Anganwadi Vacancy 2022 Karnataka | Anganwadi Teacher jobs 2022 | Shivamogga district recruitment anganavadi teacher jobs 2022

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ 74 ಅಂಗನವಾಡಿ ಸಹಾಯಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಆಸಕ್ತಿ ಹಾಗೂ ಅರ್ಹತೆ ಪಡೆದ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿಯನ್ನ ಸಲ್ಲಿಸಬಹುದು. ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ/ ವೇತನ ಶ್ರೇಣಿ/ ಆಯ್ಕೆಯ ಪ್ರಕ್ರಿಯೆ/ ಉದ್ಯೋಗದ ಸ್ಥಳ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹುದ್ದೆಗಳ ವಿವರಣೆ :

ನೇಮಕಾತಿ ಇಲಾಖೆಯ ಹೆಸರು :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ ಜಿಲ್ಲೆ

ಹುದ್ದೆಗಳ ಹೆಸರು :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳ ನೇಮಕಾತಿ ನಡೆಯುತ್ತಿದೆ.

ಒಟ್ಟು ಹುದ್ದೆಗಳ ಸಂಖ್ಯೆ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಒಟ್ಟು 74 ಹುದ್ದೆಗಳು ಖಾಲಿ ಇವೆ.
• ಅಂಗನವಾಡಿ ಕಾರ್ಯಕರ್ತೆ : 13 ಹುದ್ದೆಗಳು
• ಅಂಗನವಾಡಿ ಸಹಾಯಕಿ : 61 ಹುದ್ದೆಗಳು

ವಿದ್ಯಾರ್ಹತೆ :
• ಅಂಗನವಾಡಿ ಕಾರ್ಯಕರ್ತೆ :
ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ ಪಾಸ್ ಆಗಿರಬೇಕು.

• ಅಂಗನವಾಡಿ ಸಹಾಯಕಿ :
ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ ನಾಲ್ಕನೇ ತರಗತಿ ಅಥವಾ ಗರಿಷ್ಠ ಒಂಬತ್ತನೇ ತರಗತಿಯಲ್ಲಿ ತೇರ್ಗಡೆ ಯಾಗಿದ್ದರೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನಿಗದಿಪಡಿಸಿದ ವೇತನ ಶ್ರೇಣಿ :

ವೇತನ ಶ್ರೇಣಿ :
ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಗೌರವಧನ ಆಧಾರದ ಮೇಲೆ ಮಾಸಿಕವಾಗಿ 5000 ವೇತನ ನಿಗದಿಪಡಿಸಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಗೌರವಧನ ಆಧಾರದ ಮೇಲೆ ಮಾಸಿಕವಾಗಿ 10,000 ವೇತನ ನಿಗದಿಪಡಿಸಲಾಗಿದೆ.

Join Now

ವಯಸ್ಸಿನ ಮಿತಿ :
ಅಂಗನವಾಡಿ ಸಹಾಯಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಗರಿಷ್ಠ 35 ವರ್ಷ ನಿಗದಿಪಡಿಸಲಾಗಿದೆ ಮೀಸಲಾತಿ ಅನುಗುಣವಾಗಿ ವಯಸ್ಸಿನಲ್ಲಿ ಸಡಿಲಿಕೆ ಇರುತ್ತದೆ.

ವಯಸ್ಸಿನಲ್ಲಿ ಸಡಿಲಿಕೆ :
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 40 ವರ್ಷ
ಇತರೆ ವರ್ಗದವರಿಗೆ 38 ವರ್ಷ ನಿಗದಿಪಡಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹುದ್ದೆಗಳಿಗೆ ನಿಗದಿಪಡಿಸಿದ ಅರ್ಜಿಯ ಶುಲ್ಕ :.

ಅರ್ಜಿಯ ಶುಲ್ಕ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ ಸಂಪೂರ್ಣವಾಗಿ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸುವ ವಿಧಾನ :
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಹಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು ಇದರ ಸಂಬಂಧಪಟ್ಟ ಅರ್ಜಿ ಲಿಂಕ್ ಅನ್ನ ಕೆಳಗಡೆ ನೀಡಿರುತ್ತೇನೆ.

ಆನ್ಲೈನ್ ನಲ್ಲಿ ಅರ್ಜಿಯೊಂದಿಗೆ ಲಗತಿಸಬೇಕಾದ ದಾಖಲಾತಿಗಳು :

• ಅರ್ಜಿ ನಿಗದಿತ ನಮೂನೆಯಲ್ಲಿ ( ಆನ್ಲೈನ್ )
• ಜನನ ಪ್ರಮಾಣ ಪತ್ರ ಅಥವಾ ಜನುಮ ದಿನಾಂಕ ಇರುವ ಎಸ್ ಎಸ್ ಎಲ್ ಸಿ ಅಂಕಪಟ್ಟಿ /ಇತರೆ ಜನನ ದಾಖಲಾತಿ
• ನಿಗದಿತ ವಿದ್ಯಾರ್ಥಿಯ ಅಂಕಪಟ್ಟಿ.
• ತಹಶೀಲ್ದಾರರು ಅಥವಾ ಉಪ ತಹಶೀಲ್ದಾರರಿಂದ ಪಡೆದ ಮೂರು ವರ್ಷದೊಳಗಿನ ವಾಸ ಸ್ಥಳ ಧೃಡೀಕರಣ ಪ್ರಮಾಣ ಪತ್ರ.
• ಅಂಗವಿಕಲತೆ ಪ್ರಮಾಣ ಪತ್ರ ( ಅಂಗವಿಕಲ ವೇತನ ದೃಡೀಕರಣ ಪರಿಗಣಿಸುವುದಿಲ್ಲ )
• ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ
• ಅಭ್ಯರ್ಥಿಯ ಆಧಾರ್ ಕಾರ್ಡ್.

ಆಯ್ಕೆ ವಿಧಾನ :
ಅಂಗನವಾಡಿ ಸಹಾಯಕಿ ಮತ್ತು ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯು ನೇರ ನೇಮಕಾತಿ ಮೂಲಕ ಆಯ್ಕೆ ಮಾಡಲಾಗುತ್ತದೆ (ಮೆರಿಟ್ ಲಿಸ್ಟ್ )

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು :

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ : 16 ಆಗಸ್ಟ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ : 16 ಸಪ್ಟಂಬರ್ 2022
( ಅಭ್ಯರ್ಥಿಗಳು 16 ಸಪ್ಟಂಬರ್ 2022 ಸಂಜೆ 5:00 30 ನಿಮಿಷದೊಳಗೆ ಅರ್ಜಿಯನ್ನು ಸಲ್ಲಿಸಬೇಕು ಇಲ್ಲದಿದ್ದರೆ ಅರ್ಜಿಯು ತಿರಸ್ಕಾರವಾಗುತ್ತದೆ )

 

ಸೂಚನೆ :
ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ದಯವಿಟ್ಟು ಇಲಾಖೆಯ ಅಧಿಕೃತ ವೆಬ್ಸೈಟ್ ಹಾಗೂ ಅಧಿಕೃತ ಅಧಿಸೂಚನೆಯನ್ನು ಗಮನಿಸಿ ಸ್ಪಷ್ಟವಾಗಿ ಓದಿಕೊಂಡು ತದನಂತರ ಅರ್ಜಿಯನ್ನು ಸಲ್ಲಿಸಿ.

ಮುಖ್ಯ ಪದಗಳು :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ ಅಥವಾ ಫೇಸ್ಬುಕ್ ‌ ಅಥವಾ ಟೆಲಿಗ್ರಾಂ ಹೀಗೆ ಹಲವಾರು ಸೋಶಿಯಲ್ ಮೀಡಿಯಾಗಳ ಮೂಲಕ ಈ ಮಾಹಿತಿಯನ್ನು ಹಂಚಿಕೊಳ್ಳಿ, ಆದಷ್ಟು ಉದ್ಯೋಗ ಮಾಹಿತಿ ಬಯಸುವ ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿವಮೊಗ್ಗ ಜಿಲ್ಲೆಯ ಏಳು ತಾಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹದಿಮೂರು ಅಂಗನವಾಡಿ ಕಾರ್ಯಕರ್ತೆ ಮತ್ತು 61 ಅಂಗನವಾಡಿ ಸಹಾಯಕಿರ ಗೌರವ ಸೇವೆಯ ಹುದ್ದೆಗಳಿಗೆ ಇಲಾಖೆಯು ನೇಮಕಾತಿ ಮಾಡಿಕೊಳ್ಳಲು ಅರ್ಹತೆ ಪಡೆದ ಮಹಿಳಾ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಸಂಬಂಧ ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಲು ಕೋರಿದೆ.

ಕರ್ನಾಟಕ ನ್ಯೂಸ್ ಹಂಟರ್ ಅಂತರ್ಜಾಲ ಸ್ಥಾಪನೆಗೆ ಕಾರಣವಾದ ಅಂಶಗಳು :

• ಕರ್ನಾಟಕ ನ್ಯೂಸ್ ಹಂಟರ್ ಅಂತರ್ಜಾಲ ಕರ್ನಾಟಕದವರೆಂದ ಕನ್ನಡಿಗನಿಗಾಗಿ ಅಭಿವೃದ್ಧಿ ಮಾಡಲಾಗಿದೆ.
• ಈ ಅಂತರ್ಜಾಲದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಹಾಗೂ ಖಾಸಗಿ ಸಂಸ್ಥೆಗಳು ಹೊರಡಿಸುವಂಥ ಪ್ರಮುಖ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಉಚಿತವಾಗಿ ನೀಡುತ್ತದೆ.
• ಈ ಅಂತರ ಜಲದಲ್ಲಿ ದೋಷಗಳು ಕಂಡು ಬಂದಲ್ಲಿ ದಯವಿಟ್ಟು ಆದಷ್ಟು ನಮಗೆ ಮಾಹಿತಿ ನೀಡಿ ಇದರಿಂದ ನಾವು ನಮ್ಮ ಅಂತರ್ಜಾಲವನ್ನು ಸುಧಾರಿಸುವಲ್ಲಿ ಪ್ರಯತ್ನ ಪಡುತ್ತೇವೆ.
• ಕೇವಲ ಉದ್ಯೋಗ ಮಾಹಿತಿ ಅಲ್ಲದೆ ಕ್ರಿಕೆಟ್ ಸಂಬಂಧಿತ ಹಾಗೂ ಸಿನಿಮಾಗೆ ಸಂಬಂಧಿಸಿದ ಪ್ರಮುಖ ಮಾಹಿತಿಯನ್ನು ಇಲ್ಲಿ ಕಾಣಬಹುದು.
• ಕರ್ನಾಟಕ ನ್ಯೂಸ್ ಹಂಟರ್ ಅಂತರ್ಜಾಲಕ್ಕೆ ಪುನಃ ಭೇಟಿ ನೀಡಿ

Spread the love