SBI 5008 ಹುದ್ದೆಗಳ ಬೃಹತ್ ನೇಮಕಾತಿ 2022 | SBI Recruitment 2022 | 5008 SBI Clerk Recruitment 2022

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬೃಹತ್ ನೇಮಕಾತಿ 2022 ಇಲಾಖೆಯಲ್ಲಿ ಖಾಲಿ ಇರುವ 5008 ಜೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಆಸಕ್ತಿ ಹಾಗೂ ಅರ್ಹತೆ ಪಡೆದ ಕರ್ನಾಟಕದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಅವಕಾಶವನ್ನು ಕರ್ನಾಟಕದ ಅಭ್ಯರ್ಥಿಗಳು ಆದಷ್ಟು ಸದುಪಯೋಗ ಮಾಡಿಕೊಳ್ಳಿ. ಹುದ್ದೆಗಳಿಗೆ ಸಂಬಂಧಿಸಿದ ವಿದ್ಯಾರ್ಹತೆ, ವೇತನ ಶ್ರೇಣಿ, ಉದ್ಯೋಗದ ಸ್ಥಳ, ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.

ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ ಹುಡುಕುತ್ತಿರುವ ಅಥವಾ ಉದ್ಯೋಗವನ್ನು ಬಯಸುತ್ತಿರುವ ನಿರುದ್ಯೋಗಿಗಳಿಗೆ ಈ ಒಂದು ಅವಕಾಶವನ್ನು ಬಳಸಿಕೊಳ್ಳಿ ಆದಷ್ಟು ಬೇಗ ಅರ್ಜಿಯನ್ನು ಸಲ್ಲಿಸಿ. ಅರ್ಜಿ ಸಲ್ಲಿಕೆ ಸಪ್ಟಂಬರ್ 30ರಂದು ಕೊನೆಗೊಳ್ಳುತ್ತದೆ ಆದ ಕಾರಣ ಅರ್ಹತೆ ಪಡೆದ ಪ್ರತಿಯೊಬ್ಬ ಕನ್ನಡದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿ
ಈ ಹುದ್ದೆಗಳು ಕೇಂದ್ರ ಸರ್ಕಾರದ ಅಥವಾ ಕೇಂದ್ರ ಸರಕಾರದ ಅಡಿಯಲ್ಲಿ ಬರುವ ಹುದ್ದೆಗಳಾಗಿರುತ್ತವೆ ಹಾಗೂ ಈ ಹುದ್ದೆಗಳು ಖಾಯಂ ಉದ್ಯೋಗಗಳಾಗಿರುತ್ತವೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಲಾಖೆಯ ಹುದ್ದೆಗಳ ವಿವರಣೆ :

ನೇಮಕಾತಿ ಇಲಾಖೆಯ ಹೆಸರು :
ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

ಹುದ್ದೆಗಳ ಹೆಸರು :
ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜೂನಿಯರ್ ಅಸೋಸಿಯೇಟ್ ( ಗ್ರಾಹಕ ಬೆಂಬಲ ಮತ್ತು ಮಾರಾಟ ) ಹುದ್ದೆಗಳ ನೇಮಕಾತಿ ನಡೆಯುತ್ತಿದೆ.

ಒಟ್ಟು ಹುದ್ದೆಗಳ ಸಂಖ್ಯೆ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಒಟ್ಟು 5008 ಹುದ್ದೆಗಳ ನೇಮಕಾತಿ ನಡೆಯುತ್ತಿದೆ.
( ಕರ್ನಾಟಕದಲ್ಲಿ ಒಟ್ಟು 316 ಹುದ್ದೆಗಳು ಖಾಲಿ ಇವೆ )

ವೇತನ ಶ್ರೇಣಿ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕವಾಗಿ 17,900 ರಿಂದ 47920 ವೇತನ ನಿಗದಿಪಡಿಸಲಾಗಿದೆ.

ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳಿಗೆ ಸಂಬಂಧಿಸಿದ ಶೈಕ್ಷಣಿಕ ವಿದ್ಯಾರ್ಹತೆ :

ಶೈಕ್ಷಣಿಕ ವಿದ್ಯಾರ್ಹತೆ :
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಲಾಖೆಯ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಪದವಿಯನ್ನು ಪೂರ್ಣಗೊಳಿಸಬೇಕು.

Join Now

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳಿಗೆ ಸಂಬಂಧಿಸಿದ ವಯೋಮಿತಿಯ ವಿವರಣೆ :

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇಲಾಖೆಯ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 20 ವರ್ಷ ಗರಿಷ್ಠ 28 ವರ್ಷ ನಿಗದಿಪಡಿಸಲಾಗಿದೆ. ಮೀಸಲಾತಿ ಅನುಗುಣವಾಗಿ ವಯಸ್ಸಿನಲ್ಲಿ ಸಡಿಲಿಕ್ಕೆ ನೀಡಲಾಗಿದೆ

ವಯೋಮಿತಿ ಸಡಿಲಿಕೆ :
• OBC ಅಭ್ಯರ್ಥಿಗಳಿಗೆ : 03 ವರ್ಷಗಳು
• ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 05 ವರ್ಷ
• ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ 10 ವರ್ಷ

ಅರ್ಜಿಯ ಶುಲ್ಕ :
• ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಅಭ್ಯರ್ಥಿಗಳಿಗೆ ಯಾವುದೇ ಅರ್ಜಿಯ ಶುಲ್ಕ ಇರುವುದಿಲ್ಲ
• ಸಾಮಾನ್ಯ ಅಥವಾ ಓಬಿಸಿ ಅಭ್ಯರ್ಥಿಗಳಿಗೆ 750 ಇರುತ್ತದೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹುದ್ದೆಗಳ ಆಯ್ಕೆಯ ವಿಧಾನ :

ಆಯ್ಕೆ ಪ್ರಕ್ರಿಯೆ :
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ಪೂರ್ವಭಾವಿ ಪರೀಕ್ಷೆ / ಮುಖ್ಯ ಪರೀಕ್ಷೆ / ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

SBI ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ವಿಧಾನ :

ಅರ್ಜಿ ಸಲ್ಲಿಸುವ ವಿಧಾನ :
ಆಸಕ್ತಿ ಹಾಗೂ ಅರ್ಹತೆ ಪಡೆದ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು ಈ ಹುದ್ದೆಗಳಿಗೆ ಸಂಬಂಧಿಸಿದ ಅಧಿಸೂಚನೆ ಹಾಗೂ ವೆಬ್ಸೈಟ್ ಲಿಂಕ್ ಕೆಳಗಡೆ ನೀಡಿರುತ್ತೇನೆ. ಅಲ್ಲಿಂದ ಸಹ ನೀವು ಅರ್ಜಿಯನ್ನು ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು :
• ಅರ್ಜಿ ಸಲ್ಲಿಕೆ ಆರಂಭದ ದಿನಾಂಕ 7 ಸೆಪ್ಟೆಂಬರ್ 2022
• ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 27 ಸೆಪ್ಟೆಂಬರ್ 2022

ಸೂಚನೆ :
ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಗಳು ಸಹ ಇಲಾಖೆಯ ಅಧಿಕೃತ ಅಧಿಸೂಚನೆ ಹಾಗೂ ವೆಬ್ಸೈಟ್ ಪರಿಶೀಲಿಸಿ ಸ್ಪಷ್ಟವಾಗಿ ಓದಿ ಅರ್ಥ ಮಾಡಿಕೊಂಡು ತದನಂತರದಲ್ಲಿ ಅರ್ಜಿಯನ್ನು ಸಲ್ಲಿಸಿ ಈ ಹುದ್ದೆಗಳು ಕೇಂದ್ರ ಸರ್ಕಾರದ ಉದ್ಯೋಗಗಳಾಗಿರುತ್ತವೆ ಆದಷ್ಟು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಮುಖ್ಯ ಪದಗಳು :
ನಾವು ನೀಡಿರುವ ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ಉದ್ಯೋಗ ಮಾಹಿತಿ ಬಯಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಶೇರ್ ಮಾಡಿ.

Spread the love