KFD Recruitment 2022 – Apply 10 Range Forest Officer Posts ( RFO Post Vacancy )

1. Karnataka forest department recruitment 202-23

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2022 ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಅರಣ್ಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರಣ್ಯ ಇಲಾಖೆಯ ಈ ಹುದ್ದೆಗಳು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಖಾಲಿ ಇದ್ದು ಈ ಅವಕಾಶವನ್ನು ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳು ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಹುದ್ದೆಗಳಿಗೆ ಸಂಬಂಧಿಸಿದ ವೇತನ ಶ್ರೇಣಿಯ ವಿವರಣೆ / ಆಯ್ಕೆ ವಿಧಾನ / ಅರ್ಜಿ ಸಲ್ಲಿಕೆ /ಶೈಕ್ಷಣಿಕ ವಿದ್ಯಾರ್ಹತೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

Karnataka forest department recruitment 2022 : Important information regarding the recruitment of Zonal Forest Officer posts

ನೇಮಕಾತಿ ಇಲಾಖೆ ಹೆಸರು :
ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2022

ಹುದ್ದೆಗಳ ಹೆಸರು :
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಇಲಾಖೆ ಅರ್ಜಿ ಆಹ್ವಾನಿಸಲಾಗಿದೆ.

ಉದ್ಯೋಗದ ಸ್ಥಳ :
ಕರ್ನಾಟಕ ಅರಣ್ಯ ಇಲಾಖೆಯ ಅಧಿಸೂಚನೆಯ ಪ್ರಕಾರ ವಲಯ ಅರಣ್ಯ ಅಧಿಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕದಲ್ಲಿ ಸೇವೆಯನ್ನು ಸಲ್ಲಿಸಬೇಕು.

2. Karnataka forest guard recruitment 2022 official website

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ವೇತನ ಶ್ರೇಣಿಯ ವಿವರಣೆ:

ವೇತನ ಶ್ರೇಣಿ :
ವಲಯ ಅರಣ್ಯ ಅಧಿಕಾರಿ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನುಸಾರ ಮಾಸಿಕವಾಗಿ 40,900 ರೂಪಾಯಿಯಿಂದ 78200 ವೇತನ ಶ್ರೇಣಿ ಬರುತ್ತದೆ.

ಒಟ್ಟು ಹುದ್ದೆಗಳ ಸಂಖ್ಯೆ:
ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಒಟ್ಟು 10 ವಲಯ ಅಧಿಕಾರಿ ಹುದ್ದೆಗಳು ಖಾಲಿ ಇವೆ.
• B.SC ( ವಿಜ್ಞಾನ ) ಅಥವಾ ನಿಕಿತ ಇಂಜಿನಿಯರಿಂಗ್ ಪದವೀಧರರಿಗೆ 05 ಹುದ್ದೆಗಳು
• B.SC ( ಅರಣ್ಯ ಶಾಸ್ತ್ರ ) ಪದವೀಧರಿಗೆ : 05 ಹುದ್ದೆಗಳು

3. Zonal Officer Posts Qualification :

ಅರಣ್ಯ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆಯ ವಿವರಣೆ :

ಶೈಕ್ಷಣಿಕ ವಿದ್ಯಾರ್ಹತೆ :
• ಹೊರೆಯ ಅರಣ್ಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆಯನ್ನು ಯಾವುದೇ ಮಾನ್ಯತೆ ಪಡೆದ ಅಥವಾ

• ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಅರಣ್ಯ ಶಾಸ್ತ್ರ ವಿಷಯದಲ್ಲಿ ಪದವಿಯನ್ನು ಪಡೆದಿರಬೇಕು. ಅಥವಾ ಅಂಗಿಕೃತ ವಿಶ್ವವಿದ್ಯಾನಿಲಯ ಯಾವುದಾದರೂ ಒಂದು ವಿಷಯವನ್ನು ಒಳಗೊಂಡಂತೆ B.SC ಪದವಿಯನ್ನು ಪಡೆದಿರಬೇಕು ( ಕೃಷಿ ಅರಣ್ಯ ಶಾಸ್ತ್ರ / ಪಶು ವೈದ್ಯಕೀಯ ಮತ್ತು ಪಶು ಸಂಗೋಪನ ವಿಜ್ಞಾನ / ತೋಟಗಾರಿಕೆ / ಮೀನುಗಾರಿಕೆ / ಪರಿಸರ ವಿಜ್ಞಾನ / ರಾಸಾಯನಶಾಸ್ತ್ರ / ವನ್ಯಜೀವಿ / ಭೂ ವಿಜ್ಞಾನ / ಗಣಿತಶಾಸ್ತ್ರ / ಭೌತಶಾಸ್ತ್ರ /ಸಸ್ಯಶಾಸ್ತ್ರ / ಸಂಖ್ಯಾಶಾಸ್ತ್ರ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ ಪದವಿಯನ್ನು ಪಡೆದಿರಬೇಕು.

Join Now

• ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳಿಂದ ‌ ಇಂಜಿನಿಯರಿಂಗ್ / ಟೆಕ್ನೋಲಜಿ ಪದವಿಯನ್ನು ಪಡೆದಿರಬೇಕು ( ಕೃಷಿ / ಕೆಮಿಕಲ್ / ಸಿವಿಲ್ / ಎಲೆಕ್ಟ್ರಿಕಲ್ / ಮೆಕ್ಯಾನಿಕಲ್/ ಎಲೆಕ್ಟ್ರಾನಿಕ್ಸ್ ಅಥವಾ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಹತೆ ಪೂರ್ಣಗೊಳಿಸಬೇಕುಒ

ಅರಣ್ಯ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ವಯೋಮಿತಿಯ ವಿವರಣೆ :

ವಯೋಮಿತಿ :
ಕರ್ನಾಟಕ ಅರಣ್ಯ ಇಲಾಖೆಯ ವಲಯ ಅರಣ್ಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ಗರಿಷ್ಠ ವಯೋಮಿತಿ 28 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅನುಗುಣವಾಗಿ ವಯಸ್ಸಿನಲ್ಲಿ ಸಡಿಲಿಕೆ ಇರುತ್ತದೆ.

ಮೀಸಲಾತಿ ವಯೋಮಿತಿಯ ಸಡಿಲಿಕೆಯ ವಿವರಣೆ:
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒಂದು ಅಭ್ಯರ್ಥಿಗಳಿಗೆ 33 ವರ್ಷ
• ಪ್ರವರ್ಗ 2A / 2B / 3A / 3B ಅಭ್ಯರ್ಥಿಗಳಿಗೆ 31 ವರ್ಷ

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2022 ಅರಣ್ಯ ಅಧಿಕಾರಿ ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ವಿಧಾನದ ಪ್ರಕ್ರಿಯೆ :

ಆಯ್ಕೆ ವಿಧಾನ :
ಕರ್ನಾಟಕ ಅರಣ್ಯ ಇಲಾಖೆಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಹಾಗೂ ಮೀಸಲಾತಿಯ ನಿಯಮಗಳ ನೋಯ ಒಂದು ಅನುಪಾತ 10ರಂತೆ ದೈಹಿಕ ಪರೀಕ್ಷೆ / ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ
( ಹುದ್ದೆಗಳಿಗೆ ಸಂಬಂಧಿಸಿದ ದೈಹಿಕ ಪರೀಕ್ಷೆ ಹಾಗೂ ವೇದಿಕೆಯ ಪರೀಕ್ಷೆ ಕುರಿತು ಕೆಳಗೆ ನೀಡಿರುವ ಅಧಿಸೂಚನೆಯನ್ನು ಗಮನಿಸಿ )

4. kfd recruitment 2022 apply online

ಅರ್ಜಿ ಸಲ್ಲಿಸುವ ವಿಧಾನ :

• ಅರ್ಜಿ ಸಲ್ಲಿಸಲು ಅರ್ಹತೆ ಪಡೆದ ಅಭ್ಯರ್ಥಿಗಳು ಕರ್ನಾಟಕ ಅರಣ್ಯ ಇಲಾಖೆ ಅಧಿಕೃತ ಅಧಿಸೂಚನೆಗೆ ಭೇಟಿ ನೀಡಿ ಅರ್ಜಿಯನ್ನ ಸಲ್ಲಿಸಬಹುದು ಅಥವಾ ನಾವು ನೀಡಿರುವ ಇಲಾಖೆಯ ಅಧಿಕೃತ ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.

• ಕರ್ನಾಟಕದ ಅರಣ್ಯ ಇಲಾಖೆಯ ಅಧಿಕೃತ ವೆಬ್ಸೈಟ್ ಆದ www.kfdrecruitment.com ಈ ಹುದ್ದೆಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸ ಬಹುದು.

• ತದನಂತರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಎಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಒದಗಿಸಬೇಕು

• ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಮತ್ತೊಮ್ಮೆ ಸರಿಯಾಗಿ ಪರಿಶೀಲಿಸಿ ಅರ್ಜಿ ಸಲ್ಲಿಕೆಯನ್ನು ಅನ್ವಯಿಸಿಕೊಳ್ಳಿ.

• ತದನಂತರ ಅಭ್ಯರ್ಥಿಗಳು ಅರ್ಜಿಯನ್ನು ಮುದ್ರಣ ಮಾಡಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ.

ಅರ್ಜಿ ಸಲ್ಲಿಕೆಗೆ ಬೇಕಾಗುವ ಪ್ರಮುಖ :

• 10ನೇ ತರಗತಿಯ ಅಂಕಪಟ್ಟಿ
• ಪಿಯುಸಿ ಅಂಕಪಟ್ಟಿ
• ನಿಮ್ಮ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್
• ಅಭ್ಯರ್ಥಿಯ ಫೋಟೋ
• ದೂರವಾಣಿ ಸಂಖ್ಯೆ ಮತ್ತು ಮೇಲ್ ಐಡಿ
• ಇಲಾಖೆ ನೀಡಿರುವ ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿ ಮತ್ತು ಇತರೆ ದಾಖಲಾತಿಗಳು

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಅರ್ಜಿ ಶುಲ್ಕದ ವಿವರಣೆ :

ಅರ್ಜಿಯ ಶುಲ್ಕ:
• ಸಾಮಾನ್ಯ ವರ್ಗದವರಿಗೆ ಹಾಗೂ ಪ್ರವರ್ಗ 2a / 2b / 3a / 3b ಅಭ್ಯರ್ಥಿಗಳಿಗೆ ಇನ್ನೂರು ರೂಪಾಯಿ ಹಾಗೂ 20 ರೂಪಾಯಿ ಸೇವಾ ಶುಲ್ಕ.
• ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಪ್ರವರ್ಗ1 ಅಭ್ಯರ್ಥಿಗಳಿಗೆ 100 ಅರ್ಜಿ ಶುಲ್ಕ ರೂ.20 ಸೇವಾ ಶುಲ್ಕ

ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು :

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 20 ಅಕ್ಟೋಬರ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 23 ನವಂಬರ್ 2022

Apply Link : Click

Notification Link : Click

ಸೂಚನೆ:
ಕರ್ನಾಟಕ ಅರಣ್ಯ ಇಲಾಖೆಯ ಹುದ್ದೆಗಳಾದ ವಲಯ ಅರಣ್ಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯು ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಗಮನಿಸಿ ಸ್ಪಷ್ಟವಾಗಿ ಓದಿ ತದನಂತರ ಅರ್ಜಿಯನ್ನು ಸಲ್ಲಿಸಬೇಕು.

ಮುಖ್ಯ ಪದಗಳು:
ನಾವು ನೀಡಿರುವ ಈ ಉದ್ಯೋಗ ಮಾಹಿತಿಯು ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ಮೂಲಕ ಹಂಚಿಕೊಳ್ಳಿ ಆದಷ್ಟು ಉದ್ಯೋಗ ಮಾಹಿತಿಯನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಶೇರ್ ಮಾಡಿ .