ಳಾರಿ ಜಿಲ್ಲೆಯಲ್ಲಿ 55 ಹುದ್ದೆಗಳು
18) ವಿಜಯನಗರ ಜಿಲ್ಲೆಯಲ್ಲಿ 47 ಹುದ್ದೆಗಳು
19) ಬಾಗಲಕೋಟೆ ಜಿಲ್ಲೆಯಲ್ಲಿ 47 ಹುದ್ದೆಗಳು
20) ಬೀದರ್ ಜಿಲ್ಲೆಯಲ್ಲಿ 35 ಹುದ್ದೆಗಳು
21) ಮಂಡ್ಯ ಜಿಲ್ಲೆಯಲ್ಲಿ 71 ಹುದ್ದೆಗಳು
22) ಮೈಸೂರು ಜಿಲ್ಲೆಯಲ್ಲಿ 40 ಹುದ್ದೆಗಳು
23) ಯಾದಗಿರಿ ಜಿಲ್ಲೆಯಲ್ಲಿ 20 ಹುದ್ದೆಗಳು
24) ರಾಮನಗರ ಜಿಲ್ಲೆಯಲ್ಲಿ 100 ಹುದ್ದೆಗಳು
25) ರಾಯಚೂರು ಜಿಲ್ಲೆಯಲ್ಲಿ 40 ಹುದ್ದೆಗಳು
26) ಶಿವಮೊಗ್ಗ ಜಿಲ್ಲೆಯಲ್ಲಿ 125 ಹುದ್ದೆಗಳು
27) ಹಾವೇರಿ ಜಿಲ್ಲೆಯಲ್ಲಿ 152 ಹುದ್ದೆಗಳು
28) ಹಾಸನ ಜಿಲ್ಲೆಯಲ್ಲಿ 60 ಹುದ್ದೆಗಳು
29) ಕೊಪ್ಪಳ ಜಿಲ್ಲೆಯಲ್ಲಿ 28 ಹುದ್ದೆಗಳು
30) ಕಲಬುರ್ಗಿ ಜಿಲ್ಲೆಯಲ್ಲಿ 10 ಹುದ್ದೆಗಳು
31) ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 45 ಹುದ್ದೆಗಳು
ಆಯ್ಕೆ ವಿಧಾನ :
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದಂತ ಕನಿಷ್ಠ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕದ ವಿವರಣೆ :
ಇಲಾಖೆಯ ನಿಯಮಗಳು ಅನುಸಾರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಒಂದು ಸಾವಿರ ರೂಪಾಯಿ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
ಇತರೆ ಶುಲ್ಕದ ವಿವರಗಳು :
*ತರಬೇತಿ ಶುಲ್ಕ : ರೂಪಾಯಿ 5,000 ಡಿಮ್ಯಾಂಡ್ ಡ್ರಾಪ್ ಮೂಲಕ ಸಲ್ಲಿಸಬೇಕು.
*ಪರವಾನಿಗೆ ಶುಲ್ಕ: ರೂಪಾಯಿ 3000
ಅರ್ಜಿ ಸಲ್ಲಿಸುವ ವಿಧಾನ :
ಮೊದಲನೆಯದಾಗಿ ಎಸ್‌ಎಸ್‌ಎಲ್‌ಆರ್ ಕರ್ನಾಟಕ ನೇಮಕಾತಿ ಅಧಿಸೂಚನೆ 2023 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).
ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.
ಎಸ್‌ಎಸ್‌ಎಲ್‌ಆರ್ ಕರ್ನಾಟಕ ಪರವಾನಗಿ ಪಡೆದ ಸರ್ವೇಯರ್‌ಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕ್ಲಿಕ್ ಮಾಡಿ – ಕೆಳಗೆ ನೀಡಲಾಗಿದೆ ಲಿಂಕ್.
ಎಸ್‌ಎಸ್‌ಎಲ್‌ಆರ್ ಕರ್ನಾಟಕ ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)
SSLR ಕರ್ನಾಟಕ ನೇಮಕಾತಿ 2023 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಕ್ಯಾಪ್ಚರ್ ಮಾಡಿ.
SSLR Karnataka Licensed Surveyor Recruitment: Important Dates
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 02-ಫೆಬ್ರುವರಿ-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 20-ಫೆಬ್ರುವರಿ-2023
Apply Link : Click
Notification Link :Click
ಮುಖ್ಯ ಸೂಚನೆ :
ಸರ್ವೇ ಸಪ್ಲಿಮೆಂಟ್ ಅಂಡ್ ಲ್ಯಾಂಡ್ ರೆಕಾರ್ಡ್ಸ್ ಇಲಾಖೆಯಲ್ಲಿ ಖಾಲಿ ಇರುವ ಎರಡು ಸಾವಿರ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆ ಹೊರಟಿರುವ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿ ಅರ್ಥೈಸಿಕೊಂಡು ಹುದ್ದೆಗಳಿಗೆ ಅರ್ಜಿಯನ್ನ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಪಡೆಯಲು ಇಲಾಖೆಯ ಅಧಿಕೃತ ಅಥವಾ ನಾವು ನೀಡಿರುವ ಅಧಿಸೂಚನೆಯನ್ನು ಸ್ಪಷ್ಟವಾಗಿ ಗಮನಿಸಿ.