ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ 2022 ಕರ್ನಾಟಕ ಪೊಲೀಸ್ ಇಲಾಖೆಯ ಕಲ್ಯಾಣ ಕರ್ನಾಟಕ ವೃಂದ ಮತ್ತು ಉಳಿದ ಮೂಲ ವೃಂದದ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ( CAR / DAR ) ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳು ಕಾಯಂ ಉದ್ಯೋಗಗಳಾಗಿದ್ದು ಆದಷ್ಟು ಬೇಗ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಜಿಯನ್ನ ಸಲ್ಲಿಸಬಹುದು ಹುದ್ದೆಗಳಿಗೆ ಸಂಬಂಧಿಸಿದ ಉದ್ಯೋಗದ ಸ್ಥಳ / ಆಯ್ಕೆ ವಿಧಾನ / ವೇತನ ಶ್ರೇಣಿ ಹೀಗೆ ಮುಂತಾದ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ
ನೇಮಕಾತಿ ಇಲಾಖೆಯ ಹೆಸರು :
ಕರ್ನಾಟಕ ಪೊಲೀಸ್ ಇಲಾಖೆ ನೇಮಕಾತಿ ( KSP )
ಹುದ್ದೆಯ ಹೆಸರು :
• ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ( CAR / DAR ) ಕರ್ನಾಟಕ 3064 ಹುದ್ದೆಗಳು
• ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ( CAR / DAR ) ಕಲ್ಯಾಣ ಕರ್ನಾಟಕ 420 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ :
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಒಟ್ಟು 3484 ಹುದ್ದೆಗಳ ನೇಮಕಾತಿ ನಡೆಯುತ್ತಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಹುದ್ದೆಗಳಿಗೆ ನಿಗದಿಪಡಿಸಿದ ಶೈಕ್ಷಣಿಕ ವಿದ್ಯಾರ್ಹತೆ :
ವಿದ್ಯಾರ್ಹತೆ :
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ ಅಥವಾ ಯಾವುದೇ ವಿದ್ಯಾಸಂಸ್ಥೆಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು.
ಕರ್ನಾಟಕ ರಾಜ್ಯ ಪೊಲೀಸ್ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ವಯಸ್ಸಿನ ಮಿತಿ :
ವಯೋಮಿತಿ :
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ಗರಿಷ್ಠ ವಯಸ್ಸು 25 ಮೀಸಲಾತಿ ಅನುಗುಣವಾಗಿ ವಯಸ್ಸಿನಲ್ಲಿ ಸಡಿಲಿಕೆ ಇರುತ್ತದೆ.
ವಯೋಮಿತಿಯಲ್ಲಿ ಸುಡಲಿಕೆ :
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ 05 ವರ್ಷ
ಪ್ರವರ್ಗ1 2a 2b 3a 3b ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ
ಅರ್ಜಿ ಶುಲ್ಕ :
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಅಭ್ಯರ್ಥಿಗಳಿಗೆ 200 ರೂಪಾಯಿ
ಸಾಮಾನ್ಯ, ಪ್ರವರ್ಗ 2a 2b 3a 3b ಅಭ್ಯರ್ಥಿಗಳಿಗೆ 400 ರೂಪಾಯಿ ಅರ್ಜಿ ಶುಲ್ಕ ನಿಗದಿಪಡಿಸಿದೆ.
ರಾಜ್ಯ ಪೊಲೀಸ್ ಇಲಾಖೆಯ ಹುದ್ದೆಗಳಿಗೆ ಸಂಬಂಧಿಸಿದ ಆಯ್ಕೆ ವಿಧಾನ ವಿವರಣೆ :
ಆಯ್ಕೆ ವಿಧಾನ :
ಕರ್ನಾಟಕ ಪೊಲೀಸ್ ಇಲಾಖೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಇಲಾಖೆಯ ನಿಯಮಗಳ ಅನುಸಾರ ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ಮತ್ತು ವೈದ್ಯಕೀಯ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ.
ವೇತನ ಶ್ರೇಣಿ:
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 23,500 ಇಂದ 47,650 ವೇತನ ಇರುತ್ತದೆ.
ಉದ್ಯೋಗದ ಸ್ಥಳ : ಕರ್ನಾಟಕ
ಉದ್ಯೋಗದ ವಿಧ :
ಈ ಹುದ್ದೆಗಳು ಖಾಯಂ ಉದ್ಯೋಗಗಳಾಗಿರುತ್ತವೆ
ಅರ್ಜಿ ಸಲ್ಲಿಸುವ ವಿಧಾನ :
ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಿ
ಅರ್ಜಿ ಸಲ್ಲಿಸವ ವಿಧಾನ :
• ಅಲ್ಲಿ ಕೇಳಲಾದ ಮಾಹಿತಿಯನ್ನು ಭರ್ತಿ ಮಾಡಿ ಅರ್ಜಿ ಸಲ್ಲಿಸಿದ ನಮೂನೆಯನ್ನು ಮುದ್ರಣ ಮಾಡಿಕೊಳ್ಳಿ
• ಅರ್ಜಿ ಶುಲ್ಕ ಪಾವತಿ ಮಾಡುವುದಕ್ಕಿಂತ ಮುಂಚೆ ನೀವು ನೀಡಿರುವ ಮಾಹಿತಿ ಸರಿ ಇದೆ ಎಂದು ಪರೀಕ್ಷೆ ಮಾಡಿಕೊಳ್ಳಿ.
• ಅರ್ಜಿ ಸಲಕೆಗೆ ಬೇಕಾಗುವ ಪ್ರಮುಖ ಶೈಕ್ಷಣಿಕ ವಿವರಗಳನ್ನು ಮತ್ತು ಇತ್ತೀಚಿನ ಭಾವಚಿತ್ರ ನಿಮ್ಮ ಸಹಿಯನ್ನ ಸ್ಕ್ಯಾನ್ ಮಾಡಿ ಇರಿಸಿಕೊಳ್ಳಿ.
• ಎಲ್ಲಾ ಮಾಹಿತಿ ಬರ್ತಿ, ಆದನಂತರ ಅರ್ಜಿ ಶುಲ್ಕ ಆನ್ಲೈನ್ ಅಥವಾ ಅಂಚೆ ಮೂಲಕ ಸಲ್ಲಿಸಿ.
• ಆನ್ಲೈನಲ್ಲಿ ಅರ್ಜಿ ಸಲ್ಲಿಕೆಯಲ್ಲಿ ಅಥವಾ ಅರ್ಜಿ ಭರ್ತಿ ಮಾಡುವ ಸಂದರ್ಭದಲ್ಲಿ ನಿಮಗೆ ಏನಾದರೂ ಸಮಸ್ಯೆಗಳು ಎದುರಾದರೆ ಇಲಾಖೆಯ ಸಹಾಯವಾಣಿ ಸಂಖ್ಯೆ 080-22943346 ಈ ಒಂದು ದೂರವಾಣಿಯ ಮೂಲಕ ನೀವು ಇನ್ನು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಅರ್ಜಿಯ ಶುಲ್ಕವನ್ನು ಅಭ್ಯರ್ಥಿಗಳು ಆನ್ಲೈನ್ ಬ್ಯಾಂಕ್ / ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ಅಂಚೆ ಮೂಲಕ ಸಹ ಸಲ್ಲಿಸಬಹುದಾಗಿದೆ
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭದ ದಿನಾಂಕ 19 ಸೆಪ್ಟೆಂಬರ್ 2022
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ 31 ಅಕ್ಟೋಬರ್ 2022
ಸೂಚನೆ :
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ಇಲಾಖೆಯ ಅಧಿಸೂಚನೆಯ ಪ್ರಕಾರ ಇರುತ್ತದೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ಅಥವಾ ಇಲಾಖೆ ಅಧಿಕೃತ ವೆಬ್ಸೈಟ್ ಮುಖಾಂತರ ಹೆಚ್ಚಿನ ಮಾಹಿತಿಯನ್ನು ಪಡೆದು ತದನಂತರದಲ್ಲಿ ಅರ್ಜಿಯನ್ನು ಸಲ್ಲಿಸಿ.
ಮುಖ್ಯ ಪದಗಳು:
ನಾವು ನೀಡಿರುವ ಈ ಉದ್ಯೋಗದ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಆದಷ್ಟು ಈ ಮಾಹಿತಿಯನ್ನು ನಿಮ್ಮ ಸ್ನೇಹಿತರ ವಾಟ್ಸಾಪ್ ಗ್ರೂಪ್ ಅಥವಾ ಫೇಸ್ಬುಕ್ ಗ್ರೂಪ್ ಮತ್ತು ಉದ್ಯೋಗ ಮಾಹಿತಿ ಬಯಸುವ ಅಭ್ಯರ್ಥಿಗಳಿಗೆ ಶೇರ್ ಮಾಡಿ.