Indian Post Office Recruitment 2022

ಭಾರತೀಯ ಅಂಚೆ ಇಲಾಖೆ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಎಂಟನೇ ತರಗತಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿಯನ್ನ ಆಹ್ವಾನಿಸಲಾಗಿದೆ ಈ ಹುದ್ದೆಗಳಿಗೆ ಕರ್ನಾಟಕದ ಅಭ್ಯರ್ಥಿಗಳಾದ ಪುರುಷ ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ / ವೇತನ ಶ್ರೇಣಿ ‌/ ಆಯ್ಕೆ ವಿಧಾನ‌ / ಉದ್ಯೋಗದ ಸ್ಥಳ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಭಾರತೀಯ ಅಂಚೆ ಇಲಾಖೆ ನೇಮಕಾತಿ 2022 

ನೇಮಕಾತಿ ಇಲಾಖೆ ಹೆಸರು :
ಭಾರತೀಯ ಅಂಚೆ ಇಲಾಖೆ ನೇಮಕಾತಿ

ಹುದ್ದೆಗಳ ಹೆಸರು :
• ನುರಿತ ಕುಶಲಕರ್ಮಿಗಳು

ಒಟ್ಟು ಹುದ್ದೆಗಳ ಸಂಖ್ಯೆ :
ಭಾರತೀಯ ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 12 ಹುದ್ದೆಗಳಿಗೆ ಭಾರತಾದ್ಯಂತ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತಿ ಹಾಗೂ ಅರ್ಹತೆ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಭಾರತೀಯ ಅಂಚೆ ಇಲಾಖೆ ಹುದ್ದೆಗಳಿಗೆ ನಿಗದಿಪಡಿಸಿದ ಶೈಕ್ಷಣಿಕ ವಿದ್ಯಾರ್ಹತೆ

ವಿದ್ಯಾರ್ಹತೆ :
ಭಾರತೀಯ ಅಂಚೆ ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಯಾವುದೇ ಮಾಹಿತಿ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 8ನೇ ತರಗತಿಯಲ್ಲಿ ತೇರ್ಗಡೆ ಹೊಂದಿರಬೇಕು.

ವೇತನ ಶ್ರೇಣಿ :
ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ 19900 ಇಂದ 63,200 ವೇತನ ಇರುತ್ತದೆ.

ವಯಸ್ಸಿನ ಮಿತಿ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಇಲಾಖೆಯ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ 01 ಜುಲೈ 2022 ರಂತೆ ಕನಿಷ್ಠ 18 ವರ್ಷಗಳು ಗರಿಷ್ಠ 30 ವರ್ಷಗಳು ಪೂರೈಸಬೇಕು ಮೀಸಲಾತಿ ಅನುಗುಣವಾಗಿ ವಯಸ್ಸಿನಲ್ಲಿ ಸಡಿಲಿಕ್ಕೆ ಸಹ ನೀಡಲಾಗಿದೆ.

ವಯೋಮಿತಿಯಲ್ಲಿ ಸಡಿಲಿಕೆ :
• ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 05 ವರ್ಷಗಳು
• ಓಬಿಸಿ ವರ್ಗದ ಅಭ್ಯರ್ಥಿಗಳಿಗೆ 03 ವರ್ಷ

Join Now

ಹುದ್ದೆಗಳಿಗೆ ನಿಗದಿಪಡಿಸಿದ ಅರ್ಜಿಯ ಶುಲ್ಕದ ವಿವರಣೆ :

ಅರ್ಜಿ ಶುಲ್ಕ :
ಭಾರತೀಯ ಅಂಚೆ ಇಲಾಖೆ ಹುದ್ದೆಗಳಿಗೆ ಅರ್ಜಿ ಶುಲ್ಕ ಈ ರೀತಿಯಾಗಿದೆ.
• ಅರ್ಜಿ ಶುಲ್ಕ 100/-
• ಟ್ರೇಡ್ ಪರೀಕ್ಷೆಗೆ ಪರೀಕ್ಷಾ ಶುಲ್ಕ 400 ರೂಪಾಯಿ

ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಭಾರತೀಯ ಪೋಸ್ಟಲ್ ಆರ್ಡರ್ ಮೂಲಕ ಸಲ್ಲಿಸಬೇಕು

ಭಾರತೀಯ ಅಂಚೆ ಇಲಾಖೆಗಳ ಹುದ್ದೆಗಳ ಆಯ್ಕೆ ವಿಧಾನ :

ನೇಮಕಾತಿಯ ವಿಧಾನ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯು ವ್ಯಾಪಾರ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬೇಕು

ಅಂಚೆ ವಿಳಾಸ :
ಚೆನ್ನೈ ಸ್ಥಳ: ಹಿರಿಯ ವ್ಯವಸ್ಥಾಪಕ (JAG), ಮೇಲ್ ಮೋಟಾರ್ ಸೇವೆ, ನಂ. 37, ಗ್ರೀಮ್ಸ್ ರಸ್ತೆ, ಚೆನ್ನೈ – 600006, ತಮಿಳುನಾಡು

ಮಧುರೈ ಸ್ಥಳ: ಮ್ಯಾನೇಜರ್, ಮೇಲ್ ಮೋಟಾರ್ ಸರ್ವಿಸ್, CTO ಕಾಂಪೌಂಡ್, ತಲ್ಲಕುಲಂ. ಮಧುರೈ-625002, ತಮಿಳುನಾಡು

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 19 ಸಪ್ಟಂಬರ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 19 ಅಕ್ಟೋಬರ್ 2022

ಚೆನ್ನೈ ಈ ವಿಭಾಗಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 19 ಅಕ್ಟೋಬರ್ 2022.

ಮದುರೈ ಈ ಒಂದು ವಿಭಾಗಕ್ಕೆ ಅರ್ಜಿ ಸಚಿವ ಕೊನೆಯ ದಿನಾಂಕ 17 ಅಕ್ಟೋಬರ್ 2022 ಆಗಿದೆ

ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆ ಹಾಗೂ ಅರ್ಜಿ ನಮೂನೆಯನ್ನು ಕೆಳಗಡೆ ನೀಡಿರುತ್ತೇನೆ ಅಲ್ಲಿಂದ ಸಹ ನೀವು ಅರ್ಜಿ ನಮೂನೆಯನ್ನು ಮುದ್ರಣ ಮಾಡಿಕೊಳ್ಳಿ ತದನಂತರ ಬೇಕಾದ ದಾಖಲೆಯನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಿ.

ಸೂಚನೆ :
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಗಮನಿಸಿ ಸ್ಪಷ್ಟವಾಗಿ ಓದಿ ಅದನ್ನು ಅರ್ಥ ಮಾಡಿಕೊಂಡು ತದನಂತರದಲ್ಲಿ ಅರ್ಜಿಯನ್ನು ಸಲ್ಲಿಸಿ.

ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನ ನಿಮ್ಮ ಸ್ನೇಹಿತರ ವಾಟ್ಸಾಪ್ ಹಾಗೂ ಫೇಸ್ಬುಕ್ ಗ್ರೂಪ್ ಗಳ ಮೂಲಕ ಹಂಚಿಕೊಳ್ಳಿ.

ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ವಿಧಾನ :

ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಮುದ್ರಣ ಮಾಡಿಕೊಂಡು ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ.

ತದನಂತರದಲ್ಲಿ ಮೇಲ್ಗಡೆ ತಿಳಿಸಿರುವ ಅರ್ಜಿ ನಮೂನೆಯನ್ನು ಅಂಚೆ ವಿಳಾಸಕ್ಕೆ ಕಳುಹಿಸಿ.

ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆಯನ್ನು ಸಿದ್ಧವಾಗಿರಿಸಿಕೊಳ್ಳಿ.

ಉದ್ಯೋಗದ ಇತರ ಮಾಹಿತಿ :

• ಈ ಹುದ್ದೆಗಳು ಕೇಂದ್ರ ಸರ್ಕಾರದ ಉದ್ಯೋಗಗಳಾಗಿರುತ್ತವೆ
• ಈ ಹುದ್ದೆಗಳಿಗೆ ಭಾರತದ ಪ್ರತಿಯೊಬ್ಬ ಅಭ್ಯರ್ಥಿಗೂ ಸಹ ಅರ್ಜಿಯನ್ನು ಸಲ್ಲಿಸಬಹುದು
• ಕರ್ನಾಟಕದ ಅಭ್ಯರ್ಥಿಯು ಸಹ ಅರ್ಜಿಯನ್ನು ಸಲ್ಲಿಸಬಹುದು
• ಕೇಂದ್ರ ಸರ್ಕಾರದ ಉದ್ಯೋಗಗಳಾಗಿರುವ ಕಾರಣ ವೇತನ ಶ್ರೇಣಿಯು ಚೆನ್ನಾಗಿರುತ್ತದೆ ಆದ್ದರಿಂದ ಈ ಉದ್ಯೋಗದ ಅವಕಾಶವನ್ನು ಸದುಪಯೋಗ ಉಳಿಸಿಕೊಳ್ಳಿ.

ಕರ್ನಾಟಕ ನ್ಯೂಸ್ ಹಂಟರ್ ಅಂತರ್ಜಾಲ ಸ್ಥಾಪನೆಗೆ ಕಾರಣವಾದ ಅಂಶಗಳು :

• ಕರ್ನಾಟಕ ನ್ಯೂಸ್ ಹಂಟರ್ ಅಂತರ್ಜಾಲ ಉದ್ಯೋಗ ಮಾಹಿತಿ ಬಯಸುವ ಹಾಗೂ ಕೆಲಸಕ್ಕಾಗಿ ಅಥವಾ ಕೆಲಸದ ವಿವರಗಳನ್ನು ಪಡೆಯುವ ಅಭ್ಯರ್ಥಿಗಳಿಗೆ ಈ ಅಂತರಜಾಲ ಸಹಾಯಕವಾಗಿದೆ.
• ಈ ಅಂತರ್ಜಾಲ ಯಾವುದೇ ರೀತಿಯ ಕೆಟ್ಟ ಚಟುವಟಿಕೆಗಳಿಗೆ ಬಳಕೆಯಾಗುವುದಿಲ್ಲ
• ಉದ್ಯೋಗ ಬಯಸುವ ಅಥವಾ ಉದ್ಯೋಗ ಮಾಹಿತಿಯನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದು ಸಹಾಯಕವಾಗುತ್ತದೆ.

Spread the love