ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಇಲಾಖೆ ನೇಮಕಾತಿ 2023 ಇಲಾಖೆಯಲ್ಲಿ ಖಾಲಿ ಇರುವ ಚಾಲಕ / ಪಂಪ್ ಆಪರೇಟರ್ ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ 10ನೇ ತರಗತಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಿಸಿದ ವಯೋಮಿತಿ ವಿವರಣೆ / ಆಯ್ಕೆ ವಿಧಾನ / ಅರ್ಜಿ ಸಲ್ಲಿಸುವ ವಿಧಾನ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
CISF Recruitment 2023
ನೇಮಕಾತಿ ಇಲಾಖೆ ಹೆಸರು :
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ( CISF )
ಹುದ್ದೆಗಳ ಹೆಸರು :
• ಕಾನ್ಸ್ಟೇಬಲ್ / ಚಾಲಕ : 183 ಹುದ್ದೆಗಳು
• ಕಾನ್ಸ್ಟೇಬಲ್ / ಡ್ರೈವರ್ ಕಮ್ ಪಂಪ್ ಆಪರೇಟರ್ : 268 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ :
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಇಲಾಖೆಯಲ್ಲಿ ಒಟ್ಟು 451 ಹುದ್ದೆಗಳ ನೇಮಕಾತಿಗಾಗಿ ಇಲಾಖೆಯು ಅರ್ಜಿಯನ್ನು ಆಹ್ವಾನಿಸಲಾಗಿದೆ.
ಶೈಕ್ಷಣಿಕ ವಿದ್ಯಾರ್ಹತೆ :
ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಇಲಾಖೆಯ ನಿಯಮಗಳ ಅನುಸಾರ 10ನೇ ತರಗತಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಹಾಗೂ ಹೆವಿ ಟ್ರಾನ್ಸ್ಪೋರ್ಟ್ ವೆಹಿಕಲ್, ಲೈಟ್ ವೆಹಿಕಲ್, ಮೋಟಾರ್ ಚಲಾನೆಯಲ್ಲಿ ಮೂರು ವರ್ಷ ಅನುಭವ ಹೊಂದಿರಬೇಕು. ಹೆಚ್ಚಿನ ಮಾಹಿತಿ ಪಡೆಯಲು ಅಭ್ಯರ್ಥಿಗಳು ಅಧಿಸೂಚನೆಯನ್ನು ಗಮನಿಸಿ.
ವಿಶೇಷ ಸೂಚನೆ:
ನಾವು ಒದಗಿಸುವ ಎಲ್ಲಾ ಉದ್ಯೋಗದ ಮಾಹಿತಿ ಸಂಪೂರ್ಣವಾಗಿ ಉಚಿತವಾಗಿದ್ದು ಯಾವುದೇ ಅಭ್ಯರ್ಥಿಗಳಿಂದ ಹಣವನ್ನು ತೆಗೆದುಕೊಂಡಿರುವುದಿಲ್ಲ ಹಾಗೂ ತೆಗೆದುಕೊಳ್ಳುವುದಿಲ್ಲ ಒಂದು ವೇಳೆ Karnataka News Hunter ಹೆಸರಿನಿಂದ ಯಾರಾದರೂ ನಿಮಗೆ ಹಣ ಕೇಳಿದ್ದಲ್ಲಿ ಕೂಡಲೇ ತಾವು ನಮ್ಮ ಇಮೇಲ್ ವಿಳಾಸಕ್ಕೆ ಸಂದೇಶವನ್ನು ಕಳಿಸಿ ನಮ್ಮ ಗಮನಕ್ಕೆ ತರತಕ್ಕದ್ದು.
ವೇತನ ಶ್ರೇಣಿ :
ಇಲಾಖೆಯಲ್ಲಿ ಖಾಲಿ ಇರುವ ಚಾಲಕ ಹಾಗೂ ಪಂಪ್ ಆಪರೇಟರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳು ಅನುಸಾರ 21,700 – 69,100/-ವೇತನ ನೀಡಲಾಗುತ್ತದೆ.
ದೇಹದಾರ್ಢ್ಯತೆ:
ಈ ಕುರಿತು ಮಾಹಿತಿ ಪಡೆಯಲು ನಾವು ನೀಡಿರುವ ಇಲಾಖೆಯ ಅಧಿಸೂಚನೆಯನ್ನು ಪರಿಶೀಲಿಸಿ.
ವಯಸ್ಸಿನ ಮಿತಿ :
ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 21 ವರ್ಷ ಗರಿಷ್ಠ ವಯಸ್ಸು 27 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಸಹ ಇರುತ್ತದೆ.
CISF Application Fee 2023
Application Fee
SC / ST and ex-serviceman : 00/-
Genera/OBC candidate : 100/-
ಆಯ್ಕೆ ವಿಧಾನ :
ಕಾನ್ಸ್ಟೇಬಲ್ ಹಾಗೂ ಪಂಪ್ ಆಪರೇಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ದೈಹಿಕ ಪರೀಕ್ಷೆ / ಸ್ಕಿಲ್ ಟೆಸ್ಟ್ / ಸ್ಪರ್ಧಾತ್ಮಕ ಪರೀಕ್ಷೆ / ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ
CISF Recruitment 2023 – How To Appply
ಅರ್ಜಿ ಸಲ್ಲಿಸುವ ವಿಧಾನ :
ಅಭ್ಯರ್ಥಿಯು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 1 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 2 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 3 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 4 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ
CISF Recruitment 2023 – Important Information
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 23-ಜನವರಿ-2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 22-ಫೆಬ್ರುವರಿ-2023
Apply Link : Click
Notification Link : Click
ಸೂಚನೆ :
ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಮುನ್ನ ಸಂಪೂರ್ಣವಾಗಿ ಇಲಾಖೆ, ವರ್ಣಿಸಿರುವ ಅಧಿಸೂಚನೆಯನ್ನು ಓದಿ ಸ್ಪಷ್ಟವಾಗಿ ಅರ್ಥೈಸಿಕೊಂಡ ನಂತರ ಸಲ್ಲಿಸತಕ್ಕದ್ದು.