Mysore district Gram Panchayat recruitment 2024: Apply Online For 19 Posts

Overview of Mysore district Gram Panchayat recruitment 2024

Mysore district Gram Panchayat recruitment 2024: ಮೈಸೂರು ಜಿಲ್ಲೆಯಲ್ಲಿ ಉದ್ಯೋಗ ಬಯಸುವ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಸಿಹಿ ಸುದ್ದಿ. ಮೈಸೂರು ಗ್ರಾಮ ಪಂಚಾಯಿತಿ ಇಲಾಖೆಗಳಲ್ಲಿ ಅಗತ್ಯವಿರುವ ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತಿ ಹಾಗೂ ಅರ್ಹತೆ ಪಡೆದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಇಲಾಖೆ ನಿಗದಿಪಡಿಸಿದ ಕೊನೆ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ವಿಧಾನದ, ವಿವರಣೆ ಅರ್ಜಿ ಸಲ್ಲಿಸುವ ವಿಧಾನ, ವೇತನ ಶ್ರೇಣಿ ಹಾಗೂ ಉದ್ಯೋಗದ ಸ್ಥಳ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

Mysore district Gram Panchayat recruitment 2024 vacancy details

ನೇಮಕಾತಿ ಇಲಾಖೆ ಹೆಸರು:
ಮೈಸೂರು ಜಿಲ್ಲಾ ಗ್ರಾಮ ಪಂಚಾಯತ್

ಹುದ್ದೆಗಳ ಹೆಸರು:
ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರು

ಉದ್ಯೋಗದ ಸ್ಥಳ: ಮೈಸೂರು ಜಿಲ್ಲೆ

ವೇತನ ಶ್ರೇಣಿ:
ಮೈಸೂರು ಜಿಲ್ಲಾ ಗ್ರಾಮ ಪಂಚಾಯಿತ್ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರು ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಇಲಾಖೆಯ ನಿಯಮಗಳು ಅನುಸಾರ ವೇತನ ಶ್ರೇಣಿ ನಿಗದಿಪಡಿಸಲಾಗಿದೆ.

Eligibility criteria for library supervisor posts

ವಯೋಮಿತಿ:
ಮೈಸೂರು ಜಿಲ್ಲಾ ಗ್ರಾಮ ಪಂಚಾಯಿತ್ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮೀರಿರಬಾರದು ಹಾಗೂ ಗರಿಷ್ಠ 30 ವರ್ಷ ನಿಗದಿಪಡಿಸಲಾಗಿದೆ. ಇಲಾಖೆಯ ನಿಯಮಗಳು ಅನುಸಾರ ವಯೋಮಿತಿಯಲ್ಲಿ ಸಡಲಿಕ್ಕೆ ನೀಡಲಾಗಿದೆ.

ವಯೋಮಿತಿ ಸಡಿಲಿಕೆ ವಿವರಣೆ:
1. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ ಒಂದು ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷ ನಿಗದಿಪಡಿಸಿದೆ.
2. ಪ್ರವರ್ಗ 2A/ 2B/ 3A/ 3B ಅಭ್ಯರ್ಥಿಗಳಿಗೆ 38 ವರ್ಷ ನಿಗದಿಪಡಿಸಿದೆ.

ಶೈಕ್ಷಣಿಕ ಅರ್ಹತೆ:
ಮೈಸೂರು ಜಿಲ್ಲಾ ಗ್ರಾಮ ಪಂಚಾಯಿತಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಇದರ ಜೊತೆಗೆ ಸರ್ಟಿಫಿಕೇಟ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣ ಪತ್ರ ಪಡೆದಿರಬೇಕು ಹಾಗೂ ಕನಿಷ್ಠ ಮೂರು ತಿಂಗಳ ಕಂಪ್ಯೂಟರ್ ಕೋರ್ಸ್ ನಲ್ಲಿ ಪಾಸ್ ಆಗಿರಬೇಕು. ಶೈಕ್ಷಣಿಕ ಅರ್ಹತೆಯ ಮಾಹಿತಿ ಕುರಿತು ಇಲಾಖೆಯ ಅಧಿಸೂಚನೆ ಗಮನಿಸಿ.

Join Now

ಉದ್ಯೋಗದ ಇತರೆ ಮಾಹಿತಿ: ಗ್ರಂಥಾಲಯ ಮೇಲ್ವಿಚಾರಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅದೇ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ವಾಸಿಸುವ ವ್ಯಕ್ತಿ ಆಗಿರಬೇಕು. ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವಾಸಿಯು ಇರಬೇಕು ಇಲ್ಲದೆ ಇದ್ದಲ್ಲಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ತಾಲೂಕು ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪರಿಗಣಿಸಲಾಗುತ್ತದೆ.

How to apply for Mysore district Gram Panchayat recruitment 2024

ಅರ್ಜಿ ಸಲ್ಲಿಕೆ ವಿಧಾನ:
ಅಭ್ಯರ್ಥಿಗಳು ಅರ್ಜಿಯನ್ನು ಮೈಸೂರು ಜಿಲ್ಲಾ ಗ್ರಾಮ ಪಂಚಾಯಿತಿ ಇಲಾಖೆಯ ಅಧಿಕೃತ ಅಂತರ್ಜಾಲಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.
ಮೊದಲನೇ ಹಂತ: ಅಭ್ಯರ್ಥಿಗಳು ನಾವು ನೀಡಿರುವ ಅರ್ಜಿ ಸಲ್ಲಿಸುವ ಲಿಂಕ್ ಮೂಲಕ ಕ್ಲಿಕ್ ಮಾಡಿ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಸಂಪೂರ್ಣವಾಗಿ ಓದಿ ಅದನ್ನು ಅರ್ಥೈಸಿಕೊಂಡು ಅರ್ಜಿ ಸಲ್ಲಿಸಲು ನೀವು ಅರ್ಹತೆ ಹೊಂದಿದ್ದರೆ ಖಚಿತ ಪಡಿಸಿಕೊಂಡು ಅರ್ಜಿಯನ್ನು ಸಲ್ಲಿಸಲು ಮುಂದಾಗಿ.
ಎರಡನೇ ಹಂತ: ತದನಂತರ ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ನೀವು ಅರ್ಜಿಯನ್ನು ಸಲ್ಲಿಸಿ ಎಂಬುದರ ಮೇಲೆ ಕ್ಲಿಕ್ ಮಾಡಿ ನಿಮಗೆ ಬೇಕಾದ ಉದ್ಯೋಗವನ್ನು ಆಯ್ಕೆ ಮಾಡಿಕೊಂಡು ಮುಂದುವರೆಯಿರಿ.
ಮೂರನೇ ಹಂತ: ಆ ಉದ್ಯೋಗಕ್ಕೆ ಸಂಬಂಧಿಸಿದ ಅಂದರೆ ನಿಮ್ಮ ಎಲ್ಲಾ ಅಂಕಪಟ್ಟಿಯ ಜೆರಾಕ್ಸ್ ಪ್ರತಿಗಳು, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ, ಬ್ಯಾಂಕ್ ಪಾಸ್ ಬುಕ್ ಇನ್ನಿತರ ದಾಖಲಾತಿಗಳನ್ನು ನೀವು ಸರಿಯಾಗಿ ನೋಡಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
ನಾಲ್ಕನೇ ಹಂತ: ನೀವು ಅರ್ಜಿ ಸಲ್ಲಿಸಿದ ಬಳಿಕ ನೀವು ನೀಡಿರುವ ಮಾಹಿತಿ ಸರಿಯಾಗಿದೆ ಎಂದು ಖಾತರಿ ಪಡಿಸಿಕೊಂಡು ಅದನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಹತ್ತಿರ ಇಟ್ಟುಕೊಳ್ಳಿ.

Selection process for library supervisor posts:

ಆಯ್ಕೆ ವಿಧಾನ:
ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಯಾವುದೇ ರೀತಿಯ ಲಿಖಿತ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: 03 October 2024
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ; 30 October 2024

ಮುಖ್ಯ ಪದಗಳು:
ಮೈಸೂರು ಜಿಲ್ಲಾ ಗ್ರಾಮ ಪಂಚಾಯಿತ್ ಇಲಾಖೆಯ ಹುದ್ದೆಯ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮಾಹಿತಿಯನ್ನು ದಯವಿಟ್ಟು ಎಲ್ಲರಿಗೂ ಶೇರ್ ಮಾಡಿ. ನಿಮ್ಮ ಒಂದು ಶೇರ್ ಉದ್ಯೋಗ ಬಯಸುವ ಅಭ್ಯರ್ಥಿಗಳಿಗೆ ಉಪಯೋಗವಾಗುತ್ತದೆ.

Spread the love

Leave a Comment