ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇಲಾಖೆ ನೇಮಕಾತಿ 2022. ಇಲಾಖೆಯಲ್ಲಿ ಖಾಲಿ ಇರುವ 1,535 ವಿವಿಧ ಹುದ್ದೆಗಳಿಗೆ ಇಲಾಖೆಯು ಅರ್ಜಿ ಆಹ್ವಾನಿಸಲಾಗಿದೆ ಈ ಹುದ್ದೆಗಳಿಗೆ 10ನೇ ತರಗತಿ ಅಥವಾ ದ್ವಿತೀಯ ಪಿಯುಸಿ ಅಥವಾ ಐಟಿಐ ವಿದ್ಯಾರ್ಹತೆಯಲ್ಲಿ ಉತ್ತೀರ್ಣತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ಪ್ರಕ್ರಿಯೆ / ಅರ್ಜಿ ಸಲ್ಲಿಕೆ ವಿಧಾನ / ವೇತನ ಶ್ರೇಣಿ / ಉದ್ಯೋಗದ ಸ್ಥಳ ಮುಂತಾದ ಮಾಹಿತಿಯನ್ನು ಈಷಕೆಳಗಿನಂತೆ ವಿವರಿಸಲಾಗಿದೆ.
( ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇಲಾಖೆಯಲ್ಲಿ ಕಾಲಿ ಇರುವ ಟ್ರೇಡ್ ಅಪ್ರೆಂಟಿಸ್ ಹಾಗೂ ಟೆಕ್ನಿಕಲ್ ಅಪ್ರೆಂಟಿಸ್ ಕರ್ನಾಟಕದ ಅಭ್ಯರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದು )
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ವಿವರಣೆ :
ನೇಮಕಾತಿ ಇಲಾಖೆಯ ಹೆಸರು :
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇಲಾಖೆ
ಹುದ್ದೆಗಳ ಹೆಸರು :
• ಟ್ರೇಡ್ ಅಪ್ರೆಂಟಿಸ್
• ಟೆಕ್ನಿಷಿಯನ್ ಅಪ್ರೆಂಟಿಸ್ :
ಒಟ್ಟು ಹುದ್ದೆಗಳ ಸಂಖ್ಯೆ :
• ಟ್ರೇಡ್ ಅಪ್ರೆಂಟಿಸ್ : 768 ಹುದ್ದೆಗಳಿವೆ
• ಟೆಕ್ನಿಷಿಯನ್ ಅಪ್ರೆಂಟಿಸ್ : 767 ಹುದ್ದೆಗಳಿವೆ
( ಒಟ್ಟು ಹುದ್ದೆಗಳ ಸಂಖ್ಯೆ 1,535 ಹುದ್ದೆಗಳಿಗೆ ಇಲಾಖೆಯು ಭಾರತಾದ್ಯಂತ ಅರ್ಜಿಯನ್ನು ಆಹ್ವಾನಿಸಲಾಗಿದೆ. )
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇಲಾಖೆಯ ಟ್ರೇಡ್ ಅಪ್ರೆಂಟಿಸ್ ಹಾಗೂ ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆಯ ವಿವರಣೆ :
ವಿದ್ಯಾರ್ಹತೆ :
ಟ್ರೇಡ್ ಅಪ್ರೆಂಟಿಸ್ ಹಾಗೂ ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪಾಸ್ ಅಥವಾ ದ್ವಿತೀಯ ಪಿಯುಸಿ ಪಾಸ್ ಅಥವಾ ಡಿಪ್ಲೋಮೋ ಅಥವಾ ಐಟಿಐ ಪ್ರಮಾಣ ಪತ್ರ ಅಥವಾ ಯಾವುದೇ ಪದವಿ ಪಡೆದಂತ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಲು ಅರ್ಹತೆ ಪಡೆದಿರುತ್ತಾರೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇಲಾಖೆ ಹುದ್ದೆಗಳಿಗೆ ಸಂಬಂಧಿಸಿದ ವಯಸ್ಸಿನ ಮಿತಿಯ ವಿವರಣೆ :
ವಯೋಮಿತಿ :
ಕನಿಷ್ಠ 18 ವರ್ಷ ಗರಿಷ್ಠ 24 ವರ್ಷದ ಅಭ್ಯರ್ಥಿಗಳು ಟ್ರೇಡ್ ಅಪ್ರೆಂಟಿಸ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆಯನ್ನು ಪಡೆದಿರುತ್ತಾರೆ.
ಟ್ರೇಡ್ ಅಪ್ರೆಂಟಿಸ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಸಂಬಂಧಿಸಿದ ಅರ್ಜಿ ಶುಲ್ಕದ ವಿವರಣೆ :
ಅರ್ಜಿಯ ಶುಲ್ಕ :
• ಸಾಮಾನ್ಯ / ಈಡಬ್ಲ್ಯೂಎಸ್ ಮತ್ತು ಓಬಿಸಿ ಅಭ್ಯರ್ಥಿಗಳಿಗೆ ರೂಪಾಯಿ 100/-
• ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ / ಪಿ ಡಬ್ಲ್ಯೂ ಬಿ ಡಿ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಇಲಾಖೆಯು ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಶುಲ್ಕ ಪಾವತಿ ಮಾಡಬೇಕಾದ ವಿಧಾನ :
ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಚಲನೂ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬಹುದಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಹುದ್ದೆಗಳಿಗೆ ನಿಗದಿಪಡಿಸಿದ ವೇತನ ಶ್ರೇಣಿಯ ವಿವರಣೆ :
ವೇತನ ಶ್ರೇಣಿ :
ವಿಕಾಸ್ ಶ್ರೇಣಿಯ ಮಾಹಿತಿಯ ಕುರಿತು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ.
ಟ್ರೇಡ್ ಅಪ್ರೆಂಟಿಸ್ ಹಾಗೂ ಟೆಕ್ನಿಕಲ್ ಅಪ್ರೆಂಟಿಸ್ ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ಪ್ರಕ್ರಿಯೆ ವಿಧಾನದ ವಿವರಣೆ :
ಆಯ್ಕೆ ವಿಧಾನ :
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನೇಮಕಾತಿ ನಿಯಮಗಳ ಅನುಸಾರ ನೇರ ನೇಮಕಾತಿ ಅಥವಾ ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಗಳು ಅರ್ಜಿಯನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು.
ಉದ್ಯೋಗದ ಸ್ಥಳ : ಈ ಹುದ್ದೆಗಳಿಗೆ ಭಾರತದಾತ್ಯಂತ ಅರ್ಜಿ
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 12 ಸಪ್ಟಂಬರ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 10 ಅಕ್ಟೋಬರ್ 2022
ಅರ್ಜಿ ಸಲ್ಲಿಕೆ ಬೇಕಾಗುವ ಪ್ರಮುಖ ದಾಖಲಾತಿಗಳ ವಿವರಣೆ:
• ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ
• ಅಭ್ಯರ್ಥಿಯ ಗುರುತಿನ ಚೀಟಿ
• ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಅಂಕಪಟ್ಟಿ ಜೆರಾಕ್ಸ್ ಪ್ರತಿ
• ಅಭ್ಯರ್ಥಿಯ ಹೆಬ್ಬೆಟ್ಟಿನ ಸಹಿ
• ಮೀಸಲಾತಿಗೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರ
• ವಾಸ ಸ್ಥಳ ಪ್ರಮಾಣ ಪತ್ರ
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲುವ ವಿಧಾನ :
• ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವುದಕ್ಕಿಂತ ಮುಂಚೆ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಅರ್ಹತೆಯನ್ನು ಹೊಂದಿದ್ದೀರಿ ಅಥವಾ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಇದೆಯಾ ಎಂದು ಖಚಿತಪಡಿಸಿಕೊಳ್ಳಿ.
• ತದನಂತರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ.
• ಅಲ್ಲಿ ಕೇಳಲಾದ ಹೆಸರು ಜನ್ಮ ದಿನಾಂಕದ ವಿವರಣೆ ಮುಂತಾದ ಮಾಹಿತಿಯನ್ನು ಸ್ಪಷ್ಟವಾಗಿ ನೋಡಿ ತದನಂತರ ಅರ್ಜಿಯನ್ನು ಮುಂದುವರಿಸಿ.
• ಅರ್ಜಿ ಸಲ್ಲಿಸಿದ ಬಳಿಕ ಅರ್ಜಿ ನಮೂನೆಯನ್ನು ಮುದ್ರಣ ಮಾಡಿಕೊಳ್ಳಿ.
ಇಲಾಖೆಯ ಹಿನ್ನೆಲೆ :
ಇಲಾಖೆಯು ಭಾರತದಲ್ಲಿ ಹಲವಾರು ಶಾಖೆಗಳನ್ನು ಒಳಗೊಂಡಿದ್ದು ಭಾರತೀಯ ಅಭ್ಯರ್ಥಿ ಹಾಗೂ ಸಾಮಾನ್ಯ ಜನರಿಗೆ ಉತ್ತಮವಾದ ಸೇವೆಯನ್ನು ಒದಗಿಸುತ್ತಿದೆ ಈ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ.
ಉದ್ಯೋಗದ ವಿಧ : ಈ ಉದ್ಯೋಗವು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತವೆ.
• ಇಂಡಿಯನ್ ಆಯಿಲ್ ಕಾರ್ಪೊರೇಷನ್ ಇಲಾಖೆಯು ಅತ್ಯಂತ ಬೃಹತ್ ಕಂಪನಿಯಾಗಿದ್ದು ಈ ಇಲಾಖೆಯು ಭಾರತದ ಒಂದು ಶಕ್ತಿಯುತವಾದ ಅಥವಾ ಭಾರತದ ಆರ್ಥಿಕತೆಯಲ್ಲಿ ತನ್ನದೇ ಆದ ಪಾಲನ್ನು ನೀಡುತ್ತಿರುವ ಇಲಾಖೆಯು ಸುಮಾರು 5 ಕೋಟಿ 14 ಲಕ್ಷದ 890 ಆದಾಯವನ್ನು 2020 ಮತ್ತು 2021 ರಲ್ಲಿ ಗಳಿಸಿದೆ.
• ಹಲವಾರು ರೀತಿಯಿಂದ ಈ ಇಲಾಖೆಯು ತನ್ನದೇ ಆದ ಕೊಡುಗೆಯನ್ನು ಭಾರತಕ್ಕೆ ನೀಡುತ್ತಾ ಬಂದಿದೆ.
ಸೂಚನೆ :
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಓದಿ ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ತದನಂತರದಲ್ಲಿ ಅರ್ಜಿಯನ್ನು ಸಲ್ಲಿಸಿ.
ಮುಖ್ಯ ಪದಗಳು :
ನಾವು ನೀಡುವ ಈ ಉದ್ಯೋಗದ ಮಾಹಿತಿಯು ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ ಅಥವಾ ಫೇಸ್ಬುಕ್ ಗ್ರೂಪ್ ಗಳ ಮೂಲಕ ಹಂಚಿಕೊಳ್ಳಿ ಆದಷ್ಟು ಈ ಮಾಹಿತಿಯನ್ನು ಉದ್ಯೋಗ ಮಾಹಿತಿ ಬಯಸುವ ಅಭ್ಯರ್ಥಿಗಳಿಗೆ ಶೇರ್ ಮಾಡಿ.