ತುಳುನಾಡ ದೈವ ಹಾಗೂ ಅಲ್ಲಿನ ಸಾಂಪ್ರದಾಯಿಕ /ಸಾಂಸ್ಕೃತಿಕ ಹಾಗೂ ಪರಂಪರೆಯ ಜ್ಯೋತಿಕವಾಗಿ ಇತ್ತೀಚಿಗೆ ಬಿಡುಗಡೆಯಾದ ರಿಷಬ್ ಶೆಟ್ಟಿಯ ನಟನೆ ಹಾಗೂ ನಿರ್ದೇಶನದ ಕಾಂತರಾಜ್ ಸಿನಿಮಾವು ಎಲ್ಲೆಡೆ ಭರ್ಜರಿ ಯಶಸ್ಸು ಕಾಣುತ್ತಿದೆ. ಕಾಂತರ ಸಿನಿಮಾದ ಮೂಲಕ ರಿಷಬ್ ಶೆಟ್ಟಿಯವರು ನಾನು ನಟಿನಿಗೂ ಸೈ ನಿರ್ದೇಶನಕ್ಕೂ ಸೈ ಎನ್ನುವುದನ್ನು ಅವರು ಮತ್ತೊಮ್ಮೆ ನಿರೂಪಿಸಿದ್ದಾರೆ.
ರಿಷಬ್ ಶೆಟ್ಟಿ ಒಬ್ಬ ಉತ್ಸಾಹ ನಿರ್ದೇಶಕ
ತಾವು ನಟಿಸಿ ನಿರ್ದೇಶಿಸುವ ಸಿನಿಮಾದಲ್ಲಿ ರಿಷಬ್ ಶೆಟ್ಟಿಯವರು ಏನಾದರೂ ಹೊಸದನ್ನು ತೋರಿಸುವ ಅಥವಾ ಹೊಸದನ್ನು ಹುಡುಕುವ ರಿಷಬ್ ಶೆಟ್ಟಿ ಅವರ ಕ್ರಿಯೇಟಿವಿಟಿ ಹಾಗೂ ಇಂತಹ ಪ್ರತಿಭಾವಂತ ನಟ ಕನ್ನಡ ಇಂಡಸ್ಟ್ರಿಗೆ ಸಿಕ್ಕಿದ್ದು ಒಂದು ಅದೃಷ್ಟವೇ ಸರಿ. ರಿಷಬ್ ಶೆಟ್ಟಿಯನ್ನ ಈಗ ಕನ್ನಡ ಚಿತ್ರರಂಗವು ಹಾಡಿ ಹೊಗಳುತ್ತಿದೆ. ಇದಕ್ಕೆಲ್ಲ ಕಾರಣ ಅವರು ನಿರ್ದೇಶಿಸಿ ನಟಿಸಿರುವ ಕಾಂತರ ಸಿನಿಮಾ ಈ ಸಿನಿಮಾ ಒಂದು ನೂತನ ಕಥೆಯಾಗಿದ್ದು, ಸಿನಿಮಾದ ಕೊನೆಯ ಭಾಗದಲ್ಲಿ ರಿಷಬ್ ಶೆಟ್ಟಿ ಅವರ ನಟನೆ ಎಲ್ಲರನ್ನು ಬೆಚ್ಚಿ ಬೀಳುವಾಗಿ ಮಾಡಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಯಶಸ್ವಿ ನಟ ಹಾಗೂ ಯಶಸ್ವಿ ನಿರ್ದೇಶನರ ಸಾಲಿನಲ್ಲಿ ಮೊದಲ ಸ್ಥಾನವನ್ನು ರಿಸೆಪ್ಶೆಟ್ಟಿಯವರು ಪಡೆಯುತ್ತಾರೆ.
ಹಾಗಂತ ಕಾಂತರಾ ಸಿನಿಮಾವು ಇವರ ಮೊದಲ ಸಿನಿಮಾ ಅಲ್ಲ ಈ ಮೊದಲೇ ಹಲವಾರು ಕನ್ನಡ ಹಿಟ್ ಸಿನಿಮಾಗಳನ್ನ ಚಿತ್ರರಂಗಕ್ಕೆ ನೀಡಿದ್ದಾರೆ. ಇವತ್ತು ಇಷ್ಟೊಂದು ಯಶಸ್ಸು ಮತ್ತು ಮೆಚ್ಚುಗೆಗಳು ಬರಬೇಕಾದರೆ ಇವರು ಸಾಕಷ್ಟು ಕಷ್ಟಗಳನ್ನು ಎದುರಿಸಿ ಬಂದಿದ್ದಾರೆ ಚಿತ್ರರಂಗದ ಇವರ ದಾರಿಯು ಸುಗಮವಾಗಿರಲಿಲ್ಲ ಅಲ್ಲಿ ಅನೇಕ ಏಳು ಬೀಳುಗಳನ್ನು ಕಂಡ ನಂತರದಷ್ಟೇ ರಿಷಬ್ ಶೆಟ್ಟಿರನ್ನು ಯಶಸ್ಸು ಮತ್ತು ಕೀರ್ತಿ ಅವರನ್ನು ಹುಡುಕುತ್ತಾ ಬಂದಿದೆ. ಕಾಂತರಾ ಸಿನಿಮವು ಈಗ ರಾಜದಾದ್ಯಂತ ಸೂಪರ್ ಹಿಟ್ ಪಡೆದಿದ್ದು ಅದರ ಬೆನ್ನಲ್ಲೇ ರಿಷಬ್ ಶೆಟ್ಟಿ ಅವರ ಜೀವನದ ಬಗ್ಗೆ ತಿಳಿಯೋಣ.
ರಿಷಬ್ ಶೆಟ್ಟಿ ಅವರ ಬಾಲ್ಯ ಜೀವನ :
ರಿಷಬ್ ಶೆಟ್ಟಿ ಅವರು ಮೂಲತಃ ಕುಂದಾಪುರದವರು ಕೆರಾಡಿ ಎಂಬಲ್ಲಿ 7-ಜುಲೈ-1983 ರತ್ನಾವತಿ ಬಿ ಶೆಟ್ಟಿ ಹಾಗೂ ಭಾಸ್ಕರ್ ಶೆಟ್ಟಿ ಅವರ ಮೂರನೇ ಮಗ. ರಿಸೆಪ್ಶೆಟ್ಟಿಯವರು ಇವರು ಮಧ್ಯಮ ಕುಟುಂಬದ ಮೂಲಕ ಜನಿಸಿದ್ದಾರೆ. ಇವರ ಮೂಲ ಹೆಸರು ಪ್ರಶಾಂತ್ ಶೆಟ್ಟಿ ಎಂದು ಈ ಹೆಸರು ಬಹಳಷ್ಟು ಜನರಿಗೆ ತಿಳಿದಿಲ್ಲ. ಇವರು ತಮ್ಮ ಹೆಸರನ್ನು ಸಿನಿಮಾಕ್ಕೆ ಬಂದ ಮೇಲೆ ಅಷ್ಟೇ ರಿಷಬ್ ಶೆಟ್ಟಿ ಎಂದು ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ.
ಕೊಡಚಾದ್ರಿ ಬೆಟ್ಟದ ತಪ್ಪಲಿನಲ್ಲಿ ಬರುವ ಕೆರಾಡಿಯಲ್ಲಿ ಇವರು ತಮ್ಮ ಬಾಲ್ಯ ಜೀವನವನ್ನು ಕಳೆದಿದ್ದಾರೆ. ಇವರ ತಂದೆ ಓರ್ವ ಜ್ಯೋತಿಷ್ಯ ಇದ್ದವರು ಇವರ ತಂದೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪಾಂಡಿತ್ಯವನ್ನು ಪಡೆದವರು. ಇವರು ಯಾವಾಗಲೂ ಊರಿನಲ್ಲಿ ಇರುತ್ತಿರಲಿಲ್ಲ ಕಾರಣ ಅವರ ಜೀವನವನ್ನು ಸಾಗಿಸಲು ಬೆಂಗಳೂರು ಮುಂತಾದ ಕಡೆ ಜ್ಯೋತಿಷ್ಯವನ್ನು ಹೇಳಲು ಹೋಗುತ್ತಿದ್ದರು. ಕಾರಣ ಜ್ಯೋತಿಷ್ಯ ಇವರಿಗೆ ಒಂದು ಉದ್ಯೋಗವಾಗಿತ್ತು. ರಿಷಬ್ ಶೆಟ್ಟಿ ಅವರ ಪ್ರಕಾರ ಅವರ ತಂದೆ ಇವತ್ತಿಗೂ ಸಹ ಇದೇ ವೃತ್ತಿಯನ್ನು ಮುಂದುವರಿಸುತ್ತಿದ್ದಾರೆ. ರಿಷಬ್ ಶೆಟ್ಟಿ ಅವರ ಕುಟುಂಬದಲ್ಲಿ ರಿಷಬ್ ಶೆಟ್ಟಿ ಅವರೇ ಚಿಕ್ಕವರು. ಇವರಿಗೆ ಓರ್ವ ಸಹೋದರ ಹಾಗೂ ಅಕ್ಕ ಇದ್ದಾರೆ. ರಿಷಬ್ ಶೆಟ್ಟಿ ಹೇಳಿಕೊಳ್ಳುವ ಹಾಗೆ ಇವರಿಗೆ ತಾಯಿ ಪ್ರೀತಿ ಜೊತೆಗೆ ಅಕ್ಕನ ಹಾರೈಕೆ ಕೂಡ ಸಿಗುತ್ತದೆ. ಬಾಲ್ಯದಲ್ಲಿ ತರ್ಲೆ, ತುಂಟಾಟ, ಆಟ, ಮೋಜು ಇವೆಲ್ಲ ಆಗ ಅವರ ಜೀವನದಲ್ಲಿ ಮಾಮೂಲಿಯಾಗಿತ್ತು. ರಿಷಬ್ ಶೆಟ್ಟಿ ಹಾಗೂ ಅವರ ಅಣ್ಣ ಅಕ್ಕ ಈ ಮೂವರು ಸಹ ಕೆರಾಡಿಯ ಶಾಲೆ ಒಂದರಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಾರೆ. ಇವರಿಗೆ ಹೇಳಿಕೊಳ್ಳುವ ಹಾಗೆ ಆಸ್ತಿ ಏನು ಇರಲಿಲ್ಲ ಚಿಕ್ಕ ಭೂಮಿಯಲ್ಲಿ ಇವರಿಗೆ ಜೀವನ ಸಾಗಿಸಲು ಬೇಕಾಗುವ ಹಣ ಮಾತ್ರ ಸಿಗುತ್ತಿತ್ತು. ಇದ್ದಿದ್ರಲ್ಲಿ ಅವರ ಜೀವನ ತಕ್ಕಮಟ್ಟಿಗೆ ಸಾಗುತ್ತಿತ್ತು ರಿಷಬ್ ಶೆಟ್ಟಿಯವರು ಶಾಲೆಯಲ್ಲಿ ಗೆಳೆಯರೊಂದಿಗೆ ಆಟ ಪಾಠ ಕಂಬಳದ ವೀಕ್ಷಣೆ ಜಾತ್ರೆ ಉತ್ಸವ ದೈವಿಕತೆಯಲ್ಲಿ ಭಾಗವಹಿಸುವುದು ಅಂದರೆ ರಿಷಬ್ ಶೆಟ್ಟಿಯವರಿಗೆ ಆಸಕ್ತಿ. ಚಿಕ್ಕ ಹುಡುಗನಾಗಿರುವಾಗಲೇ ಚುರುಕಾಗಿದ್ದವರು. ಇವರು ಓದಿನಲ್ಲಿ ಐದನೇ ತರಗತಿ ವರೆಗೂ ಮಾತ್ರ ಸಾಧಾರಣ ವಿದ್ಯಾರ್ಥಿಯಾಗಿ ಅವರ ಶಾಲೆಯಲ್ಲಿ ಗುರುತಿಸಿಕೊಂಡಿದ್ದಾರೆ. ಇದೇ ಕಾರಣದಿಂದಾಗಿ 5ನೇ ತರಗತಿಯನ್ನು ಎರಡು ಬಾರಿ ಓದುವ ಪ್ರಮೇಯ ಬಂದಿತು.
ಇವರ ಚಿಕ್ಕಮ್ಮ ನಾಗರತ್ನಮ್ಮ ಎಂಬುವರ ಟ್ಯೂಷನ್ ಮತ್ತು ಅವರ ಮನೆ ಪಾಠದ ಪ್ರಭಾವದಿಂದ ತಾವು ಫೇಲಾಗಿದ್ದ 5ನೇ ತರಗತಿಯನ್ನು ಶೇಕಡಾ 80 ಅಂಕಗಳನ್ನು ಪಡೆಯುವ ಮೂಲಕ ಉನ್ನತ ಶ್ರೇಣಿಯಲ್ಲಿ ಪಾಸ್ ಆಗುತ್ತಾರೆ. ತದನಂತರ ಹೈಸ್ಕೂಲು ಹಾಗೂ ಕಾಲೇಜು ಅಂತವನ್ನು ಪ್ರವೇಶಿಸುತ್ತಾರೆ ಅಲ್ಲಿ ಓರ್ವ ಪ್ರತಿಭಾವಂತ ವಿದ್ಯಾರ್ಥಿಯಾಗಿ ಗುರುತಿಸಿಕೊಳ್ಳುತ್ತಾರೆ. ಅವರು ಓದಿದ ಸರ್ಕಾರಿ ಶಾಲೆಯ ಅನುಭವಗಳು ಅಲ್ಲಿಯಾ ಸಾಮಾಜಿಕ ಸ್ಥಿತಿ ಸನ್ನಿವೇಶಗಳು ಕುರಿತಾದ ಬಿಡುಗಡೆಯಾದ ಅವರ ಚಿತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಬಹುವಾದ ಸ್ಪೂರ್ತಿ ಎಂದು ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಕಾಲೇಜಿನಲ್ಲಿ ಅವರ ಗೆಳೆಯರು ಅವರ ಸೀನಿಯರ್ಸ್ ಇಂದು ಸ್ಟುಡಿಯೋದಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ. ರಿಷಬ್ ಶೆಟ್ಟಿ ಅವರ ತಂದೆಯವರು ರಜಾ ದಿನದಲ್ಲಿ ಮಾತ್ರ ಊರಿಗೆ ಬರುತ್ತಿದ್ದರು. ಉಳಿದ ದಿನವೆಲ್ಲ ಅವರ ವಾಸ ಬೆಂಗಳೂರು ನಗರ .
ರಿಷಬ್ ಶೆಟ್ಟಿ ಸಿನಿಮಾ ರಂಗಕ್ಕೆ ಬರಲು ಪ್ರೇರಣೆಯಾದ ಅಂಶಗಳು :
ರಿಷಬ್ ಶೆಟ್ಟಿ ಅವರಿಗೆ ಶಾಲಾ ದಿನಗಳು ಕಾಲೇಜಿನಲ್ಲಿ ಸಿನಿಮಾ ಹುಚ್ಚು ಕಾರಣ ಡಾಕ್ಟರ್ ರಾಜಕುಮಾರ್ ಅವರು ನಟಿಸಿರುವ ಚಿತ್ರಗಳು ಹಾಗೂ ಕರಾವಳಿ ಪ್ರದೇಶದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಯಕ್ಷಗಾನದಂತಹ ಚಟುವಟಿಕೆಗಳು ರಿಷಬ್ ಶೆಟ್ಟಿ ಅವರ ಪ್ರತಿಭೆಯನ್ನ ಅವರ ಹಾಕಲು ಸಹಾಯ ಮಾಡಿದವು. ಮುಂದೆ ಅಶಬ್ ಶೆಟ್ಟಿ ಮತ್ತು ಅವರ ಅಕ್ಕ ಬೆಂಗಳೂರಿಗೆ ಉನ್ನತ ಶಿಕ್ಷಣ ಪಡೆಯಲು ಬರುತ್ತಾರೆ ಇಲ್ಲಿ ರಿಷಬ್ ಶೆಟ್ಟಿ ಕೇವಲ ಓದಿಗೆ ಮಾತ್ರ ಸೀಮಿತವಾಗದೆ ಕುಸ್ತಿ ಹಾಗು ಜೂಡೋ ಕಲೆಗಳಿಗೆ ರಿಸೆಬ್ ಶೆಟ್ಟಿ ಗುರುತಿಸಿಕೊಳ್ಳುತ್ತಾರೆ.
ಇವರನ್ನು ಸಿನಿಮಾಕ್ಕೆ ಬರಲು ಮತ್ತೊಂದು ಕಾರಣ ಅಂದರೆ ಅದು ಉಪ್ಪಿ ಅಲಿಯಾಸ್ ಉಪೇಂದ್ರ ಅವರು ಇವರು ಕೂಡ ಕರಾವಳಿಯ ಅಪ್ಪಟ ಪ್ರತಿಭೆ. ಉಪೇಂದ್ರ ಅವರ ಸಿನಿಮಾಗಳಾದ ಊಶ್ / ಓಂ / ಎ /ಉಪೇಂದ್ರ ಹೀಗೆ ಮುಂತಾದ ಸಿನಿಮಾಗಳು ರಿಷಬ್ ಶೆಟ್ಟಿ ಮೇಲೆ ಪ್ರಭಾವ ಬೀರುತ್ತವೆ. ಇದರಿಂದ ಇವರು ಅವರಂತೆ ತಾವು ಕೂಡ ಓರ್ವ ನಿರ್ದೇಶಕನಾಗಿ ಗುರುತಿಸಿಕೊಳ್ಳಬೇಕೆಂಬ ಹಂಬಲ ಅವರಲ್ಲಿ ಬರುತ್ತದೆ.
ರಿಷಬ್ ಶೆಟ್ಟಿಯವರು ಪ್ರತಿಯೊಂದು ಖರ್ಚಿಗೂ ತಂದೆ ಬಳಿ ಹಣ ಕೇಳಲು ಹಿಂಜರಿತಿದ್ದರು ಇದರಿಂದಾಗಿ ಹಣದ ಮಾರ್ಗವನ್ನು ತಾವೇ ಸ್ವತಃ ನೋಡಿಕೊಳ್ಳುತ್ತಿದ್ದರು. ರಿಷಬ್ ಶೆಟ್ಟಿಯವರು ಕ್ಯಾನ್ ವಾಟರ್ ಸಪ್ಲೈಯರ್ ಆಗಿ ಕೆಲಸ ಮಾಡಿದರು. ಜೊತೆ ಜೊತೆಯಲ್ಲಿ ಫಿಲಂ ಇನ್ಸ್ಟಿಟ್ಯೂಟ್ ಮೂರು ವರ್ಷದ ಕೋರ್ಸ್ ಗೆ ಸಹ ಸೇರಿಕೊಂಡಿದ್ದರು ಇಷ್ಟೆಲ್ಲ ಕಷ್ಟ ಇದ್ದರೂ ರಿಷಬ್ ಶೆಟ್ಟಿಯವರು ಸಿನಿಮಾದ ಮೀರಿದ ಆಸಕ್ತಿ ಏನು ಕಡಿಮೆಯಾಗಿರಲಿಲ್ಲ. ಆಗ ರಿಸೆಪ್ಶೆಟ್ಟಿಯವರಿಗೆ 2005-06 ರಲ್ಲಿ ಎಂಡಿ ಪ್ರಕಾಶ್ ಅವರ ಪರಿಚಯವಾಗುತ್ತದೆ ಇದರ ಪ್ರಭಾವದಿಂದ ಅಸಿಸ್ಟೆಂಟ್ ನಿರ್ದೇಶಕನಾಗಿ ಕೆಲಸವನ್ನು ಪ್ರಾರಂಭಿಸಿದರು. ಅಲ್ಲಿ ಅವರಿಗೆ ಇಂತದೇ ಎಂಬ ಕೆಲಸವಿರಲಿಲ್ಲ ಬೇರೆಯವರು ಹೇಳಿದ ಕೆಲಸವನ್ನು ಮಾಡ್ತಿದ್ದರು ಇವರು ಅಸಿಸ್ಟೆಂಟ್ ನಿರ್ಧೇಶಿಕನಾಗಿ ಒಂದುವರೆ ವರ್ಷ ಕೆಲಸವನ್ನು ಮಾಡಿದ್ದಾರೆ. ಅಷ್ಟು ದಿನದ ಸಂಬಳ ಕೇವಲ ಒಂದುವರೆ ಸಾವಿರ ರೂಪಾಯಿ ಮಾತ್ರ ಅಂದ್ರೆ ಇವರಿಗೆ ದಿನಕ್ಕೆ ಕೇವಲ ಒಂದು ಅಥವಾ ಎರಡು ರೂಪಾಯಿ ಸಂಬಳವನ್ನು ನೀಡಿದ್ದಾರೆ. ಇದಾದ ಬಳಿಕ ರಿಷಬ್ ಶೆಟ್ಟಿ ಅವರು ಇವರಿವರನ್ನ ಕೇಳಿ ಬೇರೆ ಯಾವುದಾದರೂ ಸಿನಿಮಾಕ್ಕೆ ಸಹಾಯಕರು ಬೇಕಿದ್ರೆ ಹೇಳಿ ಎಂದು ಕೇಳಿಕೊಂಡರು ಆಗ ನಿರ್ದೇಶಕ ರವಿ ಶ್ರೀವತ್ಸ ರವರ ಗಂಡ ಹೆಂಡತಿ ಮತ್ತು ಬಾಯ್ ಫ್ರೆಂಡ್ ಚಿತ್ರಕ್ಕೆ ಸಹಾಯಕರಾಗಿ ಇವರು ಆಯ್ಕೆಯಾಗುತ್ತಾರೆ ಅಲ್ಲಿ ದಿನಕ್ಕೆ ಇವರಿಗೆ ರೂ.50 ಮಾತ್ರ ಸಿಗುತ್ತದೆ. ಇಷ್ಟೆಲ್ಲಾ ಕಷ್ಟ ಯಾತನೆ ಒದ್ದಾಟಗಳ ನಡುವೆ ಎಲ್ಲೋ ಒಂದು ಭರವಸೆಯನ್ನು ಇಟ್ಟುಕೊಂಡಿದ್ದ ಅವರು ಸೋಲದೆ ಮುಂದುವರಿತಾರೆ. ಮುಂದೆ ಸಿನಿಮಾದ ಸಹವಾಸದಿಂದ ಐದಾರು ಸಿನಿಮಾದಲ್ಲಿ ಹೀರೋಯಾಗಿ ಕೂಡ ಅಭಿನಯಿಸಿದ್ದಾರೆ ಆದರೆ ಆ ಸಿನಿಮಾಗಳು ತೆರೆಯ ಮೇಲೆ ಬರಲಿಲ್ಲ ಏನಾದರೂ ಕಾರಣದಿಂದ ಅವು ಬಿಡುಗಡೆಯಾಗುತ್ತಿರಲಿಲ್ಲ. ಇಷ್ಟಾದರೂ ಸಹ ರಿಷಬ್ ಶೆಟ್ಟಿಯವರು ಕ್ಯಾನ್ ವಾಟರ್ ಸಪ್ಲೈಯರ್ ಆಗಿ ಕೆಲಸ ಮಾಡಿದ ಹಣದ ಮೇಲೆ 25 ಲಕ್ಷದ ಹೋಟೆಲ್ ಬಿಸಿನೆಸ್ಸನ್ನ ಪ್ರಾರಂಭಿಸುತ್ತಾರೆ ಅದು ಸಹ ಕೆಲವು ದಿನಗಳ ಬಳಿಕ ಲಾಸ್ ಆಗುತ್ತದೆ. ಇದರಿಂದ ಸಂಬಂಧಿಕರ ಹಾಗೂ ಅವರ ಸ್ನೇಹಿತರು ಅವರನ್ನು ಅವಮಾನಿಸುತ್ತಾರೆ ಸಿನಿಮಾದ ಹುಚ್ಚಿನಿಂದ ಎಲ್ಲಾ ಹಣವನ್ನು ಹಾಳು ಮಾಡಿಬಿಟ್ಟ ಎಂಬ ಚುಚ್ಚು ಮಾತುಗಳು ಅವರ ಮನಸ್ಸಿಗೆ ಪರಿಣಾಮ ಉಂಟು ಮಾಡುತ್ತವೆ. ಇವರು ಲಾಸ್ಟ್ ನಲ್ಲಿ ಇದ್ದಾಗ ಇವರ ಸಂಬಂಧಿಕರು ಸಹ ಇವರಿಂದ ದೂರ ಉಳಿಯುತ್ತಾರೆ. ಕಾರಣ ಇವನು ಎಲ್ಲಿ ನಮ್ಮ ಬಳಿ ಹಣವನ್ನು ಕೇಳುತ್ತಾನೋ ಎಂಬ ಭಯ ಅವರಲ್ಲಿ ಮೂಡಿತ್ತು.
ಇದಾದ ಬಳಿಕ ರಿಸೆಪ್ಸೆಟ್ಟಿ ಯವರು ಕಿರುತೆರೆಯ ವಾಹಿಕೆಯಾದ ಶ್ರೀಮತಿ ಉಷಾ ಬಂಡಾರಿ ಅವರನ್ನು ಯಾವುದಾದರೂ ಧಾರಾವಾಹಿಯಲ್ಲಿ ಕೇಳಿ ಎಂದು ವಿನಂತಿಸಿಕೊಳ್ಳುತ್ತಾರೆ ಆಗ ಯಾವುದೋ ಧಾರಾವಾಹಿ ಎಂದು ಶ್ರೀಮತಿ ಉಷಾ ಬಂಡಾರಿ ಅವರು ಐದು ದಿನದ ಅಸೋಸಿಯೇಟ್ ಕೆಲಸಕ್ಕಾಗಿ ಅವರನ್ನು ಆಯ್ಕೆ ಮಾಡುತ್ತಾರೆ ಅವರು ಐದು ದಿನಕ್ಕೆ 500 ರೂಪಾಯಿಯನ್ನು ಸಹ ನೀಡುತ್ತಾರೆ. ಆದರೆ ಆ ಧಾರವಾಹಿ ಯಾಕೋ ಹೊರ ಬರಲೇ ಇಲ್ಲ.
ರಿಷಬ್ ಶೆಟ್ಟಿ ಎಂದು ಹೆಸರು ಬರಲು ಕಾರಣವೇನು :
ಯಾಕೆ ಈ ರೀತಿ ಆಗುತ್ತಿದೆ, ತನ್ನ ಗ್ರಹಗತಿ ಚೆನ್ನಾಗಿಲ್ವಾ? ತನ್ನ ಜನುಮ ದಿನಾಂಕ 07 ತಾನು ಅಭಿನಯಿಸಿದ ಚಿತ್ರಗಳು 07 ಹುಟ್ಟಿದ ತಿಂಗಳು ಸಹ 07 ನನ್ನ ಹೆಸರಿನಿಂದಲೇ ಏನಾದರೂ ಸಮಸ್ಯೆ ಇದೆಯಾ ಇಂದು ಭಾವಿಸಿದವರು ಪ್ರಶಂತ್ ಶೆಟ್ಟಿ ಎಂಬ ಹೆಸರನ್ನ ಆರ್ ಅಕ್ಷರದಿಂದ ಬರುವ ಹೆಸರನ್ನು ಇಟ್ಟುಕೋ ಎಂಬ ಸೂಚನೆಯನ್ನು ಅವರ ತಂದೆ ನೀಡುತ್ತಾರೆ ಇದರಿಂದಾಗಿ ಪ್ರಶಾಂತ್ ಶೆಟ್ಟಿ ರಿಸೆಬ್ ಶೆಟ್ಟಿಯಾಗಿ ಮರು ನಾಮಕರಣ ಮಾಡಿಕೊಳ್ಳುತ್ತಾರೆ. ಈ ಸಮಯದಲ್ಲಿ ಪ್ರಶಾಂತ್ ಶೆಟ್ಟಿಯವರು ರಿಷೆಬ್ ಶೆಟ್ಟಿಯಾಗಿ ಪರಿಚಯವಾಗುತ್ತಾರೆ. ಅವರ ಹೆಸರು ಬದಲಾವಣೆ ಮಾಡಿದ್ದೆ ಅವರ ತಂದೆ. ಇದೇ ಸಮಯದಲ್ಲಿ ತುಗ್ಲಕ್ ಚಿತ್ರದ ನಾಯಕನಾಗಿದ್ದ ರಕ್ಷಿತ್ ಶೆಟ್ಟಿ ಅವರ ಭೇಟಿ ಆಗುತ್ತದೆ ಆಗ ಅಲ್ಲಿರುವ ಎಲ್ಲಾ ನಿರ್ದೇಶಕರಿಗೂ ನಾನು ರಿಷಬ್ ಶೆಟ್ಟಿ ಎಂದೆ ಪರಿಚಯ ಮಾಡಿಕೊಳ್ಳುತ್ತಾರೆ. ರಕ್ಷಿತ್ ಶೆಟ್ಟಿ ಸಹ ಆಗ ಸಿನಿಮಾದಲ್ಲಿ ಅಂತದೇ ಕನಸನ್ನ ಹೊತ್ತು ಬಂದವರು ಇದರಿಂದಾಗಿ ರಕ್ಷಿತ್ ಮತ್ತು ರಿಷಬ್ ಶೆಟ್ಟಿ ನಡುವೆ ಬಹು ಬೇಗನೆ ಸ್ನೇಹ ಕಳೆದುಕೊಳ್ಳುತ್ತದೆ. ಆದರೆ ರಕ್ಷಿತ್ ಶೆಟ್ಟಿ ಅವರ ತುಗ್ಲಕ್ ಚಿತ್ರ ಅಷ್ಟೊಂದು ಯಶಸ್ಸು ಕಾಣಲಿಲ್ಲ ಇದರಿಂದ ಬಾರಿ ಮಾನವನಿದ್ದ ರಕ್ಷಿತ್ ಶೆಟ್ಟಿಯವರನ್ನು ರಿಷಬ್ ಶೆಟ್ಟಿ ಅವರು ಮನವು ಉಳಿಸುತ್ತಾರೆ ಮುಂದೆ ಅವರು ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ಸೂಟಿ ಮೇಲೆ ಬಿಜಿಯಾಗುತ್ತಾರೆ. ಈ ಚಿತ್ರದ ಯಶಸ್ಸಿನ ಬಳಿಕ ರಿಕ್ಕಿ ಚಿತ್ರಕ್ಕೆ ರಿಷಬ್ ಮತ್ತು ರಕ್ಷಿತ್ ಅವರು ಒಟ್ಟಿಗೆ ಸ್ಕಿಪ್ ಬರೆದು 2015 ರಲ್ಲಿ ತೆರೆಗೆ ತರುತ್ತಾರೆ. ಈ ಚಿತ್ರ ನಂತರ ರಿಷಬ್ ಶೆಟ್ಟಿ ಬರೆದ ಕಿರಿಕ್ ಪಾರ್ಟಿ ಸ್ಕಿಪ್ ಬರಲು ಕೈಗೆತ್ತಿಕೊಳ್ಳುತ್ತಾರೆ ಇದರಲ್ಲಿ ತಮ್ಮ ಕಾಲೇಜಿನ ಅನುಭವಗಳನ್ನು ಈ ಕಥೆಯಲ್ಲಿ ಬರೆಯುತ್ತಾರೆ ಈ ಚಿತ್ರವು ಯಶಸ್ಸನ್ನು ಕಾಣಿಸುತ್ತದೆ. ರಿಷಬ್ ಸಿನಿಮಾದ ಕನಸು ಈ ಚಿತ್ರದ ಮೂಲಕ ನನಸಾಗುತ್ತದೆ ಈ ಚಿತ್ರದ ಮೂಲಕ ಚಿತ್ರು ಉದ್ಯಮಕ್ಕೆ ಸಂಬಂಧಿಸಿದ ಎಲ್ಲಾ ಅವಾರ್ಡ್ ಮತ್ತು ಗೌರವ ರಿಷಬ್ ಅವರಿಗೆ ದೊರೆಯುತ್ತವೆ. ಮುಂದೆ ಅವರ ನಿರ್ದೇಶನದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ರಾಜ್ಯದಂತ ಯಶಸ್ಸನ್ನ ಕಾಣುತ್ತದೆ. ಈ ಸಿನಿಮಾದ ಮೂಲಕ ರಿಷಬ್ ಅವರು ಮುಂದೆ ಮುಟ್ಟಿದ್ದೆಲ್ಲ ಚಿನ್ನ ವಾಗುತ್ತ ಹೋಗುತ್ತದೆ ಮುಂದೆ ಬೆಲ್ ಬಾಟಮ್ ಗರುಡಗಮನ ವೃಷಭ ವಾಹನ ಚಿತ್ರದ ಸವಾರಿಯೂ ಅತ್ಯಂತ ಜೋರಾಗಿ ನಡೆಯುತ್ತದೆ ಈಗ ತೆರೆಗೆ ಅಪ್ಪಳಿಸಿದ ಕಾಂತರಾ ಸಿನಿಮಾದಲ್ಲಿ ಅವರ ನಟನೆ ರಾಜ್ಯದಾದ್ಯಂತ ಮೆಚ್ಚುಗೆಯನ್ನು ಗಳಿಸಿದೆ. ಇಂತಹ ಸಿನಿಮಾ ತೆಗಿಯಲು ಅದರಲ್ಲಿ ಪಾತ್ರ ನಿರ್ವಹಿಸಲು ಗಟ್ಟಿ ಗುಂಡಿಗೆ ಬೇಕು ಇದೆಲ್ಲ ರಿಷಬ್ ಅವರಿಂದ ಮಾತ್ರನೇ ಸಾಧ್ಯ ಎಂಬ ಸತ್ಯ ಈಗ ಇಡೀ ಗಾಂಧಿನಗರಕ್ಕೆ ತಿಳಿದಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ರಿಷಬ್ ಇವತ್ತು ಕನ್ನಡದ ಹೆಮ್ಮೆಯ ಪ್ರತಿಭೆ. ಇಷ್ಟೆಲ್ಲ ಕೀರ್ತಿ ಪ್ರಚಾರ ಇದ್ದರೂ ಸಹ ರಿಷಬ್ ಅವರು ಸೌಮ್ಯ ಸಭಾದವರು ಇವರಲ್ಲಿ ಯಾವುದೇ ರೀತಿಯ ಅಹಂ ಸಹ ಇಲ್ಲ
( ರಿಷಬ್ ಶೆಟ್ಟಿ ಕುರಿತಾದ ಈ ಮಾಹಿತಿಯು ಇಷ್ಟವಾಗಿದ್ದರೆ ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ ನೀವೇನಾದರೂಷ ರಿಷಬ್ ಶೆಟ್ಟಿ ಅವರ ಅಭಿಮಾನಿಯಾಗಿದ್ದರೆ ನಿಮ್ಮ ವಾಟ್ಸಪ್ ಮತ್ತು ಫೇಸ್ಬುಕ್ ಗ್ರೂಪ್ಗಳ ಮೂಲಕ ಹಂಚಿಕೊಳ್ಳಿ )