Gadaga DC Office Recruitment 2022 – Apply Offline for 58 Loader, Cleaner Posts In Karnataka

ಗದಗ ಜಿಲ್ಲೆ ನೇಮಕಾತಿ 2022 ಗದಗ ಜಿಲ್ಲೆಯ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯತಿಯಲ್ಲಿ ಖಾಲಿ ಇರುವ 58 ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಗದಗ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಯಾವುದೇ ರೀತಿಯ ವಿದ್ಯಾರ್ಹತೆ ಅನ್ವಯಿಸುವುದಿಲ್ಲ ಅಭ್ಯರ್ಥಿಗಳಿಗೆ ಕನ್ನಡ ಮಾತನಾಡಲು, ಕನ್ನಡ ಬರೆಯಲು ಗೊತ್ತಿದ್ದರೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಿಸಿದ ವೇತನ ಶ್ರೇಣಿ / ವಯೋಮಿತಿ ವಿವರಣೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಗದಗ ಜಿಲ್ಲೆ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ವಿವರಣೆ :

ನೇಮಕಾತಿ ಇಲಾಖೆ ಹೆಸರು :
ಗದಗ ಜಿಲ್ಲಾ ಅಧಿಕಾರಿ ಕಚೇರಿ ನೇಮಕಾತಿ

ಹುದ್ದೆಗಳ ಹೆಸರು :
• ಲೋಡರ್ : 47 ಹುದ್ದೆಗಳು
• ಕ್ಲೀನರ್ : 11 ಹುದ್ದೆಗಳು

ಒಟ್ಟು ಹುದ್ದೆಗಳ ಸಂಖ್ಯೆ :
ಗದಗ ಜಿಲ್ಲಾ ಅಧಿಕಾರಿ ಕಚೇರಿಯಲ್ಲಿ ಒಟ್ಟು 58 ಹುದ್ದೆಗಳು ಖಾಲಿ ಇವೆ.

ವೇತನ ಶ್ರೇಣಿ :
ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅನುಗುಣವಾಗಿ ಪ್ರತಿ ತಿಂಗಳಿಗೆ 17000 ದಿಂದ 28,950 ನೀಡಲಾಗುತ್ತದೆ.

ಗದಗ ಜಿಲ್ಲಾ ಅಧಿಕಾರಿ ಕಚೇರಿ ಇಲಾಖೆ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ಅರ್ಹತೆ ವಿವರಣೆ :

ಶೈಕ್ಷಣಿಕ ವಿದ್ಯಾರ್ಹತೆ :
ಇಲಾಖೆಯ ನಿಯಮಗಳ ಅನುಸಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶೈಕ್ಷಣಿಕ ವಿದ್ಯಾರ್ಹತೆ ಅನ್ವಯಿಸುವುದಿಲ್ಲ.
• ಕನ್ನಡ ಮಾತನಾಡಲು ಗೊತ್ತಿರಬೇಕು
• ಆಯಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲೋಡರ್ / ಕ್ಲೀನರ್ ಹುದ್ದೆಯಲ್ಲಿ ಕೆಲಸ ಮಾಡುತ್ತಿರುವ ಕ್ಷೇಮ ಅಭಿವೃದ್ದಿ / ದಿನಗೂಲಿ / ಗುತ್ತಿಗೆ / ಹೊರಗುತ್ತಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಕಾರ್ಯದಡಿ ಹಾಲಿ ಕಾರ್ಯ ನಿರ್ವಹಿಸಿರುವ ಹಾಗೂ ಈ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ ಕನಿಷ್ಠ ಎರಡು ವರ್ಷಗಳ ಸೇವೆಯಲ್ಲಿ ಮುಂದುವರೆದಿರುವ ನೌಕರರು ಮಾತ್ರ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ.

ವಯೋಮಿತಿ ವಿವರಣೆ :
ಗದಗ ಜಿಲ್ಲಾ ಅಧಿಕಾರಿ ಕಚೇರಿಯ ಅಧಿಕೃತ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ಗರಿಷ್ಠ ವಯೋಮಿತಿ 55 ವರ್ಷ ನಿಗದಿಪಡಿಸಲಾಗಿದೆ ಮೀಸಲಾತಿ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಆಯ್ಕೆ ವಿಧಾನ :
ಇಲಾಖೆಯ ನಿಯಮಗಳ ಅನುಸಾರ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ

Join Now

ಅರ್ಜಿ ಸಲ್ಲಿಸುವ ವಿಧಾನ :
• ಗದಗ ಜಿಲ್ಲಾ ಅಧಿಕಾರಿ ಕಚೇರಿ ಇಲಾಖೆಯ ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವ ಹಾಗೆ ಅರ್ಜಿಯನ್ನ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಖುದ್ದಾಗಿ ಹಾಜರಾಗಿ ಅರ್ಜಿಯನ್ನು ಇಲಾಖೆಗೆ ಸಲ್ಲಿಸಬಹುದು. ಅಥವಾ
• ಅಭ್ಯರ್ಥಿಗಳು ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಪಡೆದುಕೊಂಡು ಅಲ್ಲಿ ಕೇಳಿರುವ ಮಾಹಿತಿಯನ್ನು ಭರ್ತಿ ಮಾಡಿ ಬೇಕಾಗುವ ಅಗತ್ಯ ದಾಖಲಾತಿಗಳನ್ನು ಲಗತಿಸಿ ಅರ್ಜಿಯನ್ನು ಅಂಚೆ ಮೂಲಕ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಪಡೆಯುವ ವಿಳಾಸ :
ಜಿಲ್ಲಾ ನಗರಾಭಿವೃದ್ಧಿ ಕೋಶ, ಕೊಠಡಿ ಸಂಖ್ಯೆ: 123, 1 ನೇ ಮಹಡಿ, ಜಿಲ್ಲಾಧಿಕಾರಿಗಳ ಕಚೇರಿ, ಗದಗ ಅಥವಾ ಸಂಬಂಧಪಟ್ಟ ನಗರ ಸ್ಥಳೀಯರಿಂದ ಪಡೆಯಬಹುದು.

ಅರ್ಜಿ ಸಲ್ಲಿಸುವ ವಿಳಾಸ :
ಜಿಲ್ಲಾಧಿಕಾರಿಗಳ ಕಚೇರಿ ಜಿಲ್ಲಾ ನಗರಾಭಿವೃದ್ಧಿ ಕೋಶ,
ಗದಗ, ಕೊಡಿ ಸಂಖ್ಯೆ 123, 1ನೇ ಮಹಡಿ

ಗದಗ ಜಿಲ್ಲಾ ನೇಮಕಾತಿ 2022 ಹುದ್ದೆಗಳಿಗೆ ಸಂಬಂಧಿಸಿದ ವಿವರಣೆ :

ಅರ್ಜಿ ಶುಲ್ಕ :
ಸಾಮಾನ್ಯ ವರ್ಗದವರಿಗೆ : ರೂ.300
ಪ್ರವರ್ಗ 2a / 2b / 3a / 3b ಅಭ್ಯರ್ಥಿಗಳಿಗೆ : 300
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ 1 ಹಾಗೂ ಮಹಿಳಾ ಅಭ್ಯರ್ಥಿಗಳಿಗೆ 100 ರೂಪಾಯಿ.
ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂಪಾಯಿ 50.

ಅರ್ಜಿ ಶುಲ್ಕ ಪಾವತಿ ಮಾಡುವ ವಿಧಾನ:
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಇಲಾಖೆಯ ಅಧಿಕೃತ ವಿಳಾಸಕ್ಕೆ ಡಿಡಿ ಮುಖಾಂತರ ಸಲ್ಲಿಸಬೇಕು ಹೆಚ್ಚಿನ ಮಾಹಿತಿ ಪಡೆಯಲು ಈಗಲೇ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಅಧಿಸೂಚನೆಯ ಗಮನಿಸಿ.

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 10 ನವಂಬರ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 28 ನವಂಬರ್ 2022

ಉದ್ಯೋಗದ ಸ್ಥಳ : ಕರ್ನಾಟಕ – ಗದಗ

Notification Link : Click

Apply Link :Click

ಸೂಚನೆ :
ಗದಗ ಜಿಲ್ಲಾ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಗಮನಿಸಿ ಸ್ಪಷ್ಟವಾಗಿ ತಿಳಿದುಕೊಂಡು ತದನಂತರ ಅರ್ಜಿಯನ್ನು ಸಲ್ಲಿಸಬಹುದು.

ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ಇಷ್ಟವಾಗಿದ್ದರೆ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಪ್ ಮತ್ತು ಫೇಸ್ಬುಕ್ ಗ್ರೂಪ್ ಮೂಲಕ ಹಂಚಿಕೊಳ್ಳಿ.

Spread the love