ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇಲಾಖೆ ನೇಮಕಾತಿ 2023 ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಸಹಾಯಕ/ ಎಸ್ಡಿಎ/ ಎಫ್ ಡಿ ಎ/ ಹೀಗೆ ಹಲವಾರು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆ ನಿಗದಿಪಡಿಸಿರುವ ಕೊನೆ ದಿನಾಂಕದೊಳಗಾಗಿ ಅರ್ಜಿಯನ್ನು ಸಲ್ಲಿಸಬಹುದು. ವಿದ್ಯೆಗಳಿಗೆ ಸಂಬಂಧಿಸಿದ ಆಯ್ಕೆ ವಿಧಾನದ ವಿವರಣೆ / ಅರ್ಜಿ ಸಲ್ಲಿಸುವ ವಿಧಾನ / ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
kea recruitment 2023 notification pdf
ನೇಮಕಾತಿ ಇಲಾಖೆ ಹೆಸರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ
ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ
ಹುದ್ದೆಗಳ ಹೆಸರು :
1. ಕಲ್ಯಾಣ ಅಧಿಕಾರಿ ಒಟ್ಟು 12 ಹುದ್ದೆಗಳು
2. ಕ್ಷೇತ್ರ ನಿರೀಕ್ಷಕರು ಒಟ್ಟು 60 ಹುದ್ದೆಗಳು
3. ಆಪ್ತ ಸಹಾಯಕರು 2 ಹುದ್ದೆಗಳು
4. ದ್ವಿತೀಯ ದರ್ಜೆ ಸಹಾಯಕರು 100 ಹುದ್ದೆಗಳು
5. ಪ್ರಥಮ ದರ್ಜೆ ಸಹಾಯಕರು 12 ಹುದ್ದೆಗಳು
kea recruitment 2023 overview
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ
1. ಸಹಾಯಕ ವ್ಯವಸ್ಥಾಪಕರು 10 ಹುದ್ದೆಗಳು
2. ಗುಣಮಟ್ಟ ನಿರೀಕ್ಷಕರು 23 ಹುದ್ದೆಗಳು
3. ಹಿರಿಯ ಸಹಾಯಕರು ( ಲೆಕ್ಕ) 33 ಹುದ್ದೆಗಳು
4. ಹಿರಿಯ ಸಹಾಯಕರು 57 ಹುದ್ದೆಗಳು
5. ಕಿರಿಯ ಸಹಾಯಕರು 263 ಹುದ್ದೆಗಳು
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಿಗಳ ವಿಶ್ವವಿದ್ಯಾಲಯ. ಬೆಂಗಳೂರು
1. ಜೂನಿಯರ್ ಪ್ರೋಗ್ರಾಮರ್ ( ಗ್ರೂಪ್ ಬಿ )
2. ಸಹಾಯಕ ಇಂಜಿನಿಯರ್ ( ಸಿವಿಲ್ ) ( ಗ್ರೂಪ್ ಬಿ )
3. ಸಹಾಯಕ ಗ್ರಂಥಪಾಲಕ ( ಗ್ರೂಪ್ ಸಿ )
4. ಸಹಾಯಕ ( ಗ್ರೂಪ್ ಸಿ )
5. ಕಿರಿಯ ಸಹಾಯಕ ( ಗ್ರೂಪ್ ಸಿ )
ಕರ್ನಾಟಕ ರಾಜ್ಯ ವಿದ್ಯುತ್ಮಾನ ಅಭಿವೃದ್ಧಿ ನಿಗಮ :
1. ಸಹಾಯಕ ವ್ಯವಸ್ಥಾಪಕರು ( ತಾಂತ್ರಿಕ ) ಗ್ರೂಪ್ ಬಿ 02 ಹುದ್ದೆಗಳು
2. ಸಹಾಯಕ ವ್ಯವಸ್ಥಾಪಕರು ( ತಾಂತ್ರಿಕೇತರ ) ಗ್ರೂಪು ಬಿ 01 ಹುದ್ದೆ
3. ಆಪ್ತ ಕಾರ್ಯದರ್ಶಿ ಗ್ರೂಪ್ ಸಿ 01 ಹುದ್ದೆಗಳು
4. ಹಿರಿಯ ಸಹಾಯಕರು ( ತಾಂತ್ರಿಕ ) ಗ್ರೂಪ್ ಸಿ 01 ಹುದ್ದೆ
5. ಹಿರಿಯ ಸಹಾಯಕರು ( ತಾಂತ್ರಿಕೇತರ ) ಗ್ರೂಪ್ ಸಿ 02 ಹುದ್ದೆಗಳು
6. ಸಹಾಯಕ ( ತಾಂತ್ರಿಕ ) ಗ್ರೂಪ್ ಸಿ 01 ಹುದ್ದೆಗಳು
7. ಸಹಾಯಕರು ( ತಾಂತ್ರಿಕೇತರ ) ಗ್ರೂಪ್ ಸಿ 01 ಊ
ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ ಬೆಂಗಳೂರು ಈ ವಿಭಾಗದಲ್ಲಿ
1. ಸಹಾಯಕ ವ್ಯವಸ್ಥಾಪಕರು ಒಟ್ಟು 23 ಹುದ್ದೆಗಳು
2. ಮೇಲ್ವಿಚಾರಕರು 23 ಹುದ್ದೆಗಳು
3. ಪದವೀಧರ ಗುಮಾಸ್ತರು 06 ಹುದ್ದೆಗಳು
4. ಗುಮಾಸ್ತರು 13 ಹುದ್ದೆಗಳು
5. ಮಾರಾಟ ಪ್ರತಿನಿಧಿ / ಪ್ರೋಗ್ರಾಮರ್ 06 ಹುದ್ದೆಗಳು
ಮುಖ್ಯ ಸೂಚನೆ :
ಅಧಿಸೂಚನೆಯಲ್ಲಿ ತಿಳಿಸಿರುವ ಹುದ್ದೆಗಳ ಸಂಖ್ಯೆ ಮತ್ತು ವರ್ಗೀಕರಣವು ಸರ್ಕಾರದ ಆದೇಶಗಳಿಗೆ ಒಳಪಟ್ಟಿರುತ್ತದೆ. ಈ ಮೇಲ್ಕಂಡ ಸರ್ಕಾರಿ ಇಲಾಖೆ ಅಥವಾ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ, ಶೈಕ್ಷಣಿಕ ವಿದ್ಯಾರ್ಹತೆ, ಹುದ್ದೆಗಳ ವರ್ಗೀಕರಣ, ಸ್ಪರ್ಧಾತ್ಮಕ ಪರೀಕ್ಷೆ ವಿಧಾನ ಹಾಗೂ ನೇಮಕಾತಿಗೆ ಸಂಬಂಧಿಸಿದ ಇತರೆ ಎಲ್ಲಾ ಷರತ್ತುಗಳನ್ನು ಒಳಗೊಂಡಂತೆ ವಿವರವಾದ ಪ್ರಕಟಣೆಯನ್ನು ಪ್ರಾಧಿಕಾರ ವೆಬ್ಸೈಟ್ನಲ್ಲಿ ಪ್ರಕಟಿಸಲಾಗುತ್ತದೆ.
ವೇತನ ಶ್ರೇಣಿ ವಿವರಣೆ :
ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳ ಅನ್ವಯ ಕನಿಷ್ಠ 21900 ರಿಂದ ಗರಿಷ್ಠ 97,000 ವೇತನ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ : ಅಭ್ಯರ್ಥಿಯು ಇಲಾಖೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಲು ಆಸಕ್ತಿ ಹಾಗೂ ಅರ್ಹತೆಯನ್ನು ಹೊಂದಿದ್ದರೆ ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಸ್ಪಷ್ಟವಾಗಿ ಓದಿಕೊಂಡು ಹುದ್ದೆಗಳಿಗೆ ಅಗತ್ಯ ಇರುವ ಅಥವಾ ಪೂರಕ ದಾಖಲಾತಿಗಳನ್ನ ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸ ಬೇಕು. ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ವೇಳೆ ಏನಾದರೂ ತಂತ್ರಜ್ಞಾನ ದೋಷಗಳು ಕಂಡುಬಂದರೆ ಅರ್ಜಿಯನ್ನು ಕೆಲವು ಸಮಯದ ನಂತರ ಸಲ್ಲಿಸಿ.
ಹಂತ 1 : ಅಭ್ಯರ್ಥಿಯ ಮೊದಲನೇದಾಗಿ ಇಲಾಖೆಯ ಅಂತರ್ಜಾಲಕ್ಕೆ ಭೇಟಿ ನೀಡಿ ಅಥವಾ ನಾವು ಈ ಕೆಳಗೆ ನೀಡಿರುವ ಇಲಾಖೆಯ ಅಧಿಕೃತ ವೆಬ್ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಹಂತ 2 : ಅರ್ಜಿಯನ್ನು ಸಲ್ಲಿಸುವ ವೇಳೆ ಬೇಕಾಗುವ ದಾಖಲಾತಿಗಳನ್ನು ಸಿದ್ಧವಾಗಿರಿಸಿ. ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸದ ಪುರಾವೆ, ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳು, ಮೊಬೈಲ್ ಸಂಖ್ಯೆ ಇಮೇಲ್ ಐಡಿ ಇತ್ಯಾದಿ ಮುಂತಾದವುಗಳನ್ನು ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ನೀಡಬೇಕು.
ಹಂತ 3 : ಅರ್ಜಿಯನ್ನು ಸಲ್ಲಿಸಬೇಡಿ ಬೇಕಾಗುವ ಪ್ರಮುಖ ದಾಖಲಾತಿಗಳನ್ನ ಸಲ್ಲಿಸುವಂತೆ ಸೂಚಿಸಿದರೆ ಅವುಗಳನ್ನ ಅಗತ್ಯವಾಗಿ ಲಗತ್ತಿಸಬೇಕು.
ಹಂತ 4 : ಅಭ್ಯರ್ಥಿಯು ಅರ್ಜಿಯನ್ನು ಸಲ್ಲಿಸಿದ ಬಳಿಕ ಕೊನೆಯದಾಗಿ ನೀವು ನೀಡಿದ ಅಥವಾ ನೀವು ನಮೂದಿಸಿದ ಮಾಹಿತಿಯು ಸರಿಯಾಗಿದೆ ಎಂದು ಪರಿಶೀಲಿಸಿ ತದನಂತರ ಅರ್ಜಿಯನ್ನ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಅರ್ಜಿ ಸಲ್ಲಿಸಿದ ನಮೂನೆಯನ್ನ ಡೌನ್ಲೋಡ್ ಮಾಡಿಕೊಂಡು ಮುದ್ರಣ ಮಾಡಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ.
ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವಯೋಮಿತಿ ವಿವರಣೆಯನ್ನು ನಾವು ನೀಡಿರುವ ಇಲಾಖೆಯ ಅಧಿಕೃತ ವೆಬ್ಸೈಟ್ ಅಥವಾ ಅಧಿಸೂಚನೆಯನ್ನು ಗಮನಿಸಿ.
( ಇದು ಇಲಾಖೆಯ ಸಣ್ಣ ಅಧಿಸೂಚನೆಯಾಗಿದ್ದು ಮುಂದಿನ ದಿನಮಾನ ಅಂದರೆ ದಿನಾಂಕ 05 ಏಪ್ರಿಲ್ 2023 ರಂದು ಇಲಾಖೆ ವಿವರವಾದ ಮಾಹಿತಿಯುಳ್ಳ ಪ್ರಕಟಿಸಲಾಗುತ್ತದೆ )
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 07 ಏಪ್ರಿಲ್ 2023
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 17 ಮೇ 2023
Notification Link : Click
Karnataka news hunter ಅಂತರ್ಜಾಲದ ಉಪಯೋಗಗಳು
1. Karnataka news hunter ಅಂತರ್ಜಾಲವು ಕರ್ನಾಟಕ ಹಾಗೂ ಭಾರತದ ಯಾವುದೇ ಜಿಲ್ಲೆಯಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನ ನೀಡುತ್ತದೆ.
2. ಈ ಅಂತರ್ಜಾಲವು ಕರ್ನಾಟಕ ಹಾಗೂ ಕನ್ನಡಿಗರಿಗಾಗಿ ಸಿದ್ಧವಾದ ಅಂತರ್ಜಾಲವಾಗಿದೆ. ಇಲ್ಲಿ ಯಾವುದೇ ರೀತಿಯ ಸುಳ್ಳು ಅಥವಾ ಮೋಸದ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ.
3. Karnataka news hunter ಅಂತರ್ಜಾಲ ಇದು ಒಂದು ನಂಬಿಕೆಯ ಅಂತರ್ಜಾಲವಾಗಿದ್ದು. ಉದ್ಯೋಗ ಮಾಹಿತಿ ಹಾಗೂ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉಚಿತವಾಗಿ ಮಾಹಿತಿಯನ್ನು ಒದಗಿಸುತ್ತದೆ ಇಲ್ಲಿ ಯಾವುದೇ ರೀತಿಯ ಹಣವನ್ನು ಕಟ್ಟುವ ಅವಶ್ಯಕತೆ ಇರುವುದಿಲ್ಲ.
4. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರ ಮತ್ತು ಖಾಸಗಿ ಉದ್ಯೋಗ ಮಾಹಿತಿಯನ್ನು ಬರವಣಿಗೆಯ ಮೂಲಕ ಜನರೊಂದಿಗೆ ಹಂಚಿಕೊಳ್ಳುವ ಅಂತರ್ಜಾಲವಾಗಿದೆ. ಇಲ್ಲಿ ಏನಾದರೂ ದೋಷಗಳು ಕಂಡು ಬಂದಲ್ಲಿ ದಯವಿಟ್ಟು ನೀವು ನಮಗೆ ಮಾಹಿತಿಯನ್ನು ನೀಡಿ. ನಾವು ಮಾಡುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ನೀವು ಸಹಾಯವನ್ನು ಮಾಡುತ್ತೀರಿ.
5. ಯಾವುದೇ ಮಾಹಿತಿಯನ್ನು ನೀವು ಓದಿ ಆ ಮಾಹಿತಿಯನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಿ ಏಕೆಂದರೆ ಉದ್ಯೋಗ ಮಾಹಿತಿಯು ಪ್ರತಿಯೊಬ್ಬರಿಗೂ ಸಹಾಯವಾಗುವಂತ ಮಾಹಿತಿಯಾಗಿದ್ದು ನೀವು ಬೇರೆಯವರಿಗೆ ಮಾಡುವ ಸಹಾಯವಾಗುತ್ತದೆ.