Station master in railway : 590 Post in Railway Recruitment Cell, Apply 590+ Goods Guard & Other Vacancies

RAILWAY RECRUITMENTCELL, CENTRAL RAILWAY Recruitment 2022

ಭಾರತೀಯ ರೈಲ್ವೆ ಇಲಾಖೆ ನೇಮಕಾತಿ 2022. ಭಾರತೀಯ ರೈಲ್ವೆ ಇಲಾಖೆಯು general departmental competitive examination ಮೂಲಕ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ಈ ಕುರಿತು ಮಾಹಿತಿಯನ್ನು ಇಲಾಖೆಯು ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಅಧಿಸೂಚನೆ ಪ್ರಕಟಿಸಿದೆ. ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ / ಗೂಡ್ಸ್ ಗಾಡ್ / ಅಕೌಂಟ್ಸ್ ಕ್ಲರ್ಕ್ ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಹುದ್ದೆಗಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ರೈಲ್ವೆ ಸೆಲ್ ನೇಮಕಾತಿ ಅಥವಾ ಕೇಂದ್ರ ರೈಲ್ವೆ ಇಲಾಖೆಯ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ವಿವರಣೆ :

ನೇಮಕಾತಿ ಇಲಾಖೆಯ ಹೆಸರು :
ರೈಲ್ವೆ ಸೆಲ್ ನೇಮಕಾತಿ ಅಥವಾ ಕೇಂದ್ರ ರೈಲ್ವೆ ಇಲಾಖೆ

ಹುದ್ದೆಗಳ ಹೆಸರು :
• ಸ್ಟೆನೋಗ್ರಾಫರ್ (ಇಂಗ್ಲಿಷ್)
• ಸೀನಿಯರ್ ಕಮ್ಯುನಿಕೇಷನ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್
• ಗೂಡ್ಸ್ ಗಾರ್ಡ್
• ಸ್ಟೇಷನ್ ಮಾಸ್ಟರ್
• ಜೂನಿಯರ್ ಖಾತೆ ಅಸಿಸ್ಟೆಂಟ್
• ಜೂನಿಯರ್ ಕಮ್ಯುನಿಕೇಶನ್ ಟಿಕೆಟ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್
• ಅಕೌಂಟ್ಸ್ ಕ್ಲರ್ಕ್

ಒಟ್ಟು ಹುದ್ದೆಗಳ ಸಂಖ್ಯೆ :
• ಸ್ಟೆನೋಗ್ರಾಫರ್ (ಇಂಗ್ಲಿಷ್) : ಒಟ್ಟು 08 ಹುದ್ದೆಗಳು
• ಸೀನಿಯರ್ ಕಮ್ಯುನಿಕೇಷನ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್ : 154 ಹುದ್ದೆಗಳಿಗೆ
• ಗೂಡ್ಸ್ ಗಾರ್ಡ್ : 46 ಹುದ್ದೆಗಳು
• ಸ್ಟೇಷನ್ ಮಾಸ್ಟರ್ : ಒಟ್ಟು 75 ಹುದ್ದೆಗಳು ಖಾಲಿ ಇವೆ
• ಜೂನಿಯರ್ ಖಾತೆ ಅಸಿಸ್ಟೆಂಟ್ : ಒಟ್ಟು 150 ಹುದ್ದೆಗಳು ಖಾಲಿ ಇವೆ
• ಜೂನಿಯರ್ ಕಮ್ಯುನಿಕೇಶನ್ ಟಿಕೆಟ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್ : 126 ಹುದ್ದೆಗಳು ಖಾಲಿ ಇವೆ
• ಅಕೌಂಟ್ಸ್ ಕ್ಲರ್ಕ್ : 37 ಹುದ್ದೆಗಳಿಗೆ

ರೈಲ್ವೆ ಸೆಲ್ ನೇಮಕಾತಿ ಅಥವಾ ಕೇಂದ್ರ ರೈಲ್ವೆ ಇಲಾಖೆ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆ ವಿವರಣೆ :

rrb ntpc station master qualification :

ಶೈಕ್ಷಣಿಕ ವಿದ್ಯಾರ್ಹತೆ :

1) ಸ್ಟೆನೋಗ್ರಾಫರ್ (ಇಂಗ್ಲಿಷ್) :
ಮಾನ್ಯತೆ ಪಡೆದ ಬೋರ್ಡ್ / ವಿಶ್ವವಿದ್ಯಾಲಯದಿಂದ 2nd Puc ಅಥವಾ ಅದರ ಸಮಾನ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. 50 ನಿಮಿಷಗಳ ಪ್ರತಿಲೇಖನ ಸಮಯದೊಂದಿಗೆ 10 ನಿಮಿಷಗಳ ಅವಧಿಗೆ ಪ್ರತಿ ನಿಮಿಷಕ್ಕೆ 80 ಪದಗಳ ಶಾರ್ಟ್‌ಹ್ಯಾಂಡ್ ವೇಗ.

Join Now

2) ಸೀನಿಯರ್ ಕಮ್ಯುನಿಕೇಷನ್ ಕ್ಲರ್ಕ್ ಕಮ್ ಟಿಕೆಟ್ ಕ್ಲರ್ಕ್ :
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮನೆತ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು.

3) ಗೂಡ್ಸ್ ಗಾರ್ಡ್ :
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮನೆತ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು.

4) ಸ್ಟೇಷನ್ ಮಾಸ್ಟರ್ :
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮನೆತ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪದವಿಯನ್ನು ಪಡೆದಿರಬೇಕು.

5) ಜೂನಿಯರ್ ಖಾತೆ ಅಸಿಸ್ಟೆಂಟ್ :
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ. I ಮತ್ತು II ವಿಭಾಗದ ಗೌರವ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

6) ಅಕೌಂಟ್ಸ್ ಕ್ಲರ್ಕ್ :
ಈ ಹುದ್ದೆಗೆ ಅರ್ಜಿಸಲು ಬಯಸುವ ಅಭ್ಯರ್ಥಿಗಳು ಮನೆದೇ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.SC / ST / ಬೆಂಚ್‌ಮಾರ್ಕ್ ಅಭ್ಯರ್ಥಿಗಳಿಗೆ just pass ಹಾಗಿದ್ದರೆ ಸಾಕು

ರೈಲ್ವೆ ಸೆಲ್ ನೇಮಕಾತಿ ಅಥವಾ ಕೇಂದ್ರ ರೈಲ್ವೆ ಇಲಾಖೆಯ ನೇಮಕಾತಿ 2022. ಹುದ್ದೆಗಳಿಗೆ ಸಂಬಂಧಿಸಿದ ವಯೋಮಿತಿ ವಿವರಣೆ :

ವಯಮಿತಿ :
ಜನರಲ್ ಅರ್ಹತಾ ಅಭ್ಯರ್ಥಿಗಳಿಗೆ : 42 ವರ್ಷಗಳು
ಓಬಿಸಿ ವರ್ಗದವರಿಗೆ : 45 ವರ್ಷಗಳು
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ : 47 ವರ್ಷಗಳು.

ಅರ್ಜಿಯ ಶುಲ್ಕ:
ರೈಲ್ವೆ ಸೆಲ್ ನೇಮಕಾತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಇಲಾಖೆಯು ಸಂಪೂರ್ಣವಾಗಿ ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಿದೆ.

ವೇತನ ಶ್ರೇಣಿ :
ಇಲಾಖೆಯ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳಿಗೆ ಅನುಗುಣವಾಗಿ 18,000 ದಿಂದ 60,000/-ವೇತನ ನಿಗದಿಪಡಿಸಲಾಗಿದೆ.

ರೈಲ್ವೆ ಸೆಲ್ ನೇಮಕಾತಿ ಅಥವಾ ಕೇಂದ್ರ ರೈಲ್ವೆ ಇಲಾಖೆಯ ನೇಮಕಾತಿ 2022. ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ವಿಧಾನದ ವಿವರಣೆ :

ಆಯ್ಕೆ ವಿಧಾನ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಗಳ ನಿಯಮಗಳ ಅನುಸಾರ ಕಂಪ್ಯೂಟರ್ ಆಧಾರಿತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.

Central Railway Recruitment 2022 official website

ಅರ್ಜಿ ಸಲ್ಲಿಸುವ ವಿಧಾನ :
ಮೊದಲನೆಯದಾಗಿ RAILWAY RECRUITMENT CELL CENTRAL RAILWAY ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಳ್ಳಿ (ನೇಮಕಾತಿ ಲಿಂಕ್ ಅನ್ನು ಕೆಳಗೆ ನೀಡಲಾಗಿದೆ).

ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಿ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

RAILWAY RECRUITMENT CELL CENTRAL RAILWAY ಆನ್‌ಲೈನ್‌ನಲ್ಲಿ ಅನ್ವಯಿಸು – ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.

RRCC ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ನವೀಕರಿಸಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್ (ಅನ್ವಯಿಸಿದರೆ) ಜೊತೆಗೆ ಅಗತ್ಯ ಪ್ರಮಾಣಪತ್ರಗಳು/ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.
ನಿಮ್ಮ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ. (ಅನ್ವಯಿಸಿದರೆ ಮಾತ್ರ)

RRCC ನೇಮಕಾತಿ 2022 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ. ಹೆಚ್ಚಿನ ಉಲ್ಲೇಖಕ್ಕಾಗಿ ಅರ್ಜಿ ಸಂಖ್ಯೆ ಅಥವಾ ವಿನಂತಿ ಸಂಖ್ಯೆಯನ್ನು ಅತ್ಯಂತ ಮುಖ್ಯವಾಗಿ ಕ್ಯಾಪ್ಚರ್ ಮಾಡಿ

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 28-10-2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 28-11-2022

Apply Link : Click

Notification Link : Click

ಮುಖ್ಯ ಸೂಚನೆ :
ರೈಲ್ವೇ ನೇಮಕಾತಿ ಸೆಲ್ ಸೆಂಟ್ರಲ್ ರೈಲ್ವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿಕೊಂಡು ತದನಂತರ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ.