ಅರಣ್ಯ ಇಲಾಖೆ ನೇಮಕಾತಿ 2022 ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಫಾರೆಸ್ಟ್ ಗಾರ್ಡ್ ( ವಾನ್ ಡರೋಗ) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಈ ಹುದ್ದೆಗಳಿಗೆ 10ನೇ ತರಗತಿ ಪಾಸಾದ ಕರ್ನಾಟಕದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸಹ ಅರ್ಜಿಯನ್ನ ಸಲ್ಲಿಸಬಹುದು. ಈ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ / ವೇತನ ಶ್ರೇಣಿ / ಆಯ್ಕೆ ವಿಧಾನ / ಅರ್ಜಿ ಸಲ್ಲಿಸುವ ವಿಧಾನ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
ಅರಣ್ಯ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ವಿವರಣೆ :
ಹುದ್ದೆಗಳ ಹೆಸರು:
ಫಾರೆಸ್ಟ್ ಗಾರ್ಡ್ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ :
ಭಾರತೀಯ ಅರಣ್ಯ ಇಲಾಖೆಯಲ್ಲಿ ಒಟ್ಟು 701 ಹುದ್ದೆಗಳ ನೇಮಕಾತಿ ನಡೆಯುತ್ತಿದೆ.
ಮೀಸಲಾತಿ ಅನುಗುಣವಾಗಿ ಹುದ್ದೆಗಳ ವರ್ಗೀಕರಣ :
• ಯು ಆರ್ ವರ್ಗದವರಿಗೆ 288 ಹುದ್ದೆಗಳು
• ಓಬಿಸಿ ವರ್ಗದವರಿಗೆ 163 ಹುದ್ದೆಗಳು
• ಪರಿಶಿಷ್ಟ ಜಾತಿ ಅಭ್ಯರ್ಥಿಗಳಿಗೆ 160
• ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 20 ಹುದ್ದೆಗಳು
• ಈ ಡಬ್ಲ್ಯೂ ಎಸ್ ಅಭ್ಯರ್ಥಿಗಳಿಗೆ 70 ಹುದ್ದೆಗಳು ಖಾಲಿ ಇವೆ
ವೇತನ ಶ್ರೇಣಿ :
ಫಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 29,200 – 92,300/-ವೇತನ ಇರುತ್ತದೆ
ಭಾರತೀಯ ಅರಣ್ಯ ಇಲಾಖೆಯ ಹುದ್ದೆಗಳಿಗೆ ನಿಗದಿಪಡಿಸಿದ ವಯೋಮಿತಿಯ ವಿವರಣೆ :
ವಯೋಮಿತಿ :
• ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ
• ಓಬಿಸಿ ವರ್ಗದ ಅಭ್ಯರ್ಥಿಗಳಿಗೆ 18ರಿಂದ 43 ವರ್ಷ ನಿಗದಿಪಡಿಸಲಾಗಿದೆ
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ ಗರಿಷ್ಠ 45 ವರ್ಷ ನಿಗದಿಪಡಿಸಲಾಗಿದೆ
ಫಾರೆಸ್ಟ್ ಗಾರ್ಡ್ ಹುದ್ದೆಗಳಿಗೆ ನಿಗದಿಪಡಿಸಿದ ಶೈಕ್ಷಣಿಕ ವಿದ್ಯಾರ್ಹತೆ ವಿವರಣೆ :
ಶೈಕ್ಷಣಿಕ ವಿದ್ಯಾರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಹತ್ತನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೆರಗಡೆ ಹೊಂದಿರಬೇಕು
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಸಲ್ಲಿಸಬೇಕು
ಯಾವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು :
ಭಾರತದ ಪ್ರತಿಯೊಬ್ಬ ಅರ್ಹತೆ ಪಡೆದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಕರ್ನಾಟಕದ ಪುರುಷ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು.
ಉದ್ಯೋಗದ ಸ್ಥಳ :
ಈ ಹುದ್ದೆಗಳ ನೇಮಕಾತಿಯು ಉತ್ತರ ಪ್ರದೇಶದಲ್ಲಿ ಇರುತ್ತದೆ ಹಾಗೂ ಪರೀಕ್ಷಾ ಕೇಂದ್ರಗಳು ಸಹ ಉತ್ತರ ಪ್ರದೇಶದಲ್ಲಿರುತ್ತದೆ.
ಭಾರತೀಯ ಅರಣ್ಯ ಇಲಾಖೆಯ ಹುದ್ದೆಗೆ ನಿಗದಿಪಡಿಸಿದ ಅರ್ಜಿಯ ಶುಲ್ಕ :
ಅರ್ಜಿಯ ಶುಲ್ಕ :
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳು ಮತ್ತು ಮಹಿಳಾ ವರ್ಗದ ಅಭ್ಯರ್ಥಿಗಳಿಗೆ 25 ರೂಪಾಯಿ
ಸಾಮಾನ್ಯ / ಓಬಿಸಿ /ಯು ಆರ್ ಅಭ್ಯರ್ಥಿಗಳಿಗೆ 25 ರೂಪಾಯಿ ನಿಗದಿಪಡಿಸಲಾಗಿದೆ. ಈ ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ ಮೂಲಕ ಆನ್ಲೈನ್ ಮುಖಾಂತರ ಸಲ್ಲಿಸಬೇಕು.
ಅರಣ್ಯ ಇಲಾಖೆಯ ಹುದ್ದೆಗಳಿಗೆ ನಿಗದಿಪಡಿಸಿದ ದೈಹಿಕ ಪರೀಕ್ಷೆಯ ವಿವರಣೆ :
ದೈಹಿಕ ಪರೀಕ್ಷೆ :
ಎತ್ತರ :
• ಪುರುಷ ಅಭ್ಯರ್ಥಿಗಳಿಗೆ 163 ಸೆಂಟಿಮೀಟರ್
• ಮಹಿಳಾ ಅಭ್ಯರ್ಥಿಗಳಿಗೆ 150cm
• ಉತ್ತರ ಭಾರತ ವಲಯದ ಪುರುಷ ಅಭ್ಯರ್ಥಿಗಳಿಗೆ 160 ಸೆಂಟಿ ಮೀಟರ್ ಮಹಿಳಾ ಅಭ್ಯರ್ಥಿಗಳಿಗೆ 145cm ಎತ್ತರ ನಿಗದಿಪಡಿಸಲಾಗಿದೆ.
ಎದೆಯ ಸುತ್ತಳತೆ :
ಇದು ಕೇವಲ ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ
ಎದೆ ಸುತ್ತಳತೆ 79 ಸೆಂಟಿಮೀಟರ್ ವಿಸ್ತರಿಸಿದಾಗ 84 ವಿಸ್ತರಿಸಿದಾಗ ಸೆಂಟಿಮೀಟರ್ ಇರಬೇಕು.
ಓಟದ ಪರೀಕ್ಷೆ ಮತ್ತು ಎತ್ತರ ಜಿಗಿತ ಪುರುಷ ಅಭ್ಯರ್ಥಿಗಳಿಗೆ :
ಪುರುಷರಿಗೆ ಫೈದಲ್ ಚಾಲ್ : ನಾಲ್ಕು ಗಂಟೆಗಳಲ್ಲಿ 25 km ಓಟದ ಸ್ಪರ್ಧೆಯನ್ನು ಮುಗಿಸಬೇಕು
ಮಹಿಳಾ ಪೈದಲ್ ಚಾಲ್ : ನಾಲ್ಕು ಗಂಟೆಗಳಲ್ಲಿ 14 ಕಿ.ಮೀ ಓಟವನ್ನು ಮುಗಿಸಬೇಕು.
ಅರ್ಜಿ ಸಲ್ಲಿಕೆಗೆ ಬೇಕಾಗುವ ಪ್ರಮುಖ ದಾಖಲಾತಿಗಳು :
• ಫೋಟೋ ಮತ್ತು ನಿಮ್ಮ ಸಹಿ
• ಶಿಕ್ಷಣದ ಪ್ರಮಾಣ ಪತ್ರ ( 10ನೇ ತರಗತಿಯಿಂದ ದ್ವಿತೀಯ ಪಿಯುಸಿ ಅಂಕಪಟ್ಟಿಗಳ ವಿವರಣೆ )
• ವಾಸ ಸ್ಥಳ ಪ್ರಮಾಣ ಪತ್ರ
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ
• ನಿಮ್ಮ ಆಧಾರ್ ಕಾರ್ಡ್ ( ದಾಖಲಾತಿಯ ಪುರಾವೆ )
ಭಾರತೀಯ ಅರಣ್ಯ ಇಲಾಖೆಯ ಹುದ್ದೆಗಳಿಗೆ ನಿಗದಿಪಡಿಸಿದ ಆಯ್ಕೆ ವಿಧಾನದ ಪ್ರಕ್ರಿಯೆ :
ಆಯ್ಕೆ ವಿಧಾನ :
• ಲಿಖಿತ ಪರೀಕ್ಷೆ
• ದೈಹಿಕ ಪರೀಕ್ಷೆ
• ದಾಖಲಾತಿ ಪರಿಶೀಲನೆ
ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 17 ಅಕ್ಟೋಬರ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 06 ನವಂಬರ್ 2022
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಇನ್ನೂ ಆರಂಭಗೊಂಡಿಲ್ಲ ಆರು ನವಂಬರ್ 2022 ಅರ್ಜಿ ಸಲ್ಲಿಕೆ ಕೊನೆ ದಿನಾಂಕವಾಗಿರುತ್ತದೆ.
ಸೂಚನೆ :
ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆ ಹಾಗೂ ಅದರ ವೆಬ್ಸೈಟ್ ಪರಿಶೀಲಿಸಿ ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆದು ತದನಂತರದಲ್ಲಿ ಅರ್ಜಿಯನ್ನು ಸಲ್ಲಿಸಬೇಕು.
ಮುಖ್ಯ ಪದಗಳು :
ನಾವು ನೀಡಿರುವ ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಮತ್ತು ಫೇಸ್ ಬುಕ್ ಗಳ ಮೂಲಕ ಹಂಚಿಕೊಳ್ಳಿ ಆದಷ್ಟು ಈ ಮಾಹಿತಿಯನ್ನು ಉದ್ಯೋಗ ಮಾಹಿತಿ ಬಯಸುವ ಅಭ್ಯರ್ಥಿಗಳಿಗೆ.